News Kannada
Sunday, September 25 2022

ಕರ್ನಾಟಕ

 ಶಿವಮೊಗ್ಗಕ್ಕೆ ಭೇಟಿ ನೀಡಿದ ಕೇಂದ್ರ ಭೂಸಾರಿಗೆ ಸಚಿವರಾದ ನಿತಿನ್ ಗಡ್ಕರಿ - 1 min read

Photo Credit :

  ಶಿವಮೊಗ್ಗಕ್ಕೆ ಭೇಟಿ ನೀಡಿದ ಕೇಂದ್ರ ಭೂಸಾರಿಗೆ ಸಚಿವರಾದ ನಿತಿನ್ ಗಡ್ಕರಿ

ಶಿವಮೊಗ್ಗ: ಜನವರಿ 3ರಂದು  ಶಿವಮೊಗ್ಗಕ್ಕೆ ಭೇಟಿ ನೀಡಿ  ಅಲ್ಲಿನ  ರಸ್ತೆ ಕಾಮಗಾರಿ ಹಾಗೂ ಕಾರ್ಯವ್ಯಾಪ್ತಿಯ ಬಗ್ಗೆ ವಿಚಾರಿಸಿದ ಮತ್ತು ಸಮಸ್ಯೆಗಳನ್ನು ಆಲಿಸಿದ ಕೇಂದ್ರ ಭೂಸಾರಿಗೆ ಸಚಿವರಾದ ನಿತಿನ್ ಗಡ್ಕರಿ. 

ಈ ಸಂದರ್ಭದಲ್ಲಿ, ತುಮಕೂರಿನಿಂದ ಶಿವಮೊಗ್ಗ ರಾಷ್ಟ್ರೀಯ ಹೆದ್ದಾರಿ 206 ರ ನಾಲ್ಕನೇ ಪ್ಯಾಕೇಜ್ ಕಾಮಗಾರಿಯಾದ ಬೆಟ್ಟದಹಳ್ಳಿ ಇಂದ ಶಿವಮೊಗ್ಗ ವರೆಗಿನ 4 ಪತದ ರಸ್ತೆ ನಿರ್ಮಾಣ ಕಾಮಗಾರಿಯ ಭೂಸ್ವಾಧೀನಕ್ಕೆ ಅಗತ್ಯವಿರುವ ಹಣವನ್ನು ತಕ್ಷಣ ಬಿಡುಗಡೆ ಮಾಡುವುದರೊಂದಿಗೆ ಸದರಿ ಕಾಮಗಾರಿಗೆ ಸಂಬಂಧಿಸಿದ ಪರಿಷ್ಕೃತ ಅಂದಾಜಿಗೆ ಮಂಜೂರಾತಿಯನ್ನು ದೊರಕಿಸಿಕೊಟ್ಟು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರಕ್ಕೆ ತಕ್ಷಣ ಕಾಮಗಾರಿಯನ್ನು ಪ್ರಾರಂಭಿಸಲು ನಿರ್ದೇಶನ ನೀಡುವಂತೆ  ಅವರ ಬಳಿ ಕೋರಲಾಯಿತು.

  ಅಷ್ಟೇ ಅಲ್ಲದೆ, ಶಿವಮೊಗ್ಗ ನಗರಕ್ಕೆ ಅಗತ್ಯವಿರುವ ಹೊರವರ್ತುಲ ರಸ್ತೆಯ 15 ಕಿಲೋಮೀಟರ್ ರಸ್ತೆಯನ್ನು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಪ್ರಾಧಿಕಾರದಿಂದ ಹಾಗೂ ನಾಲ್ಕು ಕಿಲೋಮೀಟರ್ ರಸ್ತೆಯನ್ನು ರಾಷ್ಟ್ರೀಯ ಹೆದ್ದಾರಿ ಶಿವಮೊಗ್ಗ ವಿಭಾಗದಿಂದ ಬೈಪಾ ರಸ್ತೆಯನ್ನಾಗಿ ಆರಂಭಿಸಲು ಕ್ರಮ ವಹಿಸಲಾಗಿದ್ದು, ಬಾಕಿ ಉಳಿದ ಹೊರವರ್ತುಲ ರಸ್ತೆಯ 15 ಕಿಲೋಮೀಟರ್ ಉದ್ದದ ಭಾಗವನ್ನು ನಿರ್ಮಾಣ ಮಾಡಲು ಭೂಸ್ವಾದೀನ ವೆಚ್ಚದ ಶೇಕಡ 50ರಷ್ಟು ರಾಜ್ಯಸರ್ಕಾರ ನೀಡಿರುವುದರ ಬಗ್ಗೆ  ತಿಳಿಸಲಾಯಿತು.  ಅದರೊಂದಿಗೆ ಬಾಕಿ ಉಳಿದ ಭೂಸ್ವಾಧೀನದ ಅನುದಾನವನ್ನು ಕೇಂದ್ರ ಭೂಸಾರಿಗೆ ಮಂತ್ರಾಲಯದಿಂದ ದೊರಕಿಸಿಕೊಟ್ಟು ಕಾಮಗಾರಿಗೆ ಅಗತ್ಯವಿರುವ ಜೋಡಣೆ ನಕ್ಷೆಗೆ ತಕ್ಷಣ ಗುರುತಿಸಿಕೊಳ್ಳುವಂತೆಕೊಡುವಂತೆ ಸಚಿವರನ್ನು ಕೊರಲಾಯಿತು.

ಈ ಸಂದರ್ಭದಲ್ಲಿ, ಶಿವಮೊಗ್ಗ ರಾಷ್ಟ್ರೀಯ ಹೆದ್ದಾರಿಯ ಸಹಾಯಕ ಕಾರ್ಯಪಾಲಕ ಅಭಿಯಂತರ  ಪೀರ್ ಪಾಷಾರವರು ಸಹ ಉಪಸ್ಥಿತರಿದ್ದರು.

See also  ಭೂಸುಧಾರಣಾ ಕಾಯ್ದೆ ತಿದ್ದುಪಡಿಗೆ ವಿರೋಧ : ರೈತ ಸಂಘದಿಂದ ಪ್ರತಿಭಟನೆ
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published.

190
Ismail M Kutty

Read More Articles
Subscribe to our Brand New YouTube Channel

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು