News Kannada
Sunday, September 25 2022

ಕರ್ನಾಟಕ

ಹುಣಸೂರು ಸ್ಪೋಟ ಪ್ರಕರಣ; ಆಂಧ್ರಪ್ರದೇಶದಿಂದ ರವಾನೆಯಾದ ಗ್ರಾನೆಟ್ - 1 min read

Photo Credit :

ಹುಣಸೂರು ಸ್ಪೋಟ ಪ್ರಕರಣ; ಆಂಧ್ರಪ್ರದೇಶದಿಂದ ರವಾನೆಯಾದ ಗ್ರಾನೆಟ್

ಶಿವಮೊಗ್ಗ: ಹುಣಸೋಡು ಸ್ಪೋಟಕ್ಕೆ ಆಂಧ್ರಪ್ರದೇಶದ ಗಣೇಶ್ ಟ್ರೇಡರ್ಸ್ ನಿಂದ ಖರೀದಿಸಲಾಗಿದ್ದು ಇದರ ಮಾಲೀಕ ಶ್ರೀರಾಮುಲು ಎಂದು ಪತ್ತೆಹಚ್ಚಲಾಗಿದ್ದು , ಪ್ರಕರಣ ಸಂಬಂಧ 8 ಜನರನ್ನ ಬಂಧಿಸಲಾಗಿದೆ ಎಂದು ಎಸ್ಪಿ ಕೆ.ಎಂ.ಶಾಂತರಾಜು ತಿಳಿಸಿದರು.

ಕಚೇರಿಯಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿ ಹುಣಸೋಡು ಸ್ಪೋಟದ ಪ್ರಕರಣದಲ್ಲಿ 6 ಜನರ ತಂಡ ರಚಿಸಲಾಗಿತ್ತು. ತುOಗ ನಗರ ಪಿಐ ದೀಪಕ್, ಸೊರಬ ಸಿಪಿಐ ಮರಳಸಿದ್ದಪ್ಪ ಆಂಧ್ರದ ಅನಂತಪುರಕ್ಕೆ ತೆರಳಲಾಯಿತು. ಇವರು ಮುಂಬೈಗೆ ಓಡಿ ಹೋಗಿದ್ದರು.

ಮುಂಬೈನಲ್ಲಿ ಶ್ರೀರಾಮಲು ಮತ್ತು ಮಗನಾದ ಮಂಜುನಾಥ್ ಸಾಯಿ ಅವರನ್ನ‌ ಬಂಧಿಸಲಾಗಿದೆ. ಗೋದಾಮುವಿನಲ್ಲಿ ಸಂಗ್ರಹಕ್ಕೆ ಪರವಾನಗಿ ಪಡೆದಿದ್ದರೂ ಸಹ ಸಾಗಾಣಿಕೆಗೆ ಪರವಾನಗಿ ಇರಲಿಲ್ಲ. ಈ ಹಿನ್ಬಲೆಯಲ್ಲಿ ಈತನ ವಿರುದ್ದ ಆಂದ್ರದಲ್ಲಿಯೇ ಪ್ರಕರಣವನ್ನ ದಾಖಲಿಸಲಾಗಿದೆ.

ವಾಹನದಲ್ಲಿ ಅಕ್ರಮ ಸಾಗಾಟ ಮತ್ತು ಸಂಗ್ರಹ ಮಾಡಿದ್ದರ ಹಿನ್ನಲೆಯಲ್ಲಿ, ಸ್ಥಳೀಯ ಪೊಲೀಸ್ ನ ಸಹಾಯದಿಂದ ಆಂಧ್ರದಲ್ಲಿ ಪ್ರಕರಣವನ್ನು ದಾಖಲಿಸಲಾಗಿದೆ. ಡೆಪ್ಯೂಡಿ ಕಂಟ್ರೋಲರ್ ಆಫ್ ಎಕ್ಸಪ್ಲೋಸಿವ್ ವಿಶಾಖಪಟ್ಟಣದವರ ಸಹಾಯದಿಂದ ಅಕ್ರಮ ದಾಸ್ತಾನು ಬಗ್ಗೆ ಪರವಾನಗಿ ಉಲ್ಲಂಘನೆ ಆದ ಹಿನ್ಬಲೆಯಲ್ಲಿ ವಿಶಾಕಪಟ್ಟಣ ಇವರನ್ನ ಸಂಪರ್ಕಿಸಿ ಶ್ರೀರಾಮುಲು ಅವರ ಪರವಾನಗಿ ರದ್ದತಿಗೆ ಕೋರಲಾಗಿದೆ ಎಂದರು.

ಹುಣಸೋಡು ಸ್ಪೋಟದ ಜಮೀನು ಮಾಲೀಕರಾದ ಅವಿನಾಶ್ ಕುಲ್ಕರ್ಣಿ ಮತ್ತು ಶಂಕರ ಗೌಡರನ್ನ ಚನ್ನಗಿರಿಗೆ ತೆರಳಿ ಬಂಧಿಸಲಾಗಿದೆ. ಈ ಕಾರ್ಯಾಚರಣೆಯಲ್ಲಿ ಭದ್ರಾವತಿ ಸಿಪಿಐ ರಾಘವೇಂದ್ರ ಕಂಡಿಕೆ, ವಿನೋಬ ನಗರ ಪಿಎಸ್ಐ ಉಮೇಶ್ ಮತ್ತು ಸಿಬ್ಬಂದಿಗಳು ಜಗಳೂರು ಚನ್ನಗಿರಿಗೆ ತೆರಳಿ ಬಂಧಿಸಲಾಗಿದೆ ಎಂದರು.

ಈ ಹಿಂದೆ ಈ ಪ್ರಕರಣದಲ್ಲಿ ಸುಧಾಕರ್, ರಶೀದ್ ನರಸಿಂಹ ಹಾಗೂ ಅಹ್ಮದ್ ಬಂಧಿಸಲಾಗಿತ್ತು ಈಗ ಮತ್ತೆ 4 ರನ್ನ ಬಂಧಿಸಲಾಗಿದ್ದು ಒಟ್ಟು 8 ಜನ ಆರೋಪಿಗಳನ್ನಾಗಿ ಮಾಡಲಾಗಿದೆ. ಸದಪೋಟದಲ್ಲಿ ಮೃತ ಹೊಂದಿದ 6 ನೇ ಮೃತದೇಹ ಗುರುತಿಸಲಾಗುವುದು ಎಂದರು.

See also  ಬಿಜೆಪಿ ಅಭ್ಯರ್ಥಿಗಳ ಮನೆ ಮೇಲೂ ಐಟಿ ದಾಳಿ
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published.

190
Ismail M Kutty

Read More Articles
Subscribe to our Brand New YouTube Channel

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು