News Kannada
Sunday, October 02 2022

ಕರ್ನಾಟಕ

ಕಾಡಾನೆ ದಾಳಿಗೆ ಕೇರಳ ಮೂಲದ ಕಾರ್ಮಿಕ ಬಲಿ - 1 min read

Photo Credit :

ಕಾಡಾನೆ ದಾಳಿಗೆ ಕೇರಳ ಮೂಲದ ಕಾರ್ಮಿಕ ಬಲಿ

ಸರಗೂರು: ಶುಂಠಿಗೆ ನೀರು ಹಾಯಿಸುತ್ತಿದ್ದ ರೈತನ ಮೇಲೆ ಕಾಡಾನೆಯೊಂದು ಏಕಾಏಕಿ ದಾಳಿ ನಡೆಸಿ ತುಳಿದು ಸಾಯಿಸಿದ ಘಟನೆ ನುಗು ಜಲಾಶಯದ ಹಿನ್ನೀರಿನ ಸಮೀಪದ ಪ್ರದೇಶದಲ್ಲಿ ಭಾನುವಾರ ನಡೆದಿದೆ.

ಕೇರಳ ಮೂಲದ ವೈನಾಡು ಜಿಲ್ಲೆಯ ನಡೆವೆಯಲ್ ಗ್ರಾಮದ ಕೆ.ವಿ.ಜೊಯ್ ವರ್ಕಿ(48) ಕಾಡಾನೆ ತುಳಿತಕ್ಕೆ ಸಿಲುಕಿ ಸಾವನ್ನಪ್ಪಿದ ದುರ್ದೈವಿ. ಈ ಘಟನೆಯಿಂದ ಆಕ್ರೋಶಗೊಂಡ ಗ್ರಾಮಸ್ಥರು ದಡದಹಳ್ಳಿ ಮಠದ ಷಡಕ್ಷರಿ ಸ್ವಾಮೀಜಿ ನೇತೃತ್ವದಲ್ಲಿ ಕಾಡಂಚಿನ ಗ್ರಾಮಗಳಿಗೆ ಕಾಡು ಪ್ರಾಣಿಗಳ ಹಾವಳಿ ತಡೆಗೆ ಶಾಶ್ವತ ಪರಿಹಾರಕ್ಕಾಗಿ ಒತ್ತಾಯಿಸಿ ಪ್ರತಿಭಟಿಸಿದ್ದಾರೆ.

ತಾಲೂಕಿನ ನುಗು ಜಲಾಶಯದ ಹಿನ್ನೀರಿನ ಸಮೀಪದ ಹಳೇಹೆಗ್ಗುಡಿಲು ಗ್ರಾಮದ ನಾಗರಾಜು, ಜಯರಾಮ್, ಪ್ರಭು ಅವರಿಗೆ ಸೇರಿದ ಜಮೀನಿನಲ್ಲಿ ಕೇರಳ ಮೂಲದ ಕೃಷಿಕರು  ಶುಂಠಿ ಬೆಳೆ ಬೆಳೆದಿದ್ದರು. ಎಂದಿನಂತೆ ಭಾನುವಾರ ಬೆಳಗ್ಗೆ 7.45ರ ಸಮಯದಲ್ಲಿ ಮೃತ ಕೆ.ವಿ.ಜೊಯ್ ಬೆಳೆಗೆ ನೀರು ಹಾಯಿಸುತ್ತಿರುವಾಗ ಹಿಂಬದಿಯಿಂದ ಬಂದ ಕಾಡಾನೆ  ಏಕಾಏಕಿ ದಾಳಿ ನಡೆಸಿ, ತುಳಿದಿದ್ದಲ್ಲದೆ, ತನ್ನ ದಂತದಿಂದ ಹೊಟ್ಟೆಯ ಭಾಗಕ್ಕೆ ಚುಚ್ಚಿದೆ. ಪರಿಣಾಮ ಆತ ಸ್ಥಳದಲ್ಲಿಯೇ ಸಾವನ್ನಪ್ಪಿದ್ದಾನೆ.

ಘಟನೆಗೂ ಮುನ್ನ ಕಾಡಾನೆ ಬರುವಿಕೆಯನ್ನು ಗಮನಿಸಿದ ಪಕ್ಕದ ಜಮೀನಿನ ಕೆಲಸಗಾರರು ಜೋರಾಗಿ ಕೂಗಿಕೊಂಡರೂ ಕೆಲಸದಲ್ಲಿ ಮಗ್ನನಾಗಿದ್ದ ಜೊಯ್ ಆ ಬಗ್ಗೆ ಗಮನ ನೀಡಿಲ್ಲ ಹೀಗಾಗಿ ಆನೆ ಅವರ ಮೇಲೆ ದಾಳಿ ನಡೆಸಿ ಬಲಿ ಪಡೆದಿದೆ ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ.

ಈ ಘಟನೆಯಿಂದ ಆಕ್ರೋಶಗೊಂಡ  ಗ್ರಾಮಸ್ಥರು ದಡದಹಳ್ಳಿ ಮಠದ ಷಡಕ್ಷರಿ ಸ್ವಾಮೀಜಿ ನೇತೃತ್ವದಲ್ಲಿ ಪ್ರತಿಭಟನೆ ನಡೆಸಿದರು.  ಕಾಡಾನೆಗಳು ಮೊಳೆಯೂರು ವಲಯ ಅರಣ್ಯ ಪ್ರದೇಶದಿಂದ ಬರುತ್ತಿವೆ. ಇದಲ್ಲದೆ ಕಾಡಾನೆಯಿಂದಾಗಿ ಸಾಕಷ್ಟು ಅನಾಹುತಗಳಾಗುತ್ತಿವೆ. ಹೀಗಾಗಿ ಅಧಿಕಾರಿಗಳು ಶೀಘ್ರದಲ್ಲೇ ಕಾಡಾನೆ ಸೆರೆಹಿಡಿಯಬೇಕು. ಮೊಳೆಯೂರು ವಲಯ ಅರಣ್ಯ ಪ್ರದೇಶದಿಂದ ಚಿಕ್ಕದೇವಮ್ಮನ ಬೆಟ್ಟದವರೆಗೆ ರೈಲ್ವೆ ಕಂಬಿ ಅಳವಡಿಸಬೇಕು ಎಂದು ಆಗ್ರಹಿಸಿ ಪ್ರತಿಭಟಿಸಿದರು.

ಪ್ರತಿಭಟನೆಯ ನೇತೃತ್ವ ವಹಿಸಿದ್ದ  ದಡದಹಳ್ಳಿ ಮಠದ ಷಡಕ್ಷರಿ ಸ್ವಾಮೀಜಿ ಮಾತನಾಡಿ, ಕಾಡಂಚಿನ ಗ್ರಾಮಗಳಲ್ಲಿ ಕಾಡು ಪ್ರಾಣಿಗಳ ಹಾವಳಿ ಹೆಚ್ಚಿದ್ದು, ಸರಕಾರವಾಗಲೀ, ಇಲಾಖೆಯಾಗಲೀ ಪ್ರಾಣಿಗಳ ಹಾವಳಿ ತಡೆಗೆ ಶಾಶ್ವತ ಪರಿಹಾರ ಕಂಡುಕೊಳ್ಳುವಲ್ಲಿ ವಿಫಲವಾಗಿವೆ. ಮನುಷ್ಯನ ಪ್ರಾಣದಂತೆಯೇ ಪ್ರಾಣಿಗಳ ಜೀವವೂ ಅಷ್ಟೆ ಪ್ರಮುಖ. ಹೀಗಾಗಿ ಪ್ರಾಣಿಗಳಿಂದ ರೈತ, ಬೆಳೆಗಳಿಗೆ ಯಾವುದೇ ಹಾನಿಯಾಗದಂತೆ ಕಟ್ಟುನಿಟ್ಟಿನ ಕ್ರಮವಹಿಸಬೇಕು. ಜತೆಗೆ ಅರಣ್ಯ ಇಲಾಖಾಧಿಕಾರಿಗಳನ್ನು ಕೂಡಲೇ ವರ್ಗಾಯಿಸಬೇಕು ಎಂದು ಆಗ್ರಹಿಸಿದರು.

ಪ್ರತಿಭಟನಾ ಸ್ಥಳಕ್ಕೆ ಆಗಮಿಸಿದ ಬಂಡೀಪುರ ಹುಲಿ ಸಂರಕ್ಷಿತಾ ಪ್ರದೇಶದ ಉಪ ಅರಣ್ಯ ಸಂರಕ್ಷಣಾಧಿಕಾರಿ ಡಾ.ಪ್ರಶಾಂತ್ ಕುಮಾರ್, ಮೃತಪಟ್ಟವರಿಗೆ ಇಲಾಖೆಯಿಂದ ಧನಸಹಾಯ ನೀಡಲಾಗುವುದು. ಕಾಡಂಚಿನಲ್ಲಿ ಪ್ರಾಣಿ ಹಾವಳಿಗೆ ತೆಗೆಯಲಾದ ಕಂದಕಗಳ ಹೂಳೆತ್ತುವ ಕೆಲಸವನ್ನು ಶೀಘ್ರದಲ್ಲೇ ಕೈಗೆತ್ತಿಕೊಳ್ಳಲಾಗುವುದು. ರೈಲ್ವೆ ಕಂಬಿ ಅಳವಡಿಸಲು ಅನುದಾನಕ್ಕಾಗಿ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸುತ್ತೇನೆ ಎಂದು ಭರವಸೆ ನೀಡಿದರು. ಬಳಿಕ ಪ್ರತಿಭಟನಾಕಾರರು ಹಲವು ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಮನವಿ ಪತ್ರ ಸಲ್ಲಿಸಿ, ಪ್ರತಿಭಟನೆಯನ್ನು ಹಿಂಪಡೆದರು.

See also  ಕಾಣಿಕೆ ಹುಂಡಿ ಕದ್ದೊಯ್ದ ಕಳ್ಳರು

ಇದೇ ಸಂದರ್ಭ ರೂ 2 ಲಕ್ಷ ರೂ.ಚೆಕ್ ವಿತರಿಸಲಾಯಿತು. ನಂತರ ಮರಣೋತ್ತರ ಪರೀಕ್ಷೆಗೆ ನಡೆಸಲಾಯಿತು.

ಎಸಿಎಫ್ ರಂಗಸ್ವಾಮಿ, ಡಿವೈಎಸ್‍ಪಿ ರವಿಪ್ರಸಾದ್, ವಲಯರಣ್ಯಾಧಿಕಾರಿ ಮಧು, ಪುಟ್ಟರಾಜು, ಲಕ್ಷ್ಮಣ್, ಸರಗೂರು ಪೊಲೀಸ್ ಠಾಣೆ ಪಿಎಸ್‍ಐ ದಿವ್ಯಾ, ನೀಲಕಂಠ, ವಿಜಯಕುಮಾರ್, ಪಿ.ಎ.ದೇವಸ್ಯ ಹಾಗೂ ಹಳೇ ಹೆಗ್ಗುಡಿಲು ಗ್ರಾಮಸ್ಥರು ಇದ್ದರು.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published.

177
Lava Kumar

Read More Articles
Subscribe to our Brand New YouTube Channel

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು