News Kannada
Wednesday, October 05 2022

ಕರ್ನಾಟಕ

ಕಡಿಮೆ ವೆಚ್ಚದಲ್ಲಿ ಚಲಿಸುವ ವಿದ್ಯುತ್ ಚಾಲಿತ ಬೈಕ್ ತಯಾರಿಸಿದ 10ನೇ ತರಗತಿ ಹುಡುಗ - 1 min read

Photo Credit :

ಕಡಿಮೆ ವೆಚ್ಚದಲ್ಲಿ ಚಲಿಸುವ ವಿದ್ಯುತ್ ಚಾಲಿತ ಬೈಕ್ ತಯಾರಿಸಿದ 10ನೇ ತರಗತಿ ಹುಡುಗ

ಚಿಕ್ಕೋಡಿ: ಗಡಿ ಭಾಗದ ನಿಪ್ಪಾಣಿ ನಗರದ 10ನೇ ತರಗತಿ ಓದುತ್ತಿರುವ ವಿದ್ಯಾರ್ಥಿ ಓರ್ವ ಲಾಕಡೌನ್‌ ಸಮಯದಲ್ಲಿ ಇಲೆಕ್ಟ್ರಿಕಲ್‌ ಬೈಕ್‌ ತಯಾರಿಸಿ ಸಾಧನೆಯತ್ತ ಮುಖ ಮಾಡಿದ್ದಾನೆ.

ಹಳೆಯ ನಿರುಪಯುಕ್ತ ಬೈಕ್‌ಗಳ ಬಿಡಿ ಭಾಗಗಳನ್ನು ಉಪಯೋಗಿಸಿ ಅವುಗಳಿಗೆ ಲಿಡ್‌ ಆಯಸಿಡ್‌ 48 ವೋಲ್ಟೆಜ್‌ ಬ್ಯಾಟರಿ, 48 ವೋಲ್ಟೇಜ್‌ಮೋಟರ್‌, 750 ವ್ಯಾಟ್‌ ಸಾಮರ್ಥ್ಯದ ಮೋಟರ್‌ ಬಳಕೆ ಮಾಡಿ, ಮೋಟರ್‌ ಮತ್ತು ಬ್ಯಾಟರಿ ನಿಯಂತ್ರಣ ಯಂತ್ರ ಬಳಸಿ ಇಪ್ಪತ್ತೈದು ಸಾವಿರ ವೆಚ್ಚದಲ್ಲಿ ಬೈಕ್‌ ತಯಾರಿಸಿ ಸಾಧನೆ ಗೈದಿರುವ ಗಡಿ ಭಾಗದ ನಿಪ್ಪಾಣಿ ನಗರದ ನಿವಾಸಿ ವಾಸಂತಿ ಹಾಗೂ ಪ್ರಕಾಶ ಸುತಾರ ದಂಪತಿ ಪುತ್ರ ಪ್ರಥಮೇಶ.

ದಿನದಿಂದ ದಿನಕ್ಕೆ ಪೆಟ್ರೋಲ್‌ ಬೆಲೆ ಗಗನಕ್ಕೇರುತ್ತಿದ್ದು, ಇದರಿಂದ ವಾಹನ ಸವಾರರು ಹೈರಾಣಾಗುತ್ತಿದ್ದಾರೆ. ಈ ಸಂಕಷ್ಟದಿಂದ ಪಾರಾಗಲು ವಿದ್ಯುತ್‌ ಚಾಲಿತ ಬೈಕ್ ಗಳ ಅವಶ್ಯಕತೆಯಿದೆ ಎನ್ನುವುದು ಬಾಲಕ ಪ್ರಥಮೇಶ ಅವರ ಅಭಿಪ್ರಾಯ.

ಇನ್ನು ಈ ಇಲಕ್ಟ್ರಿಕಲ್‌ ಬೈಕ್‌ 4 ಗಂಟೆ ಫುಲ್‌ ಚಾರ್ಜಿಂಗ್‌ ಮಾಡಿದರೆ ಸುಮಾರು 35 ಕಿ.ಮಿ ಕ್ರಮಿಸುತ್ತದೆ. ಹಾಗೂ ಗಂಟೆಗೆ 40 ಕಿಮಿವೇಗದಲ್ಲಿ ಓಡುವ ಈ ಬೈಕ್‌ ನ ವಿಶೇಷ ಎಂದರೆ ರಿವರ್ಸ್‌ ಕೂಡ ಚಲಿಸುತ್ತದೆ. ಪ್ರಥಮೇಶನ ಸಾಧನೆಗೆ ಕುಟುಂಬಸ್ಥರು ಸಹಕಾರ ನೀಡಿದ್ದು, ಇವರ ತಂದೆ ಪ್ರಕಾಶ ಸುತಾರ ಕೂಡ ವೃತ್ತಿಯಲ್ಲಿ ಇಲೆಕ್ಟ್ರಿಕಲ್‌ ಕೆಲಸ ಮಾಡುತ್ತಾರೆ.

See also  ರಂಗೇರಿದ ಮಂಜೇಶ್ಚವರ ವಿಧಾನಸಭಾ ಉಪಚುನಾಚಣೆ
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published.

205
Subscribe to our Brand New YouTube Channel

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು