News Kannada
Sunday, September 25 2022

ಕರ್ನಾಟಕ

ಮೇಜರ್ ಡಾ. ರಾಘವರಿಗೆ ಸಿಎಂ ಪ್ರಶಂಸಾ ಪ್ರಶಸ್ತಿ - 1 min read

Photo Credit :

ಮೇಜರ್ ಡಾ. ರಾಘವರಿಗೆ ಸಿಎಂ ಪ್ರಶಂಸಾ ಪ್ರಶಸ್ತಿ

ಮಡಿಕೇರಿ: ಯುವ ಜನಾಂಗದಲ್ಲಿ ಶಿಸ್ತು, ರಾಷ್ಟ್ರೀಯ ಐಕ್ಯತಾ ಮನೋಭಾವ, ಸಮಾಜಮುಖಿ ನಾಯಕತ್ವ ಬೆಳೆಸುವ ಮೂಲಕ ಎನ್.ಸಿ.ಸಿಯ ಪ್ರತಿಷ್ಠೆಯನ್ನು ಹೆಚ್ಚಿಸುವಂತಹ ಸೇವೆ ಸಲ್ಲಿಸಿರುವುದನ್ನು ಪರಿಗಣಿಸಿ, ಅತ್ಯುತ್ತಮ ಎನ್‍ಸಿಸಿ ಅಧಿಕಾರಿಗಳಿಗೆ ಕೊಡಮಾಡುವ ಪ್ರತಿಷ್ಠಿತ ಮುಖ್ಯಮಂತ್ರಿ ಪ್ರಶಂಸಾ ಪ್ರಶಸ್ತಿ ಮತ್ತು ಪದಕವನ್ನು ಫೀಲ್ಡ್ ಮಾರ್ಷಲ್ ಕೆ.ಎಂ. ಕಾರ್ಯಪ್ಪ ಕಾಲೇಜಿನ ಎನ್.ಸಿ.ಸಿ ಅಧಿಕಾರಿ ಹಾಗೂ ಇತಿಹಾಸ ವಿಭಾಗದ ಮುಖ್ಯಸ್ಥರಾದ ಮೇಜರ್ ಡಾ. ರಾಘವ. ಬಿ ಅವರಿಗೆ ನೀಡಿ ಗೌರವಿಸಲಾಗಿದೆ.

ಇವರು 2020-21ನೇ ಸಾಲಿನ ಮುಂಖ್ಯಮಂತ್ರಿ ಪ್ರಶಂಸಾ ಪ್ರಶಸ್ತಿ ಮತ್ತು ಪದಕ ಪಡೆದ ಉಡುಪಿ, ದಕ್ಷಿಣ ಕನ್ನಡ, ಶಿವಮೊಗ್ಗ, ಕೊಡಗು ಜಿಲ್ಲೆಗಳನ್ನು ಒಳಗೊಂಡ ಮಂಗಳೂರು ವಿಭಾಗದ ಏಕೈಕ ಅಧಿಕಾರಿಯಾಗಿರುತ್ತಾರೆ.

ಇತ್ತೀಚೆಗೆ ನಡೆದ ಅಭಿನಂದನಾ ಸಮಾರಂಭದಲ್ಲಿ ಎನ್‍ಸಿಸಿ 19ನೇ ಕರ್ನಾಟಕ ಬೆಟಾಲಿಯನ್‍ನ ಕಮಾಂಡಿಂಗ್ ಆಫೀಸರ್ ಕರ್ನಲ್ ಚೇತನ್ ಧಿಮನ್ ಇವರು ಪ್ರಶಸ್ತಿ ಮತ್ತು ಪದಕವನ್ನು ಹಸ್ತಾಂತರಿಸಿದರು. ಕಾರ್ಯಕ್ರಮದಲ್ಲಿ ಆಡಳಿತಾಧಿಕಾರಿ ಲೆಫ್ಟಿನೆಂಟ್ ಕರ್ನಲ್ ನವದೀಪ್ ಸಿಂಗ್ ಬೇಡಿ, ಸುಬೇದಾರ್ ಮೇಜರ್ ಸುನಿಲ್ ಕುಮಾರ್ ಎಂ.ಕೆ ಹಾಗೂ ಇನ್ನಿತರರು ಉಪಸ್ಥಿತರಿದ್ದರು.

1996-97 ರ ಶೈಕ್ಷಣಿಕ ವರ್ಷದಿಂದ ಫೀಲ್ಡ್ ಮಾರ್ಷಲ್ ಕೆ.ಎಂ. ಕಾರ್ಯಪ್ಪ ಕಾಲೇಜಿನಲ್ಲಿ ಎನ್.ಸಿ.ಸಿ ಅಧಿಕಾರಿಯಾಗಿ ಕಾರ್ಯಭಾರ ವಹಿಸಿಕೊಂಡ ಮೇಜರ್ ಡಾ. ರಾಘವ್. ಬಿ ಇವರು, ತಮ್ಮ ಎರಡು ದಶಕಕ್ಕಿಂತಲೂ ಹೆಚ್ಚಿನ ಸೇವಾವಧಿಯಲ್ಲಿ ಹಲವಾರು ಎನ್.ಸಿ.ಸಿ ಕೆಡೆಟ್‍ಗಳಿಗೆ ಸೂಕ್ತ ತರಬೇತಿ ನೀಡಿ ಭಾರತೀಯ ಸೇನಾಪಡೆಯ ಕಮಿಷನ್ಡ್ ಆಫೀಸರ್ಸ್ ಸೇರಿದಂತೆ ವಿವಿಧ ಹುದ್ದೆಗಳಿಗೆ ನಿಯುಕ್ತಿಗೊಳ್ಳಲು ಮಾರ್ಗದರ್ಶನ ನೀಡಿರುತ್ತಾರೆ.

ಅಲ್ಲದೆ, ಇವರ ತರಬೇತಿ ಹಾಗೂ ಮಾರ್ಗದರ್ಶನದಿಂದಾಗಿ, ಬಹುತೇಕ ಪ್ರತಿ ವರ್ಷವೂ ದೆಹಲಿಯಲ್ಲಿ ನಡೆಯುವ ಗಣರಾಜ್ಯೋತ್ಸವ ಪಥಸಂಚಲನದಲ್ಲಿ ಕಾಲೇಜಿನಿಂದ ವಿದ್ಯಾರ್ಥಿಗಳು ಆಯ್ಕೆಯಾಗಿ ಕರ್ನಾಟಕ ಗೋವಾ  ಡೈರೆಕ್ಟರೇಟನ್ನು ಪ್ರತಿನಿಧಿಸುವ ಮೂಲಕ ರಾಜ್ಯ, ಕೊಡಗು ಜಿಲ್ಲೆ ಹಾಗೂ ಕಾಲೇಜಿಗೆ ಕೀರ್ತಿ ತಂದಿರುತ್ತಾರೆ.

ಇವರ ಸೇವೆಯನ್ನು ಪರಿಗಣಿಸಿ ಈ ಹಿಂದೆ ರಾಷ್ಟ್ರ, ರಾಜ್ಯಮಟ್ಟದ ಪ್ರಶಸ್ತಿಗಳನ್ನು ನೀಡಿ ಗೌರವಿಸಲಾಗಿರುತ್ತದೆ. ಇವರ ಸಾಧನೆಗೆ ಮೆಚ್ಚುಗೆ ವ್ಯಕ್ತಪಡಿಸಿ ಕಾಲೇಜಿನ ಬೋಧಕ ಬೋಧಕೇತರ ಸಿಬ್ಬಂದಿಗಳ ಪರವಾಗಿ ಪ್ರಾಂಶುಪಾಲರಾದ ಡಾ. ಚೌರೀರ ಜಗತ್ ತಿಮ್ಮಯ್ಯ ಅವರು ಪತ್ರಿಕಾ ಪ್ರಕಟಣೆಯ ಮೂಲಕ ಅಭಿನಂದನೆ ಸಲ್ಲಿಸಿರುತ್ತಾರೆ.

See also  ಮಂಡ್ಯದಲ್ಲಿ ಹಳ್ಳಿಗರ ನಿದ್ದೆಗೆಡಿಸಿದ ಕೊರೋನಾ
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published.

177
Lava Kumar

Read More Articles
Subscribe to our Brand New YouTube Channel

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು