News Kannada
Thursday, September 29 2022

ಕರ್ನಾಟಕ

ರಾಮಮಂದಿರ ನಿರ್ಮಾಣಕ್ಕೆ ದಾನ ಕೊಟ್ಟವರ ಮನೆ ಗುರುತು ಮಾಡಿಕೊಳ್ಳುತ್ತಿರುವ ಕಾರಣವೇನು: ಕುಮಾರ ಸ್ವಾಮಿ - 1 min read

Photo Credit :

ರಾಮಮಂದಿರ ನಿರ್ಮಾಣಕ್ಕೆ ದಾನ ಕೊಟ್ಟವರ ಮನೆ ಗುರುತು ಮಾಡಿಕೊಳ್ಳುತ್ತಿರುವ ಕಾರಣವೇನು: ಕುಮಾರ ಸ್ವಾಮಿ

ಶಿವಮೊಗ್ಗ: ನೆರೆ ಪರಿಸ್ಥಿತಿ, ಕೊರೋನ ಸಂಕಷ್ಟ, ಬಿಜೆಪಿ ಪಕ್ಷ ಅಧಿಕಾರಕ್ಕೆ ಬಂದ ನಂತರ ಶಿಕಾರಿಪುರಕ್ಕೆ ನೀರಾವರಿಗೆ ಏಕಾಏಕಿ ಹಣದ ಗಾತ್ರದ ಹೆಚ್ಚಳ, ಮೀಸಲಾತಿ, ಈಗಿನ ಆಹಾರ ಸಚಿವರು ಬಿಪಿಎಲ್ ಕಾರ್ಡ್ ಸರೆಂಡರ್ ಮಾಡುವ ಹೇಳಿಕೆ, ಕೃಷಿ ಕಾಯ್ದೆಗಳ ಕುರಿತು ಇಂದು  ಶಿವಮೊಗ್ಗದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಜೆಡಿಎಸ್ ರಾಜ್ಯಾಧ್ಯಕ್ಷ ಕುಮಾರ ಸ್ವಾಮಿ ಪ್ರಸ್ತಾಪಿಸಿದರು.

ಆರಂಭದಲ್ಲಿ ಸಿಎಂ ಕುಟುಂಬದ ವಿರುದ್ಧ ಮುಗಿದುಬಿದ್ದ ಮಾಜಿ ಸಿಎಂ ಕುಮಾರ ಸ್ವಾಮಿ, ರಾಜ್ಯದಲ್ಲಿರುವುದು ಯಡಿಯೂರಪ್ಪನವರ ಸರ್ಕಾರವಲ್ಲ ಅವರ ಕುಟುಂಬದ ಸರ್ಕಾರವೆಂದು ಆರೋಪಿಸಿದರು.

ನಾನು ಮುಖ್ಯಮಂತ್ರಿ ಆಗಿದ್ದಾಗ ಶಿಕಾರಿಪುರ ನೀರಾವರಿಗೆ 285 ಕೋಟಿ ಬಿಡುಗಡೆ ಮಾಡಿದ್ದೆ ಆದರೆ ಬಿಜೆಪಿ ಅಧಿಕಾರಕ್ಕೆ ಬಂದಾಗ ಹೇಗೆ 1000 ರೂ ಕೋಟಿಗೆ ಏರಿಸಿ ಯೋಜನೆಯ ಗಾತ್ರ ಹೆಚ್ಚಿಸಲಾಗಿದೆ. ಈ ಹೆಚ್ಚಳ ನಿಜವಾಗಿಯೂ ಉಪಯೋಗವಾಗುತ್ತಿದೆಯಾ.  ಅಷ್ಟೇ ಅಲ್ಲದೆ, ನೆರೆ ಪರಸ್ಥಿತಿಯಲ್ಲಿ ಮನೆ ಕಳೆದುಕೊಂಡ ಸಂತ್ರಸ್ತರಿಗೆ ತಲಾ 5 ಲಕ್ಷ ಎಂದು ಸಿಎಂ ಘೋಷಿಸಿದ್ದರು. 1 ಲಕ್ಷದ ಮೇಲೆ ಅನೇಕರಿಗೆ ಹಣ ಬಂದಿರುವುದು ನೋಡಲೇ ಇಲ್ಲ  ಎಂದು ದೂರಿದರು.  

ಸದನದಲ್ಲಿ ಬಜೆಟ್ ಚರ್ಚೆ ಆಗಬೇಕು. ಆದರೆ ಸದನದಲ್ಲಿ ಚರ್ಚೆ ಮಾಡದೆ ಸಚಿವ ಸಂಪುಟದಲ್ಲಿ ಚರ್ಚಿಸಿ ಹಣ ಬಿಡುಗಡೆ ಮಾಡಿಕೊಳ್ಳಲಾಗುತ್ತಿದೆ. ಸದನಕ್ಕೆ ಬೆಲೆ ಇಲ್ಲದಂತಾಗಿದೆ ಎಂದು ಬೇಸರ ವ್ಯಕ್ತಪಡಿಸಿದರು.

ರಾಮ ಮಂದಿರಕ್ಕೆ ನಡೆಯುತ್ತಿರುವ ನಿಧಿ ಸಂಗ್ರಹದ ಅಭಿಯಾನದಲ್ಲಿ ದಾನಕೊಟ್ಟ ಮನೆಗಳಿಗೆ ಮಾರ್ಕ್ ಮಾಡುತ್ತಿದ್ದಾರೆ. ಯಾವ ಕಾರಣಕ್ಕೆ ಮಾರ್ಕ್ ಮಾಡುತ್ತಿದ್ದಾರೆ ಗೊತ್ತಿಲ್ಲ. ಒಳ್ಳೆಯದಕ್ಕೋ ಕೆಟ್ಟುದ್ದಕ್ಕೋ ಗೊತ್ತಿಲ್ಲ. ಆದರೆ ಇದು ನಾಜಿ ಸಂಸ್ಕೃತಿಯ ಸಂಕೇತ. ಮಾತನಾಡುವ ಹಕ್ಕನ್ನ ಕಸಿದುಕೊಳ್ಳಲಾಗಿದೆ. ಪತ್ರಕರ್ತರು ಸರ್ಕಾರದ ವಿರುದ್ದ ಬರೆದರೆ ಸಮಸ್ಯೆ ಎದುರಿಸುವ ಪರಿಸ್ಥಿತಿ ನಿರ್ಮಾಣವಾಗಿದೆ ಎಂದರು.

ಇನ್ನು ಮಧು ಬಂಗಾರಪ್ಪ ಪಕ್ಷ ತೊರೆದು ಕಾಂಗ್ರೆಸ್ ಸೇರುತ್ತಿರುವುದು ಬಗ್ಗೆ ಮಾತನಾಡಿದ ಅವರು, ಮಧು ಜೆಡಿಎಸ್ ನ ವೀಕ್ಷಕರ ಪಟ್ಟಿಯಲ್ಲಿ ಕೈ ಬಿಟ್ಟಿಲ್ಲ. ಅವರು ಎಲ್ಲೂ ಜೆಡಿಎಸ್ ಬಿಟ್ಟು ಹೋಗ್ತೀನಿ ಎಂದು ಹೇಳಿಲ್ಲ. ಅವರು ಈಗಲೂ ನನ್ನ ಸಹೋದರನೇ ಎಂದರು. ಫೆ.28 ಕ್ಕೆ ಪದಾಧಿಕಾರಿಗಳ ಆಯ್ಕೆ‌ಆಗಲಿದೆ ಎಂದರು.

 

See also  ರೆಸಾರ್ಟ್ ರಾಜಕಾರಣ : ಬಿಜೆಪಿ ವಿರುದ್ಧ ಕೊಡಗು ಕಾಂಗ್ರೆಸ್ ಪ್ರತಿಭಟನೆ
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published.

190
Ismail M Kutty

Read More Articles
Subscribe to our Brand New YouTube Channel

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು