News Kannada
Tuesday, December 06 2022

ಕರ್ನಾಟಕ

ಉಗ್ರರೊಂದಿಗೆ ಸಂಪರ್ಕದ ಶಂಕೆ ತೀರ್ಥಹಳ್ಳಿಯ ಇಬ್ಬರು ಯುವಕರ ಮನೆಗೆ ಭೇಟಿ ನೀಡಿದ ಎನ್ ಐಎ ತಂಡ

Photo Credit :

ಉಗ್ರರೊಂದಿಗೆ ಸಂಪರ್ಕದ ಶಂಕೆ ತೀರ್ಥಹಳ್ಳಿಯ ಇಬ್ಬರು ಯುವಕರ ಮನೆಗೆ ಭೇಟಿ ನೀಡಿದ ಎನ್ ಐಎ ತಂಡ

ತೀರ್ಥಹಳ್ಳಿ: ಎನ್ ಐಎ ಅಧಿಕಾರಿಗಳ ತಂಡ ತಲೆಮರೆಸಿಕೊಂಡಿರುವ ಇಬ್ಬರು ಯುವಕರ ಮನೆಗೆ ಭೇಟಿ‌ ನೀಡಿ ವಿಚಾರಣೆ ನಡೆಸಿದ್ದು, ಅವರಿಗೆ ಉಗ್ರರೊಂದಿಗೆ ಸಂಪರ್ಕ ಇದೆ ಎಂದು ಶಂಕಿಸಲಾಗಿದೆ.

ಈ ಹಿಂದೆ ಸ್ಯಾಟಲೈಟ್ ಫೋನ್ ಬಳಕೆಯ ಹಿನ್ನೆಲೆಯಲ್ಲಿ ಕಳೆದ ವರ್ಷ ಮಾರ್ಚ್ ನಲ್ಲಿ ತೀರ್ಥಹಳ್ಳಿ ತಾಲೂಕಿನಾದ್ಯಂತ ಎನ್ ಐಎ ಅಧಿಕಾರಿಗಳು ಕೂಬಿಂಗ್ ನಡೆಸಿದ್ದ‌ರು. ಹಾಗೂ ಅದೇ ವೇಳೆ ತೀರ್ಥಹಳ್ಳಿಯ ಇಬ್ಬರು ಯುವಕರು ಇದರಲ್ಲಿ ಶಾಮೀಲಾಗಿದ್ದಾರೆ ಎಂದು ದೃಢಪಟ್ಟಿತ್ತು. ಆದರೆ ಆ ಸಂದರ್ಭದಲ್ಲಿ ಅವರು ನಾಪತ್ತೆಯಾಗಿದ್ದರು.

ನಂತರ ಕಳೆದ‌ ವರ್ಷ ಮಾರ್ಚ್ 19 ರಂದು ಎನ್ ಐ ಎ ಅಧಿಕಾರಿಗಳು ತೀರ್ಥಹಳ್ಳಿಯ ಯುವಕರ ಮನೆಗೆ ಬಂದು ವಿಚಾರಣೆ ನಡೆಸಿದ್ದರು. ಇದೀಗ ಹೆಚ್ಚಿನ ತನಿಖೆಗಾಗಿ ಮತ್ತೆ ಯುವಕರ ಮನೆಗೆ ಭೇಟಿ ನೀಡಿರುವ ಎನ್ ಐ ಎ ಅಧಿಕಾರಿಗಳು ತಲೆಮರೆಸಿಕೊಂಡಿರುವ ಯುವಕರು ತಮ್ಮ ಕುಟುಂಬದೊಂದಿಗೆ ಸಂಪರ್ಕ ಸಾಧಿಸಿದ್ದಾರೆಯೇ ಎಂದು ತನಿಖೆಗೆ ನಡೆಸಿದ್ದಾರೆ. ನಾಲ್ವರು ಎನ್ ಐಎ ಅಧಿಕಾರಿಗಳ ತಂಡದಿಂದ ತಲೆಮರಿಸಿಕೊಂಡ ಯುವಕರ ಕುಟುಂಬದವರ ತನಿಖೆ ನಡೆದಿದ್ದು, ಸ್ಥಳೀಯ ಪೊಲೀಸರ ಸಹಕಾರ ಪಡೆದುಕೊಂಡಿದ್ದಾರೆ.

See also  ಪೊಲೀಸ್ ಬಂದೋಬಸ್ತಿನೊಂದಿಗೆ ಟಿಪ್ಪು ಜಯಂತಿ: ಉಸ್ತುವಾರಿ ಸಚಿವ ಸಾ.ರಾ.ಮಹೇಶ್
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published.

205

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು