News Kannada
Sunday, December 04 2022

ಕರ್ನಾಟಕ

ಪೌರ ಕಾರ್ಮಿಕ ನೇತ್ರಾವತಿ ಕೊಲೆ ಪ್ರಕರಣ; ಆರೋಪಿಗಳನ್ನು ಬಂಧಿಸಿದ ಪೊಲೀಸರು

Photo Credit :

ಪೌರ ಕಾರ್ಮಿಕ ನೇತ್ರಾವತಿ ಕೊಲೆ ಪ್ರಕರಣ; ಆರೋಪಿಗಳನ್ನು ಬಂಧಿಸಿದ ಪೊಲೀಸರು

ಶಿವಮೊಗ್ಗ: ತಾಲೂಕಿನ ದೇವಂಗಿ ಸಮೀಪದ ಜಟ್ಟಿನಮಕ್ಕಿ ಬಳಿ ತೀರ್ಥಹಳ್ಳಿ ಪಟ್ಟಣ ಪಂಚಾಯತ್ ಪೌರ ಕಾರ್ಮಿಕಳಾಗಿದ್ದ ನೇತ್ರಾವತಿ ಕೊಲೆ ಪ್ರಕರಣದಲ್ಲಿ ಭಾಗಿಯಾಗಿದ್ದ ಆರೋಪಿಗಳನ್ನು ಬಂಧಿಸುವಲ್ಲಿ ತೀರ್ಥಹಳ್ಳಿ ಪೊಲೀಸರು ಯಶಸ್ವಿಯಾಗಿದ್ದಾರೆ.

ಮೂಡಿಗೆರೆ ಮೂಲದ ಸಂದೀಪ್ ಪ್ರಮುಖ ಆರೋಪಿಯಾಗಿದ್ದು, ನೇತ್ರಾವತಿ ತಲೆಗೆ ರಾಡಿನಿಂದ ಹೊಡೆದು ಕೊಲೆ ಮಾಡಿದ್ದ ಎನ್ನಲಾಗಿದೆ. ಈತನನ್ನ ತೆಲಂಗಾಣದ ಮಲ್ಲಪಲ್ಲಿ ಎಂಬಲ್ಲಿ ಸೆರೆ ಹಿಡಯಲಾಗಿದೆ.

ನೇತ್ರಾವತಿ ಪ್ರಿಯಕರ ರವೀಶ್ ಕಮ್ಮರಡಿಯನ್ನು ಈಗಾಗಲೇ ಬಂಧಿಸಿ ಜೈಲಿಗೆ ಅಟ್ಟಲಾಗಿದೆ. ಕಮ್ಮರಡಿಯಲ್ಲಿ ಮೊಬೈಲ್ ಅಂಗಡಿ ಮಾಡಿಕೊಂಡಿದ್ದ ಚಿಪ್ಪಳಕಟ್ಟೆ ಆದರ್ಶ ಎಂಬಾತನನ್ನು ಬಂಧಿಸಿ ಜೈಲಿಗೆ ಕಳುಹಿಸಲಾಗಿದೆ.

ನೇತ್ರಾವತಿ ತನ್ನನ್ನು ಮದುವೆ ಆಗುವಂತೆ ರವೀಶ್ ಬಳಿ ಒತ್ತಾಯ ಮಾಡಿದ್ದಾಳೆ. ಇದರಿಂದ ತಪ್ಪಿಸಿಕೊಳ್ಳಲು ರವೀಶ್ ಮತ್ತು ಸ್ನೇಹಿತರ ಪ್ಲಾನ್ ಮಾಡಿದ್ದರು. ಬೆಂಗಳೂರಿಗೆ ಹೋಗಿ ಮದುವೆಯಾಗೋಣ ಎಂದು ಕರೆಸಿ ಗಡಿಕಲ್ ಬಳಿಯ ಜಟ್ಟಿನಮಕ್ಕಿಯಲ್ಲಿ ರವೀಶ್ ತನ್ನ ಕಾರಿನಲ್ಲಿ ನೇತ್ರಾವತಿ ಇದ್ದ ಬೈಕಿಗೆ ಡಿಕ್ಕಿ ಹೊಡೆಸಿದ್ದಾನೆ.

ಬಳಿಕ ಸಂದೀಪ್ ರಾಡಿನಿಂದ ತಲೆಗೆ ಹೊಡೆದಿದ್ದು, ಮಧ್ಯ ರಾತ್ರಿ ಘಟನೆ ಬಳಿಕ ಆರೋಪಿಗಳು ಪರಾರಿಯಾಗಿದ್ದರು. ಕೃತ್ಯಕ್ಕೆ ಎರಡು ಕಾರು ಬಳಸಿದ್ದರು.
ಸಂದೀಪ್ ಆಕೆ ಬಳಿಯಿದ್ದ ಬ್ರಾಸ್ಲೈಟ್, ಚಿನ್ನದ ಸರ ಕದ್ದಿದ್ದ. ರಾಡು ಕುದುರೆಗುಂಡಿ ಬಳಿ ಸೇತುವೆಯಲ್ಲಿ ಹಾಕಿದ್ದರು ಎಂದು ಮೂಲಗಳು ತಿಳಿಸಿವೆ.

ತೀರ್ಥಹಳ್ಳಿ ಡಿವೈಎಸ್ಪಿ ಸಂತೋಷ್ ಕುಮಾರ್, ಸಿಪಿಐ ಸಂತೋಷ ಕುಮಾರ್, ಎಸೈ ಯಲ್ಲಪ್ಪ, ಅಪರಾಧ ವಿಭಾಗದ ಎಸೈ ಸುಷ್ಮಾ, ಸಿಬ್ಬಂದಿಗಳಾದ ಜನಾರ್ಧನ್, ಸುಧಾಕರ್, ಕುಮಾರ್, ಸುರಭಿ ಮತ್ತು ಇತರರು ಈ ಕಾರ್ಯಾಚರಣೆಯಲ್ಲಿ ಭಾಗಿಯಾಗಿದ್ದರು. ಈ ಪ್ರಕರಣ ಪತ್ತೆ ಹಚ್ಚಿದ ಪೊಲೀಸ್ ಅಧಿಕಾರಿಗಳು ಮತ್ತು ಸಿಬ್ಬಂದಿಗೆ ಜನತೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

See also  ಕೊಡಗಿನಲ್ಲಿ ಮುಂದುವರೆದ ವರುಣನ ಅರ್ಭಟ
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published.

190
Ismail M Kutty

Read More Articles

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು