ಶಿವಮೊಗ್ಗ: ಅಲ್ಲಹೋ ಅಕ್ಬರ್, ಪಾಕಿಸ್ತಾನ್ ಜಿಂದಾಬಾದ್ ಎಂದು ಹೇಳಿದ್ದರೆ ಕಾಂಗ್ರೆಸ್ ರಿಗೆ ಖುಷಿಯಾಗುತ್ತಿತ್ತಾ ಎಂದು ಸಚಿವ ಈಶ್ವರಪ್ಪ ಪ್ರಶ್ನಿಸಿದ್ದಾರೆ.
ಪಿಎಂಡ್ ಟಿ ಕಾಲೋನಿಗೆ ಅಂಟಿಕೊಂಡಿರುವ ಬಡಾವಣೆಗೆ ಭೇಟಿ ನೀಡಿದ ಸಂದರ್ಭದಲ್ಲಿ ಮಾಧ್ಯಮದವರ ಜೊತೆ ಮಾತನಾಡಿ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.
ಭದ್ರಾವತಿಯಲ್ಲಿ ಕಬಡ್ಡಿ ಮ್ಯಾಚ್ ನ ವೇಳೆ ನಡೆದ ಘಟನೆಯಲ್ಲಿ ಜೈಶ್ರೀರಾಮ್ ಎಂದು ಕೂಗಿದಕ್ಕೆ ಕಾಂಗ್ರೆಸ್ ಈ ರೀತಿ ಸಮಾವೇಶ ನಡೆಸುತ್ತಿದೆ. ಘಟಾನುಗಟಿಗಳು ಭಾಗವಹಿಸುತ್ತಿದ್ದಾರೆ.
ಆದರೆ ಸಮಾವೇಶ ನಡೆಸುವ ಮುಂಚೆ ಈ ನಾಯಕರುಗಳು ಭದ್ರಾವತಿಗೆ ಒಮ್ಮೆ ಭೇಟಿಯಾಗಿ ಪಂದ್ಯಾವಳಿಯಲ್ಲಿ ಭಾಗವಹಿಸುವವರನ್ನ ಮಾತಾಡಿಸಲಿ. ಪಂದ್ಯಾವಳಿಯಲ್ಲಿ ರನರ್‌ಆಗಿದ್ದಕ್ಕೆ ತಂಡವೊಂದು ಭಾರತ್ ಮಾತಾ ಕಿ ಜೈ, ಜೈ ಶ್ರೀರಾಮ್ ಎಂದು ಕೂಗಿದ್ದಾರೆ.
ಈ ಘೋಷಣೆ ಯಾಕೆ ಶಾಸಕ ಸಂಗಮೇಶ್ವರ್ ಮತ್ತು ಅವರ ಪುತ್ರರಿಗೆ ಹಾಗೂ ಬೆಂಬಲಿಗರಿಗೆ ನೋವಾಯಿತೋ ಗೊತ್ತಿಲ್ಲ. ಹಾಗಾದರೆ ಪಾಕಿಸ್ತಾನ್ ಜಿಂದಾಬಾದ್ ಅಥವಾ ಅಲ್ಲಾಹೋ ಅಕ್ಬರ್ ಎಂದು ಹೇಳಿದರೆ ಶಾಸಕ ಸಂಗಮೇಶ್ವರ್ ಸಂತೋಷ ಪಡುತ್ತಿದ್ದರಾ ಎಂದು ಪ್ರಶ್ನಿಸಿದ್ದಾರೆ.
ಭದ್ರಾವತಿ ಘಟನೆ ಕುರಿತು ಕಾಂಗ್ರೆಸ್ ಸ್ಪರ್ಧಾ ಮನೋಭಾವದಲ್ಲಿ ತೆಗೆದುಕೊಳ್ಳಬೇಕಿತ್ತು. ಅದನ್ನ ಬಿಟ್ಟು ಸಮಾವೇಶ ನಡೆಸುತ್ತಿರುವುದು ಸರಿ ಅಲ್ಲ. ದೇಶದ ಜನ, ರಾಜ್ಯದ ಜನ ಅದರಲ್ಲೂ ಭದ್ರಾವತಿ ಜನ ನಮ್ಮನ್ನ ಗಮನಿಸುತ್ತಿದ್ದಾರೆ. ಕಾಂಗ್ರೆಸ್ ಇದನ್ನೇ ಮುಂದುವರೆಸಿಕೊಂಡು ಹೋದರೆ ಅಧೋಗತಿಗೆ ಇಳಿಯುವುದರಲ್ಲಿ ಅನುಮಾನವಿಲ್ಲವೆಂದರು.
ಗೆದ್ದ ತಂಡಗಳು ಸಂಭ್ರಮಾಚರಣೆ ಪಡೋದು ಸಹಜ. ಘೋಷಣೆಗಳನ್ನ ಕೂಗೋದು ಸಹಜ. ಆದರೆ ಇಷ್ಟು ದೊಡ್ಡಮಟ್ಟಕ್ಕೆ ಸಂಗಮೇಶ್ವರ್ ನಡೆಸುತ್ತಿರುವುದು ಸರಿಯಲ್ಲವೆಂದರು.