News Kannada
Friday, December 02 2022

ಕರ್ನಾಟಕ

ಮಳೆ ನೀರಿನ ಸಂರಕ್ಷಣೆ ಮಾಡುವುದು ಅಗತ್ಯ: ಶಂಕರೇಗೌಡ

Photo Credit :

ಮಳೆ ನೀರಿನ ಸಂರಕ್ಷಣೆ ಮಾಡುವುದು ಅಗತ್ಯ: ಶಂಕರೇಗೌಡ

ಮಂಡ್ಯ: ಪ್ರಸ್ತುತ ದಿನಗಳಲ್ಲಿ ಜಲಸಂಪತ್ತು ಸಂರಕ್ಷಣೆಗೊಳ್ಳಬೇಕಿದೆ, ಮಳೆನೀರು ಬಿದ್ದ ಸ್ಥಳದಲ್ಲೇ ಉಪಯೋಗಕ್ಕೆ ಬರಬೇಕಿದೆ ಎಂದು ಕಾವೇರಿ ನೀರಾವರಿ ನಿಗಮದ ದಕ್ಷಿಣ ವಲಯದ ಮುಖ್ಯ ಇಂಜಿನಿಯರ್ ಶಂಕರೇಗೌಡ  ಹೇಳಿದರು.

ನಗರದಲ್ಲಿರುವ ಕಾವೇರಿ ನೀರಾವರಿ ನಿಗಮದ ಸಭಾಂಗಣದಲ್ಲಿ ಭಾರತ ಸರ್ಕಾರ ಯುವಕಾರ್ಯ ಹಾಗೂ ಕ್ರೀಡಾ ಸಚಿವಾಲಯ, ನೆಹರು ಯುವಕೇಂದ್ರ ಜಿಲ್ಲಾ ಶಾಖೆ, ಜಿಲ್ಲೆಯ ಯುವ ಸಂಘ ಸಂಸ್ಥೆಗಳು ವತಿಯಿಂದ ಕಾವೇರಿನೀರಾವರಿ ನಿಗಮ ನಿಯಮಿತ ಸಹಕಾರದಲ್ಲಿ ಆಯೋಜಿಸಿದ್ದ ಮಳೆನೀರು ಸಂಗ್ರಹಣೆ ಕುರಿತು ಆನ್‍ಲೈನ್ ವೆಬಿನರ್ ಮೂಲಕ ಜಾಗೃತಿ ಮೂಡಿಸುವ ಕಾರ್ಯಾಗಾರ ಹಾಗೂ ಉಪನ್ಯಾಸ-ಪಿಪಿಟಿ-ಜಲಪ್ರತಿಜ್ಞೆ- ಪೋಸ್ಟರ್ ಬಿಡುಗಡೆ ಕಾರ್ಯಕ್ರಮವನ್ನು ಗಣ್ಯರೊಂದಿಗೆ ಉದ್ಘಾಟಿಸಿ ಅವರು ಮಾತನಾಡಿದರು.

ಜಲಸಂಪತ್ತು ಕೃಷಿ ಮತ್ತು ಜೀವನೋಪಯೋಗಕ್ಕೆ ಅತ್ಯವಶ್ಯಕವಾಗಿದೆ, ಪ್ರಕೃತಿಯಿಂದ ಸುರಿಯುವ ಮಳೆನೀರು ಸ್ಥಳದಲ್ಲೇ ಮರುಬಳಕೆಯಾಗುವ ಕಾರ್ಯ ನಿರಂತರವಾಗಿ ಸಾಗಬೇಕಿದೆ, ಅಂತರ್ಜಲ ಹೆಚ್ಚಳ ಮತ್ತು ದಿನನಿತ್ಯಬಳಕೆಗೆ ಮಳೆನೀರನ್ನು ಬಳಸಿಕೊಳ್ಳುವ ಪರಿಜ್ಞಾನ ಹೆಚ್ಚಾಗಬೇಕಿದೆ ಎಂದು ನುಡಿದರು.

ನೀರಿನ ಅಭಾವ ಹೆಚ್ಚಿರುವ ಸ್ಥಳಗಳಲ್ಲಿ ಮಳೆ ನೀರನ್ನು ಹಿಡಿದಿರುವ ವ್ಯವಸ್ಥೆ ಮತ್ತು ಅಂತರ್ಜಲ ವೃದ್ಧಿಗೆ ರೈತರು, ನೀರು ಬಳಕೆದಾರರು, ಗೃಹಪಯೋಗಿದಾರರು ಮುಂದಾಗಬೇಕಿದೆ, ಮಳೆನೀರನ್ನು ಸದುಪಯೋಗಪಡಿಸಿಕೊಳ್ಳುವ ನಿಟ್ಟಿನಲ್ಲಿ ಮುಂದಾಗಬೇಕಿದೆ, ಆಗ ನೀರಿನ ಅಭಾವ ಕಡಿಮೆಯಾಗುತ್ತದೆ ಎಂದರು.

ಬಳಿಕ ಮಾತನಾಡಿದ ಪಿಇಎಸ್ ಇಂಜಿನಿಯರಿಂಗ್ ಕಾಲೇಜಿನ ಪ್ರಾಧ್ಯಾಪಕ ಡಾ.ಪ್ರಸನ್ನಕುಮಾರ್ ಅವರು, ನಾವು ನೀರನ್ನು ಉಚಿತ ಅಥವಾ ಅಗ್ಗವಾಗಿ ದೊರಕುವ ಸಂಪನ್ಮೂಲವೆಂದು ಪರಿಗಣಿಸಿ ಅಮೂಲ್ಯ ನೀರನ್ನು ಪೋಲು ಮಾಡುತ್ತಾ ಹೋದರೆ ಜಲಸಂಪತ್ತಿಗೆ ಅಭಾವ ಬರಬಹುದು ಎಂದು ನುಡಿದರು.

ಸುರಿವ ಮಳೆ ನೀರನ್ನು ಹರಿದುಹೊಗದಂತೆ ತಡೆದು ಹಿಂಗುಗುಂಡಿಗಳಲ್ಲಿ ಶೇಖರಿಸಬೇಕು, ಮಳೆ ನೀರಿನ ರಭಸಕ್ಕೆ ಫಲವತ್ತತೆಯ ಭೂಮಿ ಸವಕಳಿಯಾಗುತ್ತಿದೆ, ಬಂಜರು ಭೂಮಿಯಿಂದ ಬೆಳೆಬೆಳೆಯಲು ಸಾಧ್ಯವಾಗದು, ಅಂತರ್ಜಲ ಹೆಚ್ಚಳಕ್ಕೆ ಮಳೆನೀರು ಕೊಯ್ಲು ಅತ್ಯವಶ್ಯಕ ಎಂದು ತಿಳಿಸಿದರು. ಮುಂದಿನ ದಿನಗಳಲ್ಲಿ ಮಳೆನೀರು ಅತ್ಯವಶ್ಯಕವಾಗುತ್ತದೆ, ಈಗಿನಿಂದಲೇ ಮಳೆನೀರು ಬಳಕೆ ಮಾಡುವ ವಿಧಾನ ಮತ್ತು ತಂತ್ರಜ್ಞಾನವನ್ನು ಕೃಷಿಕರು, ನಾಗರೀಕರು ಮತ್ತು ಉದ್ಯಮಿಗಳು ಮುಂದಾಗಬೇಕಿದೆ ಎಂದು ಸಲಹೆ ನೀಡಿದರು.

ಇದೇ ಸಂದರ್ಭದಲ್ಲಿ ಮಳೆನೀರು ಸಂಗ್ರಹಣೆ ಮತ್ತು ಸಂರಕ್ಷಣೆ ಮಾಡುವ ಜಲಪ್ರತಿಜ್ಞೆಯನ್ನು ಗಣ್ಯರು ಮತ್ತು ಸಂಘಸಂಸ್ಥೆಗಳ ಪದಾಧಿಕಾರಿಗಳು ಸ್ವೀಕರಿಸಿದರು. ಆನ್‍ಲೈನ್ ಮೂಲಕ ಜಲ ಸಂರಕ್ಷಣೆ ಕುರಿತ ಉಪನ್ಯಾಸ ನಡೆಯಿತು.

ಕಾರ್ಯಕ್ರಮದಲ್ಲಿ ಕಾವೇರಿ ನೀರಾವರಿ ನಿಗಮದ ಅಧೀಕ್ಷಕ ಅಭಿಯಂತರರಾದ ವಿಜಯ್‍ಕುಮಾರ್, ಕಾರ್ಯಪಾಲಕ ಅಭಿಯಂತರರಾದ ಹೊನ್ನರಾಜು, ನೇಗಿಲಯೋಗಿ ಸಮಾಜಸೇವಾ ಸಂಸ್ಥೆ ಜಿಲ್ಲಾಧ್ಯಕ್ಷ ಎ.ಸಿ.ರಮೇಶ್, ಅಭಿಯಂತರ ಕೆಂಪರಾಜು, ನೆಹರುಯುವಕೇಂದ್ರದ ಲೆಕ್ಕಾಧಿಕಾರಿ ಎಚ್.ಎಂ.ಬಸವರಾಜು ಮತ್ತು ಸಿಬ್ಬಂದಿ ಹಾಜರಿದ್ದರು. 

See also  ಹಿಮ್ಸ್ ವೈದ್ಯಕೀಯ ವಿದ್ಯಾರ್ಥಿಗಳಿಂದ ಕರ್ತವ್ಯ ಬಹಿಷ್ಕಾರ
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published.

177
Lava Kumar

Read More Articles

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು