News Kannada
Wednesday, December 07 2022

ಕರ್ನಾಟಕ

ಬರಡು ನೆಲದಲ್ಲಿ ಬಂಗಾರ ಬೆಳೆದ ಕವಿತಾ ಮಿಶ್ರಾ

Photo Credit :

ಬರಡು ನೆಲದಲ್ಲಿ ಬಂಗಾರ ಬೆಳೆದ ಕವಿತಾ ಮಿಶ್ರಾ

ಕೃಷಿಯಿಂದ ಲಾಭವೇ ಇಲ್ಲ ಎನ್ನುವವರಿಗೆ ಶ್ರಮವಹಿಸಿ ದುಡಿದರೆ ಬರಡು ನೆಲದಲ್ಲಿಯೂ ಬಂಗಾರ ಬೆಳೆಯಬಹುದು ಎಂಬುದನ್ನು ಪ್ರಗತಿಪರ ಮಹಿಳೆ ಕವಿತಾ ಮಿಶ್ರಾ ತೋರಿಸಿಕೊಟ್ಟಿದ್ದಾರೆ.

ಕೈತುಂಬಾ ಸಂಬಳ ಬರುವ ನೌಕರಿ ಬಿಟ್ಟು ಕೃಷಿಗಿಳಿದ ಇವರು ಸಾಕಷ್ಟು ಕಷ್ಟನಷ್ಟಗಳನ್ನು ಅನುಭವಿಸಿ ಕೊನೆಗೂ ತಾನು ಹಿಡಿದ ಕಾರ್ಯದಲ್ಲಿ ಸಫಲತೆ ಕಾಣುವಲ್ಲಿ ಯಶಸ್ವಿಯಾಗಿದ್ದಾರೆ.

ಕವಿತಾಮಿಶ್ರರವರು ರಾಯಚೂರು ಜಿಲ್ಲೆಯ ಮಾನ್ವಿ ತಾಲ್ಲೂಕಿನ ಕವಿತಾಳ ಎಂಬ ಗ್ರಾಮದವರಾಗಿದ್ದು, ಕಂಪ್ಯೂಟರ್ ಸೈನ್ಸ್ ಡಿಪ್ಲೊಮೊ ಮಾಡಿರುವ ಇವರು ಸೈಕಲಾಜಿಕಲ್ ಎಂ.ಎ ಪದವಿಯನ್ನು ಪಡೆದಿದ್ದಾರೆ. ವಿಜ್ಞಾನ, ಮನಃಶಾಸ್ತ್ರದ ಜೊತೆಗೆ ಕೃಷಿ ಕ್ಷೇತ್ರದಲ್ಲಿಯೂ ಆಕರ್ಷಿತರಾಗಿ ಕಳೆದ ಏಳೆಂಟು ವರ್ಷಗಳಿಂದ ಸಾಂದ್ರಿಕೃತ ಬೇಸಾಯ ಪದ್ಧತಿಯನ್ನು ಅಳವಡಿಸಿ ಸುತ್ತಮುತ್ತ ಹಳ್ಳಿಯ ರೈತರಿಗೆ, ಮಹಿಳೆಯರಿಗೆ ಮಾದರಿಯಾಗಿ ಕೃಷಿ ಮಾಡುತ್ತಾ ಮಾರ್ಗದರ್ಶಕರಾಗಿದ್ದಾರೆ.

ಇವರೇ ಹೇಳುವಂತೆ ಶ್ರಮವಿಲ್ಲದೆ ಫಲವಿಲ್ಲ, ಭೂಮಿತಾಯಿ ನಂಬಿ ಕೆಟ್ಟವರಿಲ್ಲ. ಭೂಮಿತಾಯಿ ನಂಬಿದವರಿಗೆ ಎಂದಿಗೂ ಮೋಸವಾಗುವುದಿಲ್ಲ ಎಂಬುವುದಕ್ಕೆ ನಾನೇ ಸಾಕ್ಷಿಯಾಗಿದ್ದೇನೆ. ನಾನು ಪ್ರಾರಂಭದಲ್ಲಿ ದಾಳಿಂಬೆ ಗಿಡವನ್ನು ನೆಟ್ಟು ಅದರಿಂದ ಆದಾಯವನ್ನು ಕಂಡೆ. ಕೆಲವು ದಿನಗಳ ನಂತರ ದಾಳಿಂಬೆ ಗಿಡಗಳಿಗೆ ರೋಗ ಬಂದ ಕಾರಣ ನಷ್ಟವನ್ನು ಸಹ ಅನುಭವಿಸಿದೆ. ಆಗ ಕೆಲವು ರೈತರು ನನ್ನನ್ನು ಛೇಡಿಸಿದರು. ಮತ್ತು ಗಂಡನ ಮನೆವರು ನನ್ನೊಂದಿಗೆ ಸರಿಯಾದ ರೀತಿಯಲ್ಲಿ ಮಾತನಾಡುತ್ತಿರಲಿಲ್ಲ. ಇದರಿಂದ ನಾನು ಆತ್ಮಹತ್ಯೆಗೆ ಯತ್ನಿಸಿದೆ. ನನ್ನ ಪತಿ ನನ್ನನ್ನು ಬುದುಕಿಸಿಕೊಳ್ಳಬೇಕೆಂದು ಹೋರಾಟ ಮಾಡಿದ ಫಲವಾಗಿ ನಾನು ಇಂದು ಬದುಕುಳಿದೆ ಎಂದಿದ್ದಾರೆ.

ಇನ್ನು ಕವಿತಾಮಿಶ್ರ ಅವರು ತಮ್ಮ 10 ಎಕರೆ ಜಮೀನಿನಲ್ಲಿ 900 ಮಾವು, ಒಂದೂವರೆ ಸಾವಿರ ದಾಳಿಂಬೆ, 500 ಮೂಸಂಬಿ, 450 ಸೀತಾಫಲ, 300 ನಿಂಬೆ, ಕರಿಬೇವು, ನುಗ್ಗೆ, ಮಲ್ಲಿಗೆ, ಹಣ್ಣಿನ ಗಿಡಗಳನ್ನು ಬೆಳೆಯವುದಲ್ಲೇ 800 ಸಾಗವಾನಿ, 2100 ಶ್ರೀಗಂಧ ಗಿಡಗಳನ್ನು ಬೆಳೆದಿದ್ದಾರೆ. ಇದಲ್ಲದೆ ವ್ಯವಸಾಯಕ್ಕೆ ಅಗತ್ಯವಾಗಿ ಬೇಕಾದ ಹಸು, ಕುರಿ, ಕೋಳಿ ಸಾಗಾಣಿಕೆ ಮಾಡಿ ವರ್ಷಕ್ಕೆ 25 ಲಕ್ಷ ಆದಾಯ ಗಳಿಸುತ್ತಾ ಮಾದರಿ ರೈತ ಮಹಿಳೆಯಾಗಿದ್ದಾರೆ.

ಐದು ಭಾಷೆಗಳನ್ನು ಸುಲಲಿತವಾಗಿ ಮಾತನಾಡುತ್ತಾರೆ. ಇವರ ಸಾಧನೆಗೆ ಅನೇಕ ರಾಜ್ಯ ಮತ್ತು ರಾಷ್ಟ್ರಮಟ್ಟದ ಪ್ರಶಸ್ತಿಗಳು ಲಭಿಸಿದೆ.  ರಾಯಚೂರಿನ ಕೃಷಿ ವಿಶ್ವವಿದ್ಯಾನಿಲಯ ಬೆಸ್ಟ್ ಫಾರ್ಮರ್ ಪ್ರಶಸ್ತಿ, ಹೈದರಾಬಾದ್‍ನ ಅಂತರಾಷ್ಟ್ರೀಯ ಬೆಳೆಸಂಶೋಧನಾ ಕೇಂದ್ರ, ಗೋಲ್ಡ್ ಅವಾರ್ಡ್ ಪ್ರಶಸ್ತಿ ಹಾಗೂ ಕೇಂದ್ರ ಸರ್ಕಾರ ನ್ಯಾಷನಲ್ ಇನೋವೇಟಿವ್ ಫಾರ್ಮರ್ ಅವಾರ್ಡ್ ಪ್ರಶಸ್ತಿ ಪಡೆದಿದ್ದಾರೆ. ಕೃಷಿಯನ್ನು ಪ್ರೀತಿಸುತ್ತಾ ಅದರಲ್ಲಿಯೇ ಯಶಸ್ಸು ಕಂಡಿರುವ ಇವರು ಇತರೆ ರೈತರಿಗೆ ಮಾದರಿಯಾಗಿದ್ದಾರೆ ಎನ್ನುವುದರಲ್ಲಿ ಎರಡು ಮಾತಿಲ್ಲ.

See also  ಮಡಿಕೇರಿ ಗುಂಡಿನ ದಾಳಿ ಪ್ರಕರಣ: ಮೂವರ ಬಂಧನ
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published.

177
Lava Kumar

Read More Articles

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು