News Kannada
Friday, December 02 2022

ಕರ್ನಾಟಕ

ಅಬ್ಬಬ್ಬ ಈ ಬೆಳೆ ಕಿಲೋ ಗೆ ಬರೋಬ್ಬರಿ ಒಂದು ಲಕ್ಷ ರೂಪಾಯಿ !

Photo Credit :

  ಅಬ್ಬಬ್ಬ  ಈ ಬೆಳೆ ಕಿಲೋ ಗೆ ಬರೋಬ್ಬರಿ ಒಂದು ಲಕ್ಷ ರೂಪಾಯಿ !

ಔರಂಗಾಬಾದ್ ;ಬಿಹಾರದ ರೈತರೊಬ್ಬರು ತಮ್ಮ ಹೊಲದಲ್ಲಿ ಬೆಳೆದ ಈ ಬೆಳೆಯನ್ನು ಒಂದು ಕೆಜಿಗೆ ₹ 1 ಲಕ್ಷದಂತೆ ಮಾರಾಟ ಮಾಡುತ್ತಿದ್ದಾರೆ. ರೈತ ಅಮರೇಶ್ ಸಿಂಗ್ ಬೆಳೆದ ಈ ಬೆಳೆಯ ಹೆಸರು ‘ಹೊಪ್ ಶೂಟ್ಸ್​’ (Hop Shoots). ಇದು ವಿಶ್ವದ ಅತಿ ದುಬಾರಿ ಬೆಳೆ ಎನಿಸಿಕೊಂಡಿದೆ. ಈ ಬೆಳೆಯ ಬಗ್ಗೆ ಐಎಎಸ್ ಅಧಿಕಾರಿ ಸುಪ್ರಿಯಾ ಸಾಹು ರಾಷ್ಟ್ರೀಯ ಮಾಧ್ಯಮದಲ್ಲಿ ಪ್ರಕಟವಾಗಿದ್ದ ಸುದ್ದಿಯ ಜೊತೆಗೆ ಕೆಲ ಫೋಟೊಗಳನ್ನೂ ಟ್ವೀಟ್ ಮಾಡಿದ್ದಾರೆ. ಈ ಬೆಳೆಯು ಭಾರತೀಯ ರೈತರ ಪರಿಸ್ಥಿತಿಯನ್ನು ಬದಲಿಸಬಲ್ಲದು ಎಂದಿದ್ದಾರೆ ಅವರು. ಈ ಟ್ವೀಟ್ ವೈರಲ್ ಆಗಿದೆ. 5000 ಮಂದಿ ರೀಟ್ವೀಟ್ ಮಾಡಿದ್ದು, 23.5 ಲಕ್ಷ ಮಂದಿ ಲೈಕ್ ಮಾಡಿದ್ದಾರೆ.
ಬಿಹಾರದ ಔರಂಗಾಬಾದ್ ಜಿಲ್ಲೆ ಕರಮ್​ನಿಧಿ ಗ್ರಾಮದ 38 ವರ್ಷದ ರೈತ ಅಮರೇಶ್ ಸಿಂಗ್ ಭಾರತದಲ್ಲಿ ಈ ರಿಸ್ಕ್ ತೆಗೆದುಕೊಂಡಿದ್ದಾರೆ. ಅವರು ಮೊದಲು ವಾರಣಾಸಿಯ ಭಾರತೀಯ ತೋಟಗಾರಿಕೆ ಬೆಳೆಗಳ ಸಂಶೋಧನಾ ಸಂಸ್ಥೆಯಿಂದ ಸಸಿಗಳನ್ನು ತಂದರು. ಸಂಶೋಧನಾ ಸಂಸ್ಥೆಯು ಬೆಳೆಯನ್ನು ಪರಿಚಯಿಸುವವರೆಗೆ ಹೊಪ್ ಶೂಟ್ಸ್​ ಹೆಸರನ್ನು ಭಾರತದಲ್ಲಿ ಹೆಚ್ಚಿನ ಜನರು ತಿಳಿದಿರಲೇ ಇಲ್ಲ. ಈ ಬೆಳೆ ಬೇಕು ಎಂದಾದರೆ ವಿದೇಶಗಳಿಂದ ತರಿಸಿಕೊಳ್ಳಬೇಕಾಗಿತ್ತು. ಸಾಗಾಟ ವೆಚ್ಚವೂ ಹೆಚ್ಚಾಗುತ್ತಿತ್ತು. ಅಷ್ಟೇ ಅಲ್ಲ, ಆರ್ಡರ್ ಮಾಡಿದವರು ದೀರ್ಘಕಾಲ ಕಾಯಬೇಕಿತ್ತು.
ಇದೀಗ ಹೊಪ್ ಶೂಟ್ಸ್​ ಬೆಳೆ ಬೆಳೆಯಲು ಉತ್ತೇಜನ ಸಿಗುತ್ತಿದೆ. ಇದು ರೈತರ ಆರ್ಥಿಕ ಸ್ವಾವಲಂಬನೆಗೂ ಸಹಕಾರಿ ಆಗಬಲ್ಲದು. ಹೊಪ್ಸ್​ ಗಿಡದ ಎಲ್ಲ ಭಾಗಗಳೂ ಉಪಯುಕ್ತ. ಆದರೆ ಹೂಗಳಿಗೆ ವಿಶೇಷ ಬೇಡಿಕೆಯಿದೆ. ಹೊಪ್ ಗಿಡದ ವೈಜ್ಞಾನಿಕ ಹೆಸರು ಹ್ಯುಮ್ಯುಲಸ್ ಲುಪ್ಯುಲಸ್ (Humulus Lupulus). ಇದು ಹೂಬಿಡುವ ಕೆನ್ನಬಸಿಯಾ ಕುಟುಂಬಕ್ಕೆ ಸೇರಿದ ಗಿಡವಾಗಿದೆ. ಅದೆಲ್ಲಾ ಸರಿ, ಈ ಗಿಡದ ಉತ್ಪನ್ನಗಳಿಗೇಕೆ ಇಷ್ಟೊಂದು ಬೆಲೆ ಅಂದ್ರಾ? ಈ ಗಿಡದ ಪ್ರತಿಯೊಂದು ಭಾಗವೂ ಉಪಯುಕ್ತ ಎಂದು ಅಧ್ಯಯನಗಳು ಹೇಳುತ್ತವೆ. ಹಣ್ಣು, ಹೂ, ಕಾಂಡಗಳು ಹಲವು ರೀತಿಯ ಉಪಯೋಗ ಹೊಂದಿವೆ. ಬಿಯರ್ ಉದ್ಯಮದಲ್ಲಿ ಈ ಗಿಡದ ಕೆಲ ಭಾಗಗಳನ್ನು ಸ್ಥಿರೀಕರಣಕ್ಕಾಗಿ (stability agent) ಬಳಸುತ್ತಾರೆ. ಕ್ಷಯರೋಗ ಬಾರದಂತೆ ತಡೆಯುವ ಶಕ್ತಿಯೂ ಈ ಗಿಡಕ್ಕಿದೆ. ಈ ಗಿಡದಲ್ಲಿರುವ ಆಂಟಿಯಾಕ್ಸಿಡೆಂಟ್ಸ್​ ಚರ್ಮದ ಕಾಂತಿ ಹೆಚ್ಚಿಸುತ್ತದೆ. ಇದರ ಚಿಗುರು ಸೇವಿಸುವುದರಿಂದ ಅತಿಕೋಪ, ಉದ್ವಿಗ್ನ ಮನಃಸ್ಥಿತಿ, ನಿದ್ರಾಹೀನತೆ ಮತ್ತು ಖಿನ್ನತೆಯನ್ನು ಹೋಗಲಾಡಿಸುತ್ತದೆ ಎಂದು ಹೇಳುತ್ತಾರೆ.
ಐಎಎಸ್ ಅಧಿಕಾರಿ ಸುಪ್ರಿಯಾ ಅವರ ಟ್ವೀಟ್​ಗೆ ಉತ್ತರಿಸಿರುವ ಹಲವರು, ಈ ಬೆಳೆಗೆ ಅಷ್ಟೊಂದು ಬೆಲೆಯಿಲ್ಲ ಎಂದು ವಾದಿಸಿದ್ದಾರೆ. ಕೆಲವರು ಹೊಪ್ಸ್​ ಬೆಳೆಯಿಂದ ದೂರ ಸರಿಯಲು ನಿರ್ಧರಿಸಿದ ರೈತರ ಬಗ್ಗೆ ‘ದಿ ಟ್ರಿಬ್ಯೂನ್’ ದಿನಪತ್ರಿಕೆ ಪ್ರಕಟಿಸಿರುವ ವರದಿಯ ಲಿಂಕ್ ಹಂಚಿಕೊಂಡಿದ್ದಾರೆ. ಈ ಅಭಿಪ್ರಾಯವನ್ನು ನಿರಾಕರಿಸಿ ವಾದಕ್ಕಿಳಿದಿರುವ ಕೆಲವರು, ಯಾವುದೇ ಮದ್ಯ ಮಾರಾಟ ಕಂಪನಿಯನ್ನು ಕೇಳಿನೋಡಿ, ಹೊಪ್ಸ್​ ಬೆಳೆಗೆ ಚಿನ್ನದ ಬೆಲೆ ಕೊಡುತ್ತಾರೆ. ಹಲವು ತಂಪುಪಾನೀಯಗಳ ಸುಗಂಧ ಮತ್ತು ರುಚಿಗೆ ಹೊಪ್ಸ್​ನ ಉಪ ಉತ್ಪನ್ನಗಳು ಬಳಕೆಯಾಗುತ್ತವೆ ಎಂದಿದ್ದಾರೆ.

See also  ಮಹೇಶ್ ಪ್ರೌಢ ಶಾಲೆಯಲ್ಲಿ ‘ಹೊಗೆಸೊಪ್ಪಿನ ಅಪಾಯಕಾರಿ ಪರಿಣಾಮ’ ಕಾರ್ಯಾಗಾರ
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published.

145

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು