News Kannada
Friday, December 02 2022

ಕರ್ನಾಟಕ

ಕೇರಳದ ದೇವಾಲಯಗಳಲ್ಲಿ ಆರ್‌ಎಸ್‌ಎಸ್‌ ಚಟುವಟಿಕೆಗೆ ನಿಷೇಧ ಹೇರಿದ ಟಿಡಿಬಿ

Photo Credit :

   ಕೇರಳದ ದೇವಾಲಯಗಳಲ್ಲಿ  ಆರ್‌ಎಸ್‌ಎಸ್‌ ಚಟುವಟಿಕೆಗೆ ನಿಷೇಧ ಹೇರಿದ ಟಿಡಿಬಿ

ತಿರುವನಂತಪುರ ; ಕೇರಳದ ಐದು ದೇವಸ್ವಂ ಬೋರ್ಡ್​ಗಳಲ್ಲಿ ಒಂದಾಗಿ ರುವ ತಿರುವಾಂಕೂರು ದೇವಸ್ವಂ ಬೋರ್ಡ್(ಟಿಡಿಬಿ) ತನ್ನ ಅಧೀನದ 1,240 ದೇವಸ್ಥಾನಗಳಲ್ಲಿ ರಾಷ್ಟ್ರೀಯ ಸ್ವಯಂಸೇವಕ ಸಂಘದ ಕಾರ್ಯಚಟುವಟಿಕೆಗಳನ್ನು ನಿಷೇಧಿಸಿ ಆದೇಶ ಹೊರಡಿಸಿದೆ. ದೇವಾಲಯದ ಆವರಣದಲ್ಲಿ ಆರ್​ಎಸ್​ಎಸ್ ಶಾಖೆ, ಶಾರೀರಿಕ್ ಅಥವಾ ಪಥ ಸಂಚಲನ ನಡೆಸುವಂತಿಲ್ಲ. ನಿಷೇಧ ಉಲ್ಲಂಘಿಸಿ ಯಾವುದೇ ದೇವಾಲಯದಲ್ಲಿ ಆರ್​ಎಸ್​ಎಸ್ ಚಟುವಟಿಕೆ ನಡೆಯುತ್ತಿದ್ದರೆ, ಅದನ್ನು ತಕ್ಷಣ ತಡೆಯಲು ಸಿಬ್ಬಂದಿ ಕ್ರಮ ಕೈಗೊಳ್ಳಬೇಕು. ನೌಕರರು ವಿಫಲವಾದರೆ ಇಲಾಖಾ ಕ್ರಮ ಕೈಗೊಳ್ಳಲಾಗುವುದು ಎಂದು ಟಿಡಿಬಿ ಎಚ್ಚರಿಕೆ ನೀಡಿದೆ.

ಕೇರಳದ ಹಲವು ದೇವಸ್ಥಾನಗಳ ಆವರಣದಲ್ಲಿ ಆರ್​ಎಸ್​ಎಸ್ ಶಾಖೆಗಳು, ಕಾರ್ಯಕ್ರಮಗಳು ನಡೆಯುತ್ತಿದ್ದು, ದೇವಸ್ಥಾನಗಳ ಸಿಬ್ಬಂದಿ ಇದನ್ನು ಬೆಂಬಲಿಸುತ್ತಿರುವ ಹಿನ್ನೆಲೆಯಲ್ಲಿ ಟಿಡಿಬಿ ಈ ಆದೇಶ ಹೊರಡಿಸಿದೆ. ಈ ಬಗ್ಗೆ ಪ್ರತಿಕ್ರಿಯಿಸಿರುವ ಟಿಬಿಡಿ ಅಧ್ಯಕ್ಷ ಎನ್.ವಾಸು, ರಾಜಕೀಯ ಉದ್ದೇಶಗಳಿಗೆ ದೇವಸ್ಥಾನದ ಜಾಗ ಬಳಕೆಯಾಗದಂತೆ ತಡೆಯುವ ನಿಟ್ಟಿನಲ್ಲಿ ವರ್ಷದ ಹಿಂದೆಯೇ ಕೈಗೊಂಡಿರುವ ನಿರ್ಧಾರ ಇದಾಗಿದೆ. ಇದರಲ್ಲಿ ಹೊಸತೇನಿಲ್ಲ. ಜನವರಿಯಲ್ಲಿ ಬಂದ ದೂರೊಂದನ್ನು ಆಧರಿಸಿ ದೇವಸ್ವಂ ಆಯುಕ್ತರು ಈ ಆದೇಶ ಹೊರಡಿಸಿದ್ದಾರೆ. ಆರ್​ಎಸ್​ಎಸ್ ಮಾತ್ರವಲ್ಲ, ಯಾವುದೇ ಸಂಘಟನೆ ಅಥವಾ ರಾಜಕೀಯ ಪಕ್ಷಗಳಿಗೆ ದೇವಳಗಳ ಆವರಣ ಬಳಕೆಗೆ ಅವಕಾಶವಿಲ್ಲ. ನಿರ್ದಿಷ್ಟ ದೂರಿನ ಹಿನ್ನೆಲೆಯಲ್ಲಿ ಮಾತ್ರ ಆರ್​ಎಸ್​ಎಸ್ ಹೆಸರು ಉಲ್ಲೇಖಿಸಲಾಗಿದೆ ಎಂದು ತಿಳಿಸಿದ್ದಾರೆ. ಕೇರಳದ ಐದು ದೇವಸ್ವಂ ಬೋರ್ಡಗಳ ಅಡಿಯಲ್ಲಿ ಸುಮಾರು 3 ಸಾವಿರ ದೇವಸ್ಥಾನಗಳಿವೆ.

See also  ದತ್ತಾಪೀಠವನ್ನು ಹಿಂದೂಗಳಿಗೆ ಒಪ್ಪಿಸಬೇಕು: ಹಿಂದೂಪರ ಸಂಘಟನೆಗಳ ಒತ್ತಾಯ
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published.

145

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು