News Kannada
Tuesday, November 29 2022

ಕರ್ನಾಟಕ

ಕಲ್ಲಂಗಡಿ ಹಣ್ಣು ತಿಂದು ಬಾಲಕರು ಸಾವಿಗೀಡಾಗಿಲ್ಲ; ಸಾವಿಗೆ ಕಾರಣ ಇದು - 1 min read

Photo Credit :

ಕಲ್ಲಂಗಡಿ ಹಣ್ಣು ತಿಂದು ಬಾಲಕರು ಸಾವಿಗೀಡಾಗಿಲ್ಲ; ಸಾವಿಗೆ ಕಾರಣ ಇದು

ಹೈದರಾಬಾದ್​: ಕಲ್ಲಂಗಡಿ ಹಣ್ಣು ತಿಂದ ಬಾಲಕರಿಬ್ಬರು ಸಾವಿಗೀಡಾಗಿರುವ ಘಟನೆ ತೆಲಂಗಾಣದ ಪೆದ್ದಪಲ್ಲಿ ಜಿಲ್ಲೆಯಲ್ಲಿ ನಡೆದಿದ್ದು, ಮೂವರು ಸಾವು-ಬದಕಿನ ನಡುವೆ ಹೋರಾಡುತ್ತಿದ್ದಾರೆ. ಆದರೆ ಕಲ್ಲಂಗಡಿ ಹಣ್ಣು ತಿಂದರೆ ಸಾಯ್ತಾರಾ? ಕಲ್ಲಂಗಡಿ ಆರೋಗ್ಯಕ್ಕೆ ಒಳ್ಳಯದು ಎಂದು ವೈದ್ಯರೇ ಹೇಳ್ತರಲ್ಲ ಎಂಬ ಪ್ರಶ್ನೆ ಎಲ್ಲರಲ್ಲು ಮೂಡುವುದು ಸಹಜ. ಆದರೆ, ಕಲ್ಲಂಗಡಿ ತಿಂದ ಮಕ್ಕಳು ಮೃತಪಟ್ಟಿದ್ದು ಹೇಗೆ ಎಂದು ತಿಳಿದರೆ ನಿಜಕ್ಕೂ ಶಾಕ್​ ಆಗ್ತೀರಾ!
ಅಸಲಿಗೆ ಏನು ನಡೆಯಿತು ಅಂದರೆ, ಮಾರ್ಚ್​ 29ರ ಸೋಮವಾರ ಪೆದ್ದಪಲ್ಲಿಯ ಇಸ್ಸಾಂಪೇಟಾ ಗ್ರಾಮದ ಕುಟುಂಬ ಮನೆಗೆ ಕಲ್ಲಂಗಡಿ ಹಣ್ಣನ್ನು ಕೊಂಡು ತಂದಿದ್ದಾರೆ. ಮೊದಲು ಅರ್ಧವನ್ನು ತಿಂದು, ಉಳಿದ ಅರ್ಧವನ್ನು ಕಪ್​ಬೋರ್ಡ್​ನಲ್ಲಿ ಇಟ್ಟಿದ್ದರು. ಮತ್ತೆ ರಾತ್ರಿ ಉಳಿದ ಹಣ್ಣನ್ನು ತಿಂದಿದ್ದಾರೆ. ಇದಾದ ಕೆಲವೇ ಕ್ಷಣಗಳಲ್ಲಿ ನಡು ರಾತ್ರಿಯಲ್ಲಿ ಇಡೀ ಕುಟುಂಬ ನೋವಿನಿಂದ ನರಳಾಡಿದೆ.
ತಕ್ಷಣ ಅವರನ್ನು ಕರೀಮ್​ನಗರದ ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಯಿತು. ಈ ವೇಳೆ ಚಿಕಿತ್ಸೆ ನಡುವೆಯೇ ಫಲಕಾರಿಯಾಗದೇ ಬಾಲಕರಾದ ದರವೇಣಿ ಸಿವಾನಂದು (12) ಮತ್ತು ಚರಣ್​ (10) ಏಪ್ರಿಲ್​ 2ರಂದು ಮೃತಪಟ್ಟಿದ್ದಾರೆ. ಕುಟುಂಬ ಉಳಿದ ಸದಸ್ಯರಾದ ಶ್ರೀಶೈಲಂ, ಗುಣವತಿ ಮತ್ತು ಅಜ್ಜಿ ಸರಮ್ಮಲ್​ ಅವರಿಗೆ ಚಿಕಿತ್ಸೆ ಮುಂದುವರಿಸಿದ್ದು, ಅವರ ಸ್ಥಿತಿ ಗಂಭೀರವಾಗಿದೆ. ನಿಗೂಢ ಸಾವಿನ ಪ್ರಕರಣದ ತನಿಖೆ ಬೆನ್ನತ್ತಿದ ಪೊಲೀಸರಿಗೆ ಸತ್ಯಾಂಶ ತಿಳಿದು ಶಾಕ್​ ಆಗಿದೆ. ಏಕೆಂದರೆ, ಮಕ್ಕಳು ಸಾವು ಮತ್ತು ಕುಟುಂಬದ ನೋವಿಗೆ ಮೂಲ ಕಾರಣವೇ ಇಲಿ ಎಂಬುದು ತನಿಖೆಯಲ್ಲಿ ಬಯಲಾಗಿದೆ.
ಅಷ್ಟಕ್ಕೂ ನಡೆದಿದ್ದೇನೆಂದರೆ, ಮನೆಯಲ್ಲಿ ಇಲಿ ಕಾಟ ಹೆಚ್ಚಾಗಿದ್ದರಿಂದ ಅವುಗಳನ್ನು ಕೊಲ್ಲಲು ಇಲಿ ಪಾಶಾಣವನ್ನು ಮನೆಗೆ ತಂದಿದ್ದರು. ಇಲಿ ಪಾಶಾಣವನ್ನು ಸಿಂಪಡಿಸಿ ಉಳಿದದ್ದನ್ನು ಒಂದು ಕಪ್​ಬೋರ್ಡ್​ನಲ್ಲಿ ಇಟ್ಟಿದ್ದರು. ಇಲಿ ಮನೆಯಲ್ಲೆ ಓಡಾಗಿ ಪಾಶಾಣ ಸೇವಿಸಿ, ಅದೇ ಬಾಯಿಯಲ್ಲಿ ಮನೆಯಲ್ಲಿದ್ದ ಕಲ್ಲಂಗಡಿ ಹಣ್ಣನ್ನು ಸಹ ತಿಂದಿದೆ. ಇದು ತಿಳಿಯದೇ ಹಣ್ಣನ್ನು ತಿಂದು ಇಡೀ ಕುಟುಂಬ ಅನಾರೋಗ್ಯಕ್ಕೀಡಾಯಿತು ಎಂಬುದು ಪೊಲೀಸ್​ ತನಿಖೆಯಲ್ಲಿ ಬಯಲಾಗಿದೆ. ಜಿರಳೆ, ಹಲ್ಲಿ ಮತ್ತು ಇಲಿ ಸೇರಿದಂತೆ ಯಾವುದೇ ಜೀವಿಗಳನ್ನು ಸಾಯಿಸಲು ಅಥವಾ ಅವುಗಳನ್ನು ಓಡಿಸಲು ಮನೆಗೆ ತರುವ ಔಷಧಿಗಳ ಬಗ್ಗೆ ಪ್ರತಿಯೊಬ್ಬರು ಎಚ್ಚರಿಕೆ ವಹಿಸಬೇಕು. ಸ್ವಲ್ಪ ಮೈಮರೆತರು ಮುಂದೇನಾಗಬಹುದು ಎಂಬುದಕ್ಕೆ ಪೆದ್ದಪಲ್ಲಿಯಲ್ಲಿ ನಡೆದ ಈ ಘಟನೆ ಒಂದು ಎಚ್ಚರಿಕೆಯ ಗಂಟೆಯಾಗಿದೆ.

See also  ಬೆಳಗಾವಿ ಮಹಾನಗರ ಪಾಲಿಕೆ ಚುನಾವಣೆ ಅಭ್ಯರ್ಥಿಗಳ ಆಯ್ಕೆ ; ಬಿಜೆಪಿ ಕಾರ್ಯಕರ್ತರ ಅಸಮಾಧಾನ
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published.

145

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು