News Kannada
Monday, December 05 2022

ಕರ್ನಾಟಕ

ಸಿದ್ದರಾಮಯ್ಯನವರಿಗೆ ತಲೆಕೆಟ್ಟಿದೆ: ಸಚಿವ ಈಶ್ವರಪ್ಪ

Photo Credit :

ಸಿದ್ದರಾಮಯ್ಯನವರಿಗೆ ತಲೆಕೆಟ್ಟಿದೆ: ಸಚಿವ ಈಶ್ವರಪ್ಪ

ಶಿವಮೊಗ್ಗ: ಸಿದ್ದರಾಮಯ್ಯನವರಿಗೆ ತಲೆಕೆಟ್ಟಿದ್ದು ಅವರು ವಿಪಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಬೇಕೆಂದು ಸಚಿವ ಈಶ್ವರಪ್ಪ ಆಗ್ರಹಿಸಿದ್ದಾರೆ.

ಅವರು ಶಿವಮೊಗ್ಗದಲ್ಲಿ ಮಾಧ್ಯಮಗಳಲ್ಲಿ ಮಾತನಾಡಿ ರಾಜ್ಯದಲ್ಲಿ ನಡೆಯುತ್ತಿರುವ ಅಭಿವೃದ್ಧಿ ಕಾರ್ಯಗಳಿಗೆ ನೋಡಲಿಕ್ಕೂ ಆಗ್ತಾ‌ಇಲ್ಲ, ಕೇಳಲಿಕ್ಕೂ ಆಗ್ತಾ ಇಲ್ಲ.ಅನುಭವಿಸಲಿಕ್ಕೂ ಆಗ್ತಾಇಲ್ಲ.

ಮುಖ್ಯಮಂತ್ರಿ ಸ್ಥಾನ ಕಳೆದುಕೊಂಡ ನಂತರ ಹುಚ್ಚು ಹಿಡಿದಂಗೆ ಆಗಿದೆ. ನನ್ನ ಮಾತುಗಳನ್ನ ಅಧಿಕಾರಿಗಳು ಕೇಳುತ್ತಿಲ್ಲ ಹಾಗಾಗಿ ಈಶ್ವರಪ್ಪನವರು ರಾಜೀನಾಮೆ ನೀಡಬೇಕು ಹಾಗೂ ರಾಜ್ಯದಲ್ಲಿ ರಾಷ್ಟ್ರಪತಿ ಆಳ್ವಿಕೆ ಹೇರಹೇಕು ಎಂದು ಸಿದ್ದರಾಮಯ್ಯನವರ ಹೇಳಿಕೆಗೆ ಕೆಂಡಮಂಡಲವಾಗಿ ಮೇಲಿನಂತೆ ಉತ್ತರಿಸಿದರು.

ಸಿದ್ದರಾಮಯ್ಯ‌ನವರು ನಾಳೆ ಅಲ್ಲ ನಾಡಿದ್ದು ನನ್ನ ಇಲಾಖೆಯ ಅಧಿಕಾರಿಗಳನ್ನ ಭೇಟಿಯಾಗಲಿ ಅಭಿವೃದ್ಧಿಯ ಪಟ್ಟಿಯನ್ನೇ ನನ್ನ ಇಲಾಖೆಯ ಅಧಿಕಾರಿಗಳು ನೀಡಲಿದ್ದಾರೆ ಎಂದರು.

ಸ್ವಾತಂತ್ರ್ಯ ನಂತರದ ದಿನಗಳಲ್ಲಿ ಗ್ರಾಮೀಣಾಭಿವೃದ್ಧಿ ಇಲಾಖೆಯಲ್ಲಿ ಆಗಿರುವ ಕೆಲಸಗಳ ಬಗ್ಗೆ ಪಟ್ಟಿ ನೋಡಿಯೇ ಸಿದ್ದರಾಮಯ್ಯನವರಿಗೆ ತಲೆಕೆಟ್ಟುಹೋಗಿದೆ ಎಂದು ಗಂಭೀರವಾಗಿ ತಿಳಿಸಿದರು.

ಸಿದ್ದರಾಮಯ್ಯನವರ ಹೇಳಿಕೆ ಸಚಿವರನ್ನ ಎಷ್ಟು ರಚ್ಚಿಗೆ ಎಬ್ಬಿಸಿತ್ತು ಎಂದರೆ ಸಿದ್ದರಾಮಯ್ಯನವರನ್ನ ಏಕವಚನದಲ್ಲಿ ಕರೆಯುವಷ್ಟು ತಾಳ್ಮೆಯನ್ನೂ ಕಳೆದುಕೊಂಡಿದ್ದರು.

ಅಧಿಕಾರಿಗಳು ಈಶ್ವರಪ್ಪನವರ ಮಾತು ಕೇಳುತ್ತಿಲ್ಲವೆಂದು ಸಿದ್ದರಾಮಯ್ಯ ಹೇಳಿರುವುದಕ್ಕೆ ಟಾಂಗ್ ನೀಡಿದ ಸಚಿವರು ನಿನ್ನ ಮಾತು ನಿನ್ನ ಪಕ್ಷದವರೇ ಕೇಳಿರಲಿಲ್ಲ. ಮೈಸೂರು ಬಿಟ್ಟು ಹೋಗಿದ್ಯಪ್ಪ. ಮೈಸೂರಿನ ಪಾಲಿಕೆಯಮೇಯರ್ ಉಪಮೇಯರ್ ಚುನಾವಣೆಯಲ್ಲಿ ಸಿದ್ದರಾಮಯ್ಯನವರ ಮಾತನ್ನೇ ಕೇಳದೆ ಆಯ್ಕೆ ಮಾಡಲಾಗಿತ್ತು. ಇದನ್ನ ಮಾಜಿ ಸ್ಪೀಕರ್ ರಮೇಶ್ ಕುಮಾರ್ ಸಹ ಬೇಸರ ವ್ಯಕ್ತಪಡಿಸಿದ್ದರು.‌ಅಂದರೆ ಸಿದ್ದರಾಮಯ್ಯನವರು ಕಾಂಗ್ರೆಸ್ ನಲ್ಲಿ ಕಸ ಆದಂಗೆ ಆಗಿದ್ದಾರೆ ಎಂದು ಆರೋಪಿಸಿದರು.

See also  ಎಂಡೋಸಲ್ಫಾನ್ ಸಂತ್ರಸ್ತ ಪಟ್ಟಿಗೆ ಮತ್ತೆ 287 ಸೇರ್ಪಡೆ
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published.

190
Ismail M Kutty

Read More Articles

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು