News Kannada
Sunday, December 04 2022

ಕರ್ನಾಟಕ

ನಿನ್ನಮ್ಮ 2 ವಾರದಿಂದ ಕರೆದರೂ ಬರಲಿಲ್ಲ, ಪೆಟ್ರೋಲ್ ಹಾಕಿ ಸುಟ್ಟು ಬಿಟ್ಟೆ !

Photo Credit :

ನಿನ್ನಮ್ಮ 2 ವಾರದಿಂದ ಕರೆದರೂ ಬರಲಿಲ್ಲ, ಪೆಟ್ರೋಲ್ ಹಾಕಿ ಸುಟ್ಟು ಬಿಟ್ಟೆ !

ಮಡಿಕೇರಿ ; ನಿನ್ನಮ್ಮ 2 ವಾರದಿಂದ ಕರೆದರೂ ಬರಲಿಲ್ಲ, ಅವಳನ್ನು ಪೆಟ್ರೋಲ್ ಹಾಕಿ ಸುಟ್ಟು ಬಿಟ್ಟೆ, ಅವಳ ಗೋಳು ನೋಡು ಹೋಗು” ಹೀಗೆಂದು ತನ್ನ ಮಗಳೊಂದಿಗೆ ಮೊಬೈಲ್ ಕರೆ ಮಾತನಾಡಿದವನು ಮುಗುಟಗೇರಿಯಲ್ಲಿ 7 ಅಮಾಯಕ ಜೀವಗಳನ್ನು ಬಲಿ ತೆಗೆದುಕೊಂಡ ದುಷ್ಕರ್ಮಿ ಬೋಜ.
ಮುಗುಟಗೇರಿಯ ಲೈನ್ ಮನೆಯ ಮೇಲೇರಿ ಮಲಗಿದ್ದವರ ಮೇಲೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿ ಬಂದವನೇ ನಿಗೂಢ ಜಾಗದಿಂದ ತನ್ನ ಮಗಳಿಗೆ ಕರೆ ಮಾಡಿದ್ದಾನೆ. ಈ ಆಡಿಯೋ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
ಮಾತು ಮುಂದುವರೆಸಿರುವ ಬೋಜ “ಅವಳನ್ನು ಪೆಟ್ರೋಲ್ ಹಾಕಿ ಸುಟ್ಟು ಬಿಟ್ಟೆ, ಅವಳ ಗೋಳು ನೋಡು ಹೋಗು, ಈಗ ನಾನು ಕೂಡ ಸಾಯ್ತೀನಿ ಎಂದು ಕರೆ ಕಟ್ ಮಾಡಿದ್ದಾನೆ.
ತನಿಖೆಯ ವೇಳೆ ಈ ಆಡಿಯೋ ತುಣುಕು ಬಹಿರಂಗಗೊಂಡಿದೆ. ಇದೀಗ ಬೋಜ ಆತ್ಮಹತ್ಯೆಗೆ ಶರಣಾಗಿರುವುದು ಖಾತ್ರಿಯಾಗಿದ್ದು, ಪೊನ್ನಂಪೇಟೆ ಸಮೀಪ ತಾನಿದ್ದ ಲೈನ್ ಮನೆಯ ತೋಟದಲ್ಲಿ ಮೃತದೇಹ ಪತ್ತೆಯಾಗಿದೆ.
ಮತ್ತೊಂದೆಡೆ ಮೈಸೂರು ಆಸ್ಪತ್ರೆಯಲ್ಲಿ ಸುಟ್ಟ ಗಾಯಗಳಿಂದ ಗಂಭೀರ ಸ್ಥಿತಿಯಲ್ಲಿದ್ದ ತೋಲ ಅವರ ಪತ್ನಿ ಭಾಗ್ಯ (28) ಚಿಕಿತ್ಸೆ ಫಲಕಾರಿಯಾಗದೆ ಕೊನೆಯುಸಿರೆಳೆದ್ದಿದ್ದಾರೆ. ಇವರ ಇಬ್ಬರು ಮಕ್ಕಳು ಘಟನೆ ನಡೆದ ದಿನವೇ ಮೃತ ಪಟ್ಟಿದ್ದರು. ಮುಗುಟಗೇರಿ ಘಟನೆಯಲ್ಲಿ ಮೃತರಾದವರ ಸಂಖ್ಯೆ ಈಗ 7 ಕ್ಕೆ ಏರಿಕೆಯಾಗಿದೆ.
ಬೋಜನ ಸಾವಿನಿಂದ ಪೊಲೀಸರು ನಿಟ್ಟುಸಿರು ಬಿಟ್ಟಿದ್ದಾರೆ. ಆದರೆ 7 ಅಮಾಯಕರನ್ನು ಕೊಂದು ತಾನೂ ಆತ್ಮಹತ್ಯೆಗೆ ಶರಣಾದ ಬೋಜನ ಮನೋಸ್ಥಿತಿಯ ಬಗ್ಗೆ ಸಮಾಜದಲ್ಲಿ ದಿಕ್ಕಾರದ ಮನೋಭಾವನೆ ಮೂಡಿದೆ.

See also  ಗ್ರಾ.ಪಂ ಚುನಾವಣೆ : ಅಗತ್ಯ ಸಿದ್ಧತೆಗೆ ಕೊಡಗು ಜಿಲ್ಲಾಧಿಕಾರಿ ಸೂಚನೆ
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published.

145

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು