News Kannada
Wednesday, December 07 2022

ಕರ್ನಾಟಕ

ಪೆಟ್ರೋಲ್ ಬಂಕ್ ನಲ್ಲಿ ಬೆಂಕಿ

Photo Credit :

ಪೆಟ್ರೋಲ್ ಬಂಕ್ ನಲ್ಲಿ ಬೆಂಕಿ

ಹುಬ್ಬಳ್ಳಿ: ಹಳೇ ಹುಬ್ಬಳ್ಳಿಯ ಇಂಡಿಪಂಪ್‌ನಲ್ಲಿ ಶನಿವಾರ ರಾತ್ರಿ ವಾಹನಕ್ಕೆ ಪೆಟ್ರೋಲ್‌ ಹಾಕಿಸಿಕೊಳ್ಳುತ್ತಿರುವಾಗ ದಿಢೀರನೆ ಹೊತ್ತಿಕೊಂಡ ಬೆಂಕಿ ಸುತ್ತಮುತ್ತಲಿನ ಜನರಲ್ಲಿ ಭಾರಿ ಆತಂಕ ಸೃಷ್ಟಿ ಮಾಡಿದೆ.

ವಾಹನದ ಎಂಜಿನ್‌ನಲ್ಲಿ ಕಾಣಿಸಿಕೊಂಡ ಬೆಂಕಿ ಕ್ಷಣಾರ್ಧದಲ್ಲಿ ವಾಹನಪೂರ್ತಿ ಆವರಿಸಿಕೊಂಡಿತು. ಪೆಟ್ರೋಲ್ ಬಂಕ್‌ನಲ್ಲಿಯೇ ಈ ಘಟನೆ ನಡೆದ ಕಾರಣ ಜನ ಕೂಡ ಆತಂಕಕ್ಕೆ ಒಳಗಾದರು. ಬಂಕ್‌ನ ಅಕ್ಕಪಕ್ಕದಲ್ಲಿದ್ದ ಸಾರ್ವಜನಿಕರು, ವಾಹನ ಸವಾರರು ದಿಕ್ಕಾಪಾಲಾಗಿ ಓಡಿದರು.

ಬಂಕ್‌ನ ಸಿಬ್ಬಂದಿ, ಹಳೇ ಹುಬ್ಬಳ್ಳಿ ಠಾಣೆಯ ಪೊಲೀಸರು ಹಾಗೂ ಅಗ್ನಿಶಾಮಕ ದಳದ ಸಿಬ್ಬಂದಿ ಬೆಂಕಿ ನಂದಿಸಿದರು. ಹೆಸ್ಕಾಂ ಸಿಬ್ಬಂದಿ ಘಟನೆ ನಡೆದ ಕೆಲವೇ ನಿಮಿಷಗಳಲ್ಲಿ ವಿದ್ಯುತ್‌ ಸಂಪರ್ಕ ಕಡಿತಗೊಳಿಸಿದ್ದರಿಂದ ಇಂಡಿಪಂಪ್‌ ಸುತ್ತಲಿನ ವಾತಾವರಣ ಕತ್ತಲುಮಯವಾಗಿತ್ತು. ಈ ಘಟನೆಯಲ್ಲಿ ವಾಹನ ಸುಟ್ಟು ಕರಕಲವಾಗಿದ್ದು, ವಾಹನದಲ್ಲಿದ್ದವರು ಹೊರಗೆ ಓಡಿ ಹೋಗಿ ಪ್ರಾಣ ಉಳಿಸಿಕೊಂಡಿದ್ದಾರೆ.

See also  ‘ಯಕ್ಷಗಾನದಿಂದ ಸಮಾಜದಲ್ಲಿ ಸಂಸ್ಕಾರ’
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published.

205

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು