News Kannada
Sunday, November 27 2022

ಕರ್ನಾಟಕ

ಇಲ್ಲಿ ಫೋಟೋ ತೆಗೆಸಿಕೊಂಡರೆ N95 ಮಾಸ್ಕ್ ಫ್ರೀ ! - 1 min read

Photo Credit :

ಇಲ್ಲಿ ಫೋಟೋ ತೆಗೆಸಿಕೊಂಡರೆ N95 ಮಾಸ್ಕ್ ಫ್ರೀ !

ಮಡಿಕೇರಿ : ದೇಶದಲ್ಲಿ ಕೊವಿಡ್ 19 ಪ್ರಕರಣಗಳು ನಾಗಾಲೋಟದಲ್ಲಿ ಹರಡುತ್ತಿವೆ. ಆದರೂ ಜನರು ಮಾತ್ರ ಈ ಕ್ಷಣಕ್ಕೂ ಎಚ್ಚೆತ್ತುಕೊಂಡಿಲ್ಲ. ಮಾಸ್ಕ್ ಇಲ್ಲದೆ ಸಾಮಾಜಿಕ ಅಂತರವೂ ಇಲ್ಲದೆ ಸಾರ್ವಜನಿಕ ಸ್ಥಳಗಳಲ್ಲಿ ಮನಸ್ಸೋ ಇಚ್ಚೆ ಓಡಾಡಿಕೊಂಡೇ ಇದ್ದಾರೆ. ಹೀಗಿರುವಾಗ ಇಲ್ಲೊಬ್ಬ ಫೋಟೋಗ್ರಾಫರ್ ತನ್ನ ಸ್ಟುಡಿಯೋದಲ್ಲಿ ಪಾಸ್ಪೋರ್ಟ್ ಅಳತೆಯ 16 ಭಾವಚಿತ್ರ ತೆಗೆಸಿಕೊಂಡವರಿಗೆ ಉಚಿತವಾಗಿ ಒಂದು ಎನ್ 95 ಮಾಸ್ಕ್ ಅನ್ನು ವಿತರಣೆ ಮಾಡುತ್ತಿದ್ದಾರೆ. ಆ ಮೂಲಕ ಜನರಿಗೆ ಕೊವಿಡ್ 19 ಬಗ್ಗೆ ಜಾಗೃತಿ ಮೂಡಿಸುವ ಮತ್ತು ಮಾಸ್ಕ್ ಧರಿಸುವ ಅಗತ್ಯತೆ ಬಗ್ಗೆ ಜನರಿಗೆ ಅರಿವು ಮೂಡಿಸುವ ಕೆಲಸ ಮಾಡುತ್ತಿದ್ದಾರೆ.
ಕುಶಾಲನಗರದ ಒಡಿಸ್ಸಿ ಫೋಟೋ ಸ್ಟುಡಿಯೋ ಮಾಲೀಕ ನಾಗೇಶ್ ಇಂತಹ ಸಮಾಜಮುಖಿ ಕೆಲಸ ಮಾಡುತ್ತಿದ್ದಾರೆ. ತಮ್ಮ ಸ್ಟುಡಿಯೋದಲ್ಲಿ ಫೋಟೋ ತೆಗೆಸಿಕೊಳ್ಳಲು ಬರುವ ಪ್ರತಿಯೊಬ್ಬರಿಗೂ 125 ರೂಪಾಯಿ ಮೌಲ್ಯದ ಎನ್ 95 ಮಾಸ್ಕ್ ಅನ್ನು ಉಚಿತವಾಗಿ ವಿತರಣೆ ಮಾಡುತ್ತಿದ್ದಾರೆ. ಪಾಸ್ಪೋರ್ಟ್ ಅಳತೆಯ 16 ಫೋಟೊಗಳಿಗೆ 150 ರೂಪಾಯಿ ಚಾರ್ಜ್ ಮಾಡುವ ಇವರು ಫೋಟೋ ಜೊತೆಗೆ ಮಾಸ್ಕ್ ವಿತರಣೆ ಮಾಡುತ್ತಿದ್ದಾರೆ.
ಫೋಟೊ ತೆಗೆಸಿಕೊಳ್ಳುವ ಪ್ರತಿಯೊಬ್ಬರಿಗೂ N 95 Mask ಅನ್ನು ವಿತರಣೆ ಮಾಡಿದರೆ ವೆಚ್ಚ ಜಾಸ್ತಿ ಆಗುವುದಿಲ್ಲವೆ ಎಂದರೆ, ನನಗೆ ಹಣದ ವೆಚ್ಚಕ್ಕಿಂತ ಸಾಮಾಜಿಕ ಜವಾಬ್ದಾರಿ ಮುಖ್ಯ. ನಾನು ಹಣಕ್ಕಾಗಿ ಮಾಸ್ಕ್ ವಿತರಿಸುತ್ತಿಲ್ಲ. ಬದಲಾಗಿ ಜನರು ಕಡ್ಡಾಯವಾಗಿ ಮಾಸ್ಕ್ ಧರಿಸುವಂತೆ ಮಾಡುವುದು, ಆ ಮೂಲಕ ಕೊವಿಡ್ ಒಬ್ಬರಿಗೆ ಮತ್ತಷ್ಟು ಜನರಿಗೆ ಹರಡುವುದನ್ನು ತಪ್ಪಿಸೋದು ನನ್ನ ಜವಾಬ್ದಾರಿ ಎನ್ನುತ್ತಾರೆ ನಾಗೇಶ್.
ಅಷ್ಟಕ್ಕೂ ಇದೇ ಮಾಸ್ಕ್ ವಿತರಿಸಬೇಕೆಂಬ ಆಲೋಚನೆ ಬಂದಿದ್ದಾದರೂ ಹೇಗೆ ಎಂದು ಕೇಳಿದರೆ, ನಾನು ಸಂಸ್ಥೆಯೊಂದರ ಸಭೆಯಲ್ಲಿ ಭಾಗವಹಿಸಿದ್ದೆ. ಆ ಸಭೆ ಆಯೋಜಿಸಿದ್ದವರು, ಮಾಸ್ಕ್ ಅನ್ನು ಕೊಡುಗೆಯಾಗಿ ನೀಡುವಂತೆ ನನ್ನನ್ನು ಕೇಳಿದ್ದರು. ಆ ವೇಳೆ ಸಂಸ್ಥೆಗೆ ಮಾಸ್ಕ್ ಅನ್ನು ಕೊಡುಗೆಯಾಗಿ ನೀಡುವುದಕ್ಕಿಂತ ನಾನೇ ಯಾಕೆ ಮಾಸ್ಕ್ ವಿತರಣೆ ಮಾಡಬಾರದು ಎಂದು ಯೋಚಿಸಿದೆ. ಜೊತೆಗೆ ಸಾಮಾನ್ಯ ಮಾಸ್ಕ್ ವಿತರಣೆ ಮಾಡಿದರೆ, ಅದನ್ನು ಜನರು ಒಮ್ಮೆ ಬಳಸಿ ಬಿಸಾಡಿಬಿಡುತ್ತಾರೆ. ಇದು ಭೂಮಿಗೆ ಒಂದಷ್ಟು ಕಸವಾಗಿ ಮಾರ್ಪಡುತ್ತದೆ. ಹೀಗಾಗಿ ಮರುಬಳಕೆ ಮಾಡಬಹುದಾದ ಮಾಸ್ಕ್ ವಿತರಣೆ ಮಾಡಿದರೆ, ಜನರು ಪುನರ್ ಬಳಕೆ ಮಾಡಲು ಅನುಕೂಲವಾಗುತ್ತದೆ. ಹೀಗಾಗಿ ಎನ್ 95 ಮಾಸ್ಕ್ ಅನ್ನೇ ವಿತರಣೆ ಮಾಡುತ್ತಿದ್ದೇನೆ.
ಜನರು ಕಡ್ಡಾಯವಾಗಿ ಮಾಸ್ಕ್ ಧರಿಸಿ ಎಲ್ಲರ ಆರೋಗ್ಯ ಕಾಪಾಡಬೇಕಾದ ಅಗತ್ಯವಿದೆ ಎನ್ನೋದು ನಾಗೇಶ್ ಅವರ ಅಭಿಪ್ರಾಯ. ಇನ್ನು ನಾಗೇಶ್ ಅವರ ಈ ಕಾರ್ಯಕ್ಕೆ ಕುಶಾಲನಗರದಲ್ಲಿ ಭಾರಿ ಮೆಚ್ಚುಗೆ ವ್ಯಕ್ತವಾಗುತ್ತಿದೆ. ಮಾಸ್ಕ್ ನಿಂದಲೇ ಶೇಕಡ 95 ರಷ್ಟು ಸೋಂಕು ಹರಡದಂತೆ ತಡೆಯಬಹುದು. ಹೀಗಾಗಿ ಮಾಸ್ಕ್‍ನ ಅಗತ್ಯತೆ ಬಗ್ಗೆ ನಾಗೇಶ್ ಅರಿವು ಮೂಡಿಸುತ್ತಿದ್ದಾರೆ. ಅವರ ಕಾರ್ಯ ಮಹತ್ವದ್ದು ಎಂದು ಜನರು ಶ್ಲಾಘಿಸುತಿದ್ದಾರೆ.

See also  ಕೊಡಗಿನಲ್ಲಿ ಮಳೆಯ ಅರ್ಭಟದೊಂದಿಗೆ ಕೊರೊನಾ ಸೋಂಕು ಪ್ರಕರಣ ಹೆಚ್ಚಳ
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published.

145

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು