ಕೋಲಾರ: ಕೋಲಾರ ಜಿಲ್ಲೆಯಾದ್ಯಂತ ವೀಕೆಂಡ್ ಕಫ್ರ್ಯೂಗೆ ಶನಿವಾರ ಉತ್ತಮ ಬೆಂಬಲ ವ್ಯಕ್ತವಾಗಿದೆ, ಬೆಳಗ್ಗೆ 6 ಗಂಟೆಯಿಂದ 10 ಗಂಟೆವರೆಗು ಮಾತ್ರ ಅಗತ್ಯ ವಸ್ತುಗಳ ಖರೀದಿಗೆ ಜಿಲ್ಲಾಡಳಿತ ಅವಕಾಶ ನೀಡಿತ್ತು. 10 ಗಂಟೆ ಬಳಿಕ ರೋಡಿಗಿಳಿದ ಪೊಲೀಸರು ರಸ್ತೆಗಳ ಮದ್ಯೆ ಬ್ಯಾರಿಕೇಡ್ ಹಾಕಿ ವಾಹನಗಳನ್ನ ತಡೆದು ವಾಪಾಸ್ ಕಳಿಸಿದರು, ಜನರು ಎಷ್ಟೇ ಕೇಳಿಕೊಂಡರು ಅನಗತ್ಯವಾಗಿ ಓಡಾಡಲು ಬಂದವರನ್ನ ಗುರ್ತಿಸಿದ ಪೊಲೀಸರು ಮನೆಗೆ ವಾಪಾಸ್ ಕಳಿಸಿದರು.
ಇನ್ನು ಕರ್ಪ್ಯೂ ನಿಯಮಗಳನ್ನ ಉಲ್ಲಂಘಿಸಿ ಓಡಾಡಿದ ವಾಹನ ಸವಾರರಿಗೆ ಪೊಲೀಸರು ಬಿಸಿ ಮುಟ್ಟಿಸಿದ್ದಾರೆ. ಜಿಲ್ಲೆಯಾದ್ಯಂತ 140 ಕ್ಕು ಹೆಚ್ಚು ಬೈಕ್‍ಗಳನ್ನ ಪೊಲೀಸರು ಜಪ್ತಿ ಮಾಡಿದ್ದಾರೆ. ಮಾಲೂರು ಪೊಲೀಸರು ಶನಿವಾರ ಮಧ್ಯಾಹ್ನ 100 ಕ್ಕೂ ಹೆಚ್ಚು ಬೈಕ್ ಗಳ ಜಪ್ತಿ ಮಾಡಿದ್ದಾರೆ. ಅನಗತ್ಯ ಒಡಾಟ ಮಾಡಿದ ಹಿನ್ನಲೆ, ಮಾಲೂರು ಠಾಣೆ ಸರ್ಕಲ್ ಇನ್ಸ್‌ಪೆಕ್ಟರ್ ಮಾರ್ಕೊಂಡಪ್ಪ, ಸಬ್ ಇನ್ಸ್‌ಪೆಕ್ಟರ್ ಅನಿಲ್ ನೇತೃತ್ವದಲ್ಲಿ ಕಾರ್ಯಾಚರಣೆ ನಡೆಸಿ 140 ಕ್ಕು ಹೆಚ್ಚು ಬೈಕ್ ಗಳನ್ನ ಜಪ್ತಿ ಮಾಡಿದರು.
ಬೈಕ್ ಜಪ್ತಿ ಮಾಡುತ್ತಿದ್ದಂತೆ ಮಾಲೂರು ಪೊಲೀಸ್ ಠಾಣೆ ಎದುರು ಬೈಕ್ ಸವಾರರು ಜಮಾಯಿಸಿದರು, ಪೊಲೀಸ್ ಠಾಣೆಗೆ ಬಂದು ದಂಡ ಕಟ್ಟುವುದಾಗಿ ಸವಾರರು ಕೇಳಿಕೊಂಡರು. ಇಲ್ಲ, ಆಗಲ್ಲ ಎಂದು ಪೊಲೀಸರು ಹೇಳಿ ವಾಪಾಸ್ ಕಳಿಸಿದರು. ಇನ್ನು ಕೋಲಾರದ ಹಲವೆಡೆ ಕರ್ಪ್ಯೂ ಪರಿಶೀಲನೆ ನಡೆಸಿದ ಕೋಲಾರ ಎಸ್ಪಿ ಕಾರ್ತಿಕ್ ರೆಡ್ಡಿ ಅನಗತ್ಯವಾಗಿ ಓಡಾಡದಂತೆ ಎಚ್ಚರಿಕೆ ನೀಡಿದ್ದು, ಕೊರೊನಾ ಕಫ್ರ್ಯೂ ಉಲ್ಲಂಘಿಸಿ ಓಡಾಡಿದವರ ವಿರುದ್ದ ನಿರ್ಧಾಕ್ಷಿಣ್ಯ ಕ್ರಮ ಜರುಗಿಸೊದಾಗಿ ಎಚ್ಚರಿಕೆ ನೀಡಿದರು.
ಕೊಲಾರದಲ್ಲಿ ಸೋಂಕಿತರ ಸಂಖ್ಯೆ ಏರಿಕೆ, ಚಿಕಿತ್ಸೆಗೆ ಹೆಚ್ಚು ಒತ್ತು ನೀಡುವುದಾಗಿ ಜಿಲ್ಲಾಧಿಕಾರಿ ಡಾ ಆರ್ ಸೆಲ್ವಮಣಿ ಹೇಳಿಕೆ: ಕೋಲಾರದಲ್ಲಿ ಶನಿವಾರ ಮತ್ತೆ ಕೊರೊನಾ ಸೋಂಕಿತ 7 ಮಂದಿ ಸಾವನ್ನಪ್ಪಿದ್ದು, ಜಿಲ್ಲೆಯಲ್ಲಿ 382 ಹೊಸ ಕೊರೋನಾ ಕೇಸ್ ಪತ್ತೆಯಾಗಿದೆ, ಜಿಲ್ಲೆಯಲ್ಲಿ ಸೋಂಕಿತರು ಹಾಗು ಸಾವಿನ ಪ್ರಮಾಣ ಹೆಚ್ಚುತ್ತಿದ್ದು, ಈ ಬಗ್ಗೆ ಮಾತನಾಡಿದ ಡಿಸಿ ಸೆಲ್ವಮಣಿ ಅವರು, ಜನರು ವೀಕೆಂಡ್ ಕಫ್ರ್ಯೂಗೆ ಉತ್ತಮ ಬೆಂಬಲ ನೀಡಿದ್ದಾರೆ, ಜಿಲ್ಲೆಯಲ್ಲಿ ಸಾವಿನ ಸಂಖ್ಯೆ ಹಾಗು ಸೋಂಕಿತರ ಸಂಖ್ಯೆ ಹೆಚ್ಚುತ್ತಿರುವುದು ಗಮನಕ್ಕೆ ಬಂದಿದೆ. ಈ ನಿಟ್ಟಿನಲ್ಲಿ ನಾವು ಗುಣಮಟ್ಟದ ಚಿಕಿತ್ಸೆ ನೀಡುವ ಕಡೆಗೆ ಹೆಚ್ಚು ಗಮನ ಹರಿಸಿದ್ದೇವೆ, ಜನರು ಸಹ ಸಾಮಾಜಿಕ ಅಂತರ ಕಾಯ್ದುಕೊಂಡು, ಮಾಸ್ಕ್ ಕಡ್ಡಾಯವಾಗಿ ಬಳಸಬೇಕು ಎಂದು ತಿಳಿಸಿದರು.
ವೀಕೆಂಡ್ ಕರ್ಫ್ಯೂ ಹಿನ್ನಲೆ ಏಷ್ಯಾದಲ್ಲಿಯೇ 2 ನೇ ಅತಿದೊಡ್ಡ ಟೊಮೆಟೊ ಮಾರುಕಟ್ಟೆ ಎಂದು ಖ್ಯಾತಿ ಗಳಿಸಿರುವ ಕೋಲಾರದ ಎಪಿಎಂಸಿ ಮಾರುಕಟ್ಟೆಯಲ್ಲಿ ವ್ಯಾಪಾರ ವಹಿವಾಟು ಸಂಪೂರ್ಣ ಸ್ಥಗಿತವಾಗಿತ್ತು. ಮಾರುಕಟ್ಟೆಯ 4 ಕಡೆಯ ಗೇಟ್ ಗಳನ್ನು ಬಂದ್ ಮಾಡಲಾಗಿತ್ತು. ಶುಕ್ರವಾರ ಸಾವಿರಾರು ಬಾಕ್ಸ್ ಟೊಮೆಟೊ ಬಿಕರಿಯಾಗದೆ ಹಾಗೆ ಉಳಿದಿದೆ.
ನಿಯಮ ಉಲ್ಲಂಘನೆ, ಕೋಲಾರದಲ್ಲಿ 140 ಕ್ಕೂ ಹೆಚ್ಚು ಬೈಕ್ ಜಪ್ತಿ
Photo Credit :
ಹನಿ ಹನಿ ಕೂಡಿ ಹಳ್ಳ
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.