News Kannada
Thursday, October 06 2022

ಕರ್ನಾಟಕ

ವಾರ್ಡ್ ಗಳಲ್ಲಿ ಚೆಕ್ ಪೋಸ್ಟ್ ರಚಿಸಿ ಅಗತ್ಯ ವಸ್ತುಗಳ ಖರೀದಿಗೆ ವ್ಯವಸ್ಥೆ - 1 min read

Photo Credit :

ವಾರ್ಡ್ ಗಳಲ್ಲಿ ಚೆಕ್ ಪೋಸ್ಟ್ ರಚಿಸಿ ಅಗತ್ಯ ವಸ್ತುಗಳ ಖರೀದಿಗೆ ವ್ಯವಸ್ಥೆ

ಶಿವಮೊಗ್ಗ: ನಾಳೆಯಿಂದ ವಾರ್ಡ್ ಗಳಲ್ಲಿ ಚೆಕ್ ಪೋಸ್ಟ್ ರಚಿಸಿ ಅಗತ್ಯ ವಸ್ತುಗಳನ್ನ ಖರೀದಿಸುವ ವ್ಯವಸ್ಥೆ ಮಾಡಲು ಇಂದು ನಡೆದ ಸಚಿವ ಈಶ್ವರಪ್ಪ ನೇತೃತ್ವದ ಸಭೆಯಲ್ಲಿ ಚರ್ಚಿಸಲಾಯಿತು.

 

ಜಿಲ್ಲೆಯಲ್ಲಿ 76 ಚೆಕ್ ಪೋಸ್ಟ್ ಗುರುತಿಸಲಾಗಿದೆ. ನಗರದಲ್ಲಿ 31 ಚೆಕ್ ಪೋಸ್ಟ್ ಗಳಿವೆ. ಈ ಮೊದಲ ಜತನಾ ಕರ್ಫ್ಯೂ ವಿನಲ್ಲಿ ೨೭ ೨೧೨೬ ವಾಹನಗಳನ್ನ ಸೀಜ್ ಮಾಡಲಾಗಿದೆ, ನಾಳೆಯಿಂದ ನಡೆಯುವ ಲಾಕ್ ಡೌನ್ ವೇಳೆಯಲ್ಲಿ ಸೀಜ್ ಆಗುವ ವಾಹನಗಳು 14 ದಿನ ಮುಗಿಯವರೆಗೂ ಮಾಲೀಕರಿಗೆ ಸಿಗುವುದಿಲ್ಲವೆಂದು ಸಭೆಗೆ ಜಿಲ್ಲಾ ರಕ್ಷಣಾಧಿಕಾರಿ ಲಕ್ಷ್ಮೀ ಪ್ರಸಾದ್ ತಿಳಿಸಿದರು.

 

ಅವರು ಜಿಲ್ಲಾ ಉಸ್ತುವಾರಿ ಸಚಿವ ಕೆ.ಎಸ್.ಈಶ್ವರಪ್ಪನವರ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ಮಾತನಾಡಿ, ಈಗಾಗಲೇ ಮಾಸ್ಕ್ ಜಾಗೃತಿಯನ್ನ ಜನರು ಶೇ. 80% ರಷ್ಟು ಮೂಡಿಸಲಾಗಿದೆ. ಕಮರ್ಷಿಯಲ್ 142 ಅಂಗಡಿಗಳನ್ನ ಸೀಜ್ ಮಾಡಲಾಗಿದೆ. ಮಾಲೀಕರ ಮೇಲೆ ಪ್ರಕರಣ ದಾಖಲಿಸಲಾಗಿದೆ. ನಾಳೆಯಿಂದ ನಡೆದುಕೊಂಡು ಇತರೆ ಬಡಾವಣೆಗೂ ಹೋಗಲು‌ ಅವಕಾಶವಿಲ್ಲ. ತರಕಾರಿ ಹಾಲು ಖರೀದಿಗೆ ಅವಕಾಶ ಮಾಡಲಾಗಿದೆ ಎಂದರು.

 

ಆಕ್ಸಿಜನ್ ಪ್ರಕರಣಗಳು ಎರಡು ಪ್ರಕರಣಗಳನ್ನ ದಾಖಲಿಸಲಾಗಿದೆ. ಮೆಗ್ಗಾನ್ ಕೋವಿಡ್ ವಾರ್ಡ್ ನಲ್ಲಿ ಯಾರಿಗೂ ಬಿಡಬಾರದು ಆದರೆ ಆ ಕೋವಿಡ್ ವಾರ್ಡ್ ನಲ್ಲಿ ಸೋಂಕಿತರ ಸಂಬಂಧಿಕರು ಹೆಚ್ಚಿದ್ದಾರೆ ಎಂದು ಎಸ್ಪಿ ತಿಳಿಸಿದರು. ಇದಕ್ಕೆ ಉತ್ತರಿಸಿದ ಸಚಿವರು ಪಿಪಿ ಕಿಟ್ ಹಾಕಿಕೊಂಡು ಹೋಗಲು ಅವಕಾಶವಿಲ್ಲ. ಫೋನ್ ಕೊಟ್ಟು ಕುಟುಂಬಸ್ಥರಿಗೆ ರೋಗಿಗಳೊಂದಿಗೆ ಅವಕಾಶ ಮಾಡಿಕೊಡುವಂತೆ ಸೂಚಿಸಿದರು.

 

ಹಾಪ್ ಕಾಮ್ಸ್ ಗೆ ಪಾಲಿಕೆಯಿಂದ 70 ವಾಹನ ತರಕಾರಿ ಮಾರಲು ಅವಕಾಶ ಕಲ್ಪಿಸಲಾಗಿದೆ. ಎಪಿಎಂಸಿ ಹೊರಗಡೆ ಚಿಲ್ಲರೆ ಮಾರದಂತೆ ಪಾಲಿಕೆ ಆಯುಕ್ತರಿಗೆ ಸಚಿವರ ಸೂಚನೆ.ನೀಡಿದರು. 6-12ಗಂಟೆಯ ವರೆಗೆ ತಳ್ಳುವ ಗಾಡಿಗೆ ಅವಕಾಶ ಸೂಚಿಸಲಾಗಿದೆ.

 

ವಾರ್ಡ್ ನಲ್ಲಿ ಚೆಕ್ ಪೋಸ್ಟ್ ರಚಿಸಿ ಜನರಿಗೆ ಓಡಾಡಲು ಅವಕಾಶವಿಲ್ಲವೆಂದರು.

ಪಂಚಾಯಿತಿಯಲ್ಲಿ 6-12 ರವರೆಗೆ ಓಡಾಡಲು ಅವಕಾಶ ಕಲ್ಪಿಸಲು ಸಭೆ ತೀರ್ಮಾನಿಸಲಾಯಿತು.

 

ಸಣ್ಣ ಸಣ್ಣ ಹಳ್ಳಿಗಳಲ್ಲಿ ವಾರಕ್ಕೆ ಎರಡು ದಿನಕ್ಕೆ ತರಕಾರಿ ಗಾಡಿಗಳನ್ನ ಒದಗಿಸಲು ಸೂಚಿಸಲಾಯಿತು. ನಂತರ ಮಾತನಾಡಿದ ಸಚಿವರು ಇದುವರೆಗೂ ಇತರೆ ಜಿಲ್ಲೆಗಿಂತ ಶಿವಮೊಗ್ಗ ಚೆನ್ನಾಗಿದೆ. ಸೋಂಕು ನಿಯಂತ್ರಣವಿದೆ. ಮುಂದಿನ ದಿನಗಳಲ್ಲಿ ಯಾವುದಾದರೂ ಲೋಪದೋಷ ಕಂಡುಬಂದರೆ ಅಧಿಕಾರಿಗಳೇ ನೇರ ಹೊಣೆ ಎಂದರು.

See also  ಬತ್ತಿ ಹೋದ ಹೇಮಾವತಿ ನದಿ: ಕೆ.ಆರ್.ಪೇಟೆಯಲ್ಲಿ ನೀರಿಗೆ ಬರ?
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published.

190
Ismail M Kutty

Read More Articles
Subscribe to our Brand New YouTube Channel

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು