News Kannada
Thursday, October 06 2022

ಕರ್ನಾಟಕ

ಲಸಿಕೆ ಪಡೆಯಲು ಬೆಂಗಳೂರಿನಿಂದ ಬಂದ ಜನ, ಸ್ಥಳೀಯರಿಗೆ ಕೊರೋನ ಭೀತಿ - 1 min read

Photo Credit :

ಲಸಿಕೆ ಪಡೆಯಲು ಬೆಂಗಳೂರಿನಿಂದ ಬಂದ ಜನ, ಸ್ಥಳೀಯರಿಗೆ ಕೊರೋನ ಭೀತಿ

ಗುಡಿಬಂಡೆ(ಚಿಕ್ಕಬಳ್ಳಾಪುರ) : ಪಟ್ಟಣದ ಸಾರ್ವಜನಿಕರ ಆಸ್ಪತ್ರೆಯಲ್ಲಿ ಕೋವಿಡ್ ಲಸಿಕೆ ತೆಗೆದುಕೊಳ್ಳಲು ಬೆಳ್ಳಂಬೆಳಿಗ್ಗೆ ಬೆಂಗಳೂರಿಗರು ಆಗಮಿಸಿದ್ದು, ಸುಮಾರು ನೂರಕ್ಕೂ ಹೆಚ್ಚು ಜನ ಅಗಮಿಸಿದ್ದರಿಂದ ಸ್ಥಳೀಯರು ಭಯಭೀತರಾಗಿದ್ದಾರೆ.

ಬೆಂಗಳೂರಿನಲ್ಲಿ ಕೋವಿಡ್ ಸೋಂಕು ಪ್ರಕರಣ ಜಾಸ್ತಿ ಇರುವುದರಿಂದ, ಅಲ್ಲಿಯವರು ಇಲ್ಲಿಗೆ ಬಂದರೆ ಸೋಂಕು ಹೆಚ್ಚಾಗುತ್ತದೆ ಎಂಬ ಭೀತಿಯಲ್ಲಿ ಇರುವಾಗಲೇ ಏಕಾಏಕಿ ಇಂದು ಒಂದೇ ದಿನ 100 ಕ್ಕೂ ಹೆಚ್ಚು ಸಂಖ್ಯೆಯಲ್ಲಿ ಆಸ್ಪತ್ರೆಯ ಮುಂದೆ ಜಮಾಯಿಸಿದ್ದರು.

ನಂತರ ಇವರು ಆನ್ ಲೈನ್ ಮೂಲಕ ಕೋವಿಡ್ ಲಸಿಕೆ ಪಡೆದುಕೊಳ್ಳಲು ಬಂದಿದ್ದಾರೆ ಎಂದು ತಿಳಿದುಕೊಂಡು ಸ್ಥಳೀಯರು ಕೊಂಚ ನಿಟ್ಟುಸಿರು ಬಿಟ್ಟರು. ಆದರೂ ಆಸ್ಪತ್ರೆಗೆ ಚಿಕಿತ್ಸೆಗೆ ಬಂದಿದ್ದ ಸ್ಥಳೀಯರು, ಮಹಿಳೆಯರು, ಗರ್ಭಿಣಿಯರು, ಬೆಂಗಳೂರಿಗರು ಇಲ್ಲಿಗೆ ಯಾಕೆ ಬಂದರು, ಅಲ್ಲಿಂದ ಇಲ್ಲಿಗೆ ಬಂದು ರೋಗ ಹರುಡುತ್ತಾರೆ ಎಂದು ಅವರ ಮೇಲೆ ಹಿಡಿ ಶಾಪಗಳನ್ನು ಹಾಕಿದ್ದಾರೆ.

ಆಸ್ಪತ್ರೆಯಲ್ಲಿ ಇವರು ಯಾವುದೇ ಸಾಮಾಜಿಕ ಅಂತರ ಕಾಯ್ದು ಕೊಳ್ಳದೆ ರಾಜಾರೋಷವಾಗಿ ತಿರುಗಾಡುತ್ತಿದ್ದರು. ಪರಿಸ್ಥಿತಿ ಹತೋಟಿ ಮೀರುತ್ತಿದ್ದಂತೆ ಸ್ಥಳಕ್ಕೆ ಆಗಮಿಸಿದ ಪೊಲೀಸ್ ಸಿಬ್ಬಂದಿಗಳಿಗೆ ಸಹ ಅವರನ್ನು ಅಂತರ ಇಟ್ಟುಕೊಂಡು ನಿಲ್ಲಿಸುವಲ್ಲಿ ಹರಸಾಹಸವನ್ನೇ ಪಡಬೇಕಾಯಿತು.

ಬೆಂಗಳೂರಿಗರು ಅಲ್ಲಿರುವ ಆಸ್ಪತ್ರೆಗಳಲ್ಲಿ ಲಸಿಕೆ ಪಡೆಯದೆ ಇಲ್ಲಿಗೆ ಯಾಕೆ ಬಂದರು ಅನ್ನುವುದು ಸ್ಥಳೀಯರಲ್ಲಿ ಮೂಡಿದ ಯಕ್ಷ ಪ್ರಶ್ನೆಯಾಗಿದೆ.

See also  ಮದುವೆಯಾಗಿ ೧ ತಿಂಗಳಲ್ಲೇ ಪತಿ ಆತ್ಮಹತ್ಯೆ: ಮನನೊಂದು ಪತ್ನಿಯು ಸಾವಿಗೆ ಶರಣು
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published.

205
Subscribe to our Brand New YouTube Channel

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು