News Kannada
Friday, October 07 2022

ಕರ್ನಾಟಕ

ಲಾಕ್​ಡೌನ್ ಇದ್ರೂ ಕಾಲೇಜು ಓಪನ್ - 1 min read

Photo Credit :

ಲಾಕ್​ಡೌನ್ ಇದ್ರೂ ಕಾಲೇಜು ಓಪನ್

ಹಾವೇರಿ: ಕರೊನಾ ಚೈನ್​ ಲಿಂಕ್​ ಕತ್ತರಿಸಲು ರಾಜ್ಯಾದ್ಯಂತ ಕಟ್ಟುನಿಟ್ಟಿನ ಲಾಕ್​ಡೌನ್​ ಜಾರಿಯಾಗಿದೆ. ಶಾಲಾ-ಕಾಲೇಜುಗಳನ್ನ ಬಂದ್​ ಮಾಡುವಂತೆ ರಾಜ್ಯ ಸರ್ಕಾರ ಸೂಚಿಸಿದೆ. ಆದರೆ ಇಲ್ಲಿನ ಪ್ರತಿಷ್ಠಿತ ಕಾಲೇಜು ಸಂಸ್ಥೆಯೊಂದು ಲಾಕ್​ಡೌನ್ ಇದ್ದರೂ ಉಪನ್ಯಾಸಕರನ್ನ ಕಾಲೇಜಿಗೆ ಕರೆಸಿಕೊಂಡು ಕೆಲಸ ಮಾಡಿಸುತ್ತಿದೆ.
ಹಾವೇರಿಯ ಕೊಲ್ಲಿ ಪಾಲಿಟೆಕ್ನಿಕ್ ಕಾಲೇಜಿನಲ್ಲಿ ಇಂದು ಬೆಳಗ್ಗೆ ಹತ್ತಕ್ಕೂ ಹೆಚ್ಚು ಉಪನ್ಯಾಸಕರು ಕೆಲಸಕ್ಕೆ ಹಾಜರಾಗಿದ್ದಾರೆ. ಬೆಳಗ್ಗೆ 7ರಿಂದ 9ರ ವರೆಗೂ ಸಿಬ್ಬಂದಿ ಕಾಲೇಜಿಗೆ ಬರುವುದು ಕಡ್ಡಾಯವಂತೆ. ಉಪನ್ಯಾಸಕರು ಕಾಲೇಜಿನಲ್ಲಿ ಡ್ಯೂಟಿ ಮಾಡಬೇಕಂತೆ. ನಂತರ ಮನೆಗೆ ಹೋಗಿ ಆನ್​ಲೈನ್ ಕ್ಲಾಸ್ ತೆಗೆದುಕೊಳ್ಳಬೇಕಂತೆ. ಇದು ಕೊಲ್ಲಿ ಪಾಲಿಟೆಕ್ನಿಕ್ ಕಾಲೇಜು ಪ್ರಿನ್ಸಿಪಾಲ್ ಚನ್ನಪ್ಪ ಬಿ. ಅವರ ಆದೇಶವಂತೆ! ಇತ್ತ ಕಾಲೇಜು ಒಳಗೆ ಲೆಕ್ಚರರ್​ ಇದ್ದರೆ ಅತ್ತ ಗೇಟ್​ ಮುಂದೆ ನಿಂತು ಪ್ರಿನ್ಸಿಪಾಲ್ ವಾಚ್​ ಮಾಡುತ್ತಿದ್ದ ದೃಶ್ಯ ಇಂದು ಬೆಳಗ್ಗೆ ಕಂಡು ಬಂತು.
ಕಾಲೇಜಿಗೆ ಬರಲ್ಲಾ ಎಂದರೆ ನಮಗೆ ತೊಂದರೆ ಕೊಡ್ತಾರೆ. ಈಗಾಗಲೆ ಕರೊನಾ ಸೋಂಕಿಗೆ ಕಾಲೇಜಿನ ಟೆಕ್ನಿಕಲ್ ಇನ್​ಸ್ಪೆಕ್ಟರ್ ಒಳಗಾಗಿದ್ದಾರೆ. ಇಷ್ಟಾದರೂ ಉಪನ್ಯಾಸಕರು ಬಂದು ಕಾಲೇಜಿನಲ್ಲಿ ಕೆಲಸ ಮಾಡಬೇಕಂತೆ. ಕೆಲಸ ಇದ್ದರೂ ಇಲ್ಲದಿದ್ದರೂ ಕಾಲೇಜಿಗೆ ಲೆಕ್ಚರರ್ ಬರಲೇಬೇಕು ಎಂದು ಉಪನ್ಯಾಸಕರು ಅಳಲು ತೋಡಿಕೊಂಡಿದ್ದಾರೆ. ಇತ್ತ ಮಾಧ್ಯಮ ಕ್ಯಾಮರಾ ನೋಡಿ ಕಾಲೇಜು ಪ್ರಿನ್ಸಿಪಾಲ್ ಮತ್ತು ಲೆಕ್ಚರರ್ ಕಕ್ಕಾಬಿಕ್ಕಿಯಾದರು. ಮಾಹಿತಿ ನೀಡದೆ ಕ್ಯಾಮರಾ ಆನ್ ಮಾಡಬೇಡಿ ಎಂದು ಪ್ರಿನ್ಸಿಪಾಲ್ ದೂರ ಸರಿದರು. ಇವತ್ತು ಅಮವಾಸ್ಯೆ ಇದೆ. ಹಾಗಾಗಿ ಲೆಕ್ಚರರ್ ಬಂದಿದ್ದಾರೆ ಎಂದರು. ಟಿವಿ ಕ್ಯಾಮರಾ ನೋಡಿ ಒಬ್ಬೊಬ್ಬರೇ ಹೊರಗೆ ಬಂದು ಮನೆಯತ್ತ ಮುಖ ಮಾಡಿದರು.ನನ್ನ ಪತ್ನಿ ಈ ಕಾಲೇಜಿನಲ್ಲಿ ಕೆಲಸ ಮಾಡುತ್ತಿದ್ದಾರೆ. 10 ದಿನಗಳಿಂದ ಕಾಲೇಜು ಓಪನ್ ಇದೆ. ನಾವು ಎಷ್ಟು ಹೇಳಿದರೂ ಕೇಳ್ತಾ ಇಲ್ಲಾ. ಈಗಾಗಲೇ ಕಾಲೇಜು ಸಿಬ್ಬಂದಿಯೊಬ್ಬರಿಗೆ ಕರೊನಾ ಬಂದಿದೆ. ನಮಗೆ ಏನಾದರೂ ಆದರೆ ಯಾರು ಹೊಣೆ? ಎಂದು ಆಡಳಿತ ಮಂಡಳಿ ವಿರುದ್ಧ ಆರೋಪ ಮಾಡಿದ ಉಪನ್ಯಾಸಕಿಯ ಪತಿ ಆತಂಕ ವ್ಯಕ್ತಪಡಿಸಿದ್ದಾರೆ.

See also  ವಿಧಾನಸಭೆ, ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಗೆ ಜಯ: ಸಿಎಂ ವಿಶ್ವಾಸ
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published.

145
Subscribe to our Brand New YouTube Channel

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು