ಶಿವಮೊಗ್ಗ: ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಮನೆಯಲ್ಲಿ ಹೋಂ ಐಸೋಲೇಷನ್ ಇರದಂತೆ ಇಂದು ನಡೆದ ಮಹಾನಗರ ಪಾಲಿಕೆ ಸಭೆಯಲ್ಲಿ ಚರ್ಚಿಸಲಾಯಿತು. ಎ ಸಿಂಪ್ಟಮೆಟಿಕ್ ಕೊರೋನ ಸೀಂಕಿತರನ್ನ ಕೋವಿಡ್ ಕೇರ್ ಸೆಂಟರ್ ನಲ್ಲಿರಿಸಲು ಚರ್ಚೆ ನಡೆಯಿತು.
ಪಾಲಿಕೆ ಸದಸ್ಯ ಹೆಚ್ ಸಿ ಯೋಗೀಶ್ ಮಾತನಾಡಿ, ಗಾಜನೂರಿನಲ್ಲಿನ ಕೋವಿಡ್ ಸೆಂಟರ್ ನಲ್ಲಿ ದಾಖಲಾದ ಸೋಂಕಿತನು ಮನೆಯಲ್ಲಿ ಇರುತ್ತೇನೆಂದು ಶಿಫಾರಸ್ಸಿಗೆ ಓಡಾಡುತ್ತಾನೆ ಶಿಫಾರಸ್ಸಿಗೆ ಮಣಿಯದಂತೆ ತೀರ್ಮಾನಿಸಿ ಎಂದು ತಿಳಿಸಿದರು.
35 ವಾರ್ಡ್ ನಲ್ಲಿರುವ ಜನರಿಗೆ ಕೊರೋನ ಸೋಂಕು ಬಂದರೆ ಆರೋಗ್ಯ ಇಲಾಖೆಗೆ ಕೋವಿಡ್ ಕೇರ್ ಸೆಂಟರ್ ನಲ್ಲಿ ಇಡಲು ಸಾಧ್ಯವಾ ಎಂದು ಸಚಿವ ಈಶ್ವರಪ್ಪ ಕೇಳಿದರು. ಇದಕ್ಕೆ ಒಪ್ಪಿ ಡಿಹೆಚ್ ಒ ಡಾ.ಸುರಗೀಹಳ್ಳಿಗೆ ಸಚಿವರು ಆರೋಗ್ಯ ಇಲಾಖೆ ಮತ್ತು ಪಾಲಿಕೆವತಿಯಿಂದ ಮಂಗಳವಾರದ ಒಳಗೆ 35 ವಾರ್ಡ್ ನಲ್ಲಿ 9 ಕೋವಿಡ್ ಸೆಂಟರ್ ತೆರೆಯಲು ಸೂಚಿಸಿದರು.
ಬೆಡ್ , ಮೆಡಿಸಿನ್ ತಯಾರು ಮಾಡಿ, ವೈದ್ಯರನ್ನ ನರ್ಸ್ ಗಳನ್ನ ಆರೋಗ್ಯ ಇಲಾಖೆ ನೇಮಿಸಿ ಮಂಗಳವಾರದ ನಂತರ ಯಾವ ಸೋಂಕಿತರು ಮನೆಯಲ್ಲಿ ಹೋಂ ಐಸೋಲೇಷನ್ ನಲ್ಲಿಡುವಹಾಗಿಲ್ಲ. ನಾಲ್ಕು ವಾರ್ಡ್ ಗೆ ಒಂದು ಕೋವಿಡ್ ಕೇರ್ ಸೆಂಟರ್ ತಯಾರಿಸಿ ಎಂದು ಸಚಿವರು ಸೂಚಿಸಿದರು.
ಯಾರು ಕೋವಿಡ್ ಕೇರ್ ಸೆಂಟರ್ ನಲ್ಲಿ ಇರಲು ಇಷ್ಟಪಡುವುದಿಲ್ಲವೋ ಅವರನ್ನ ಬಂಧಿಸಿ ಸೇರಿಸಲಾಗುವುದು. ಪ್ರತಿ ಕೋವಿಡ್ ಕೇರ್ ಸೆಂಟರ್ ನಲ್ಲಿ ಪೊಲೀಸರನ್ನ ನೇಮಿಸಲಾಗುವುದು ಎಂದು ಸೂಚಿಸಿದರು.
ಹೋಟೆಲ್ ಬೇಕು ಎನ್ನುವವರಿಗೆ ಹೀಟೆಲ್ ನೀಡಲಾಗುವುದು. ಆದರೆ ಹೋಟೆಲ್ ಬೇಕು ಎನ್ನುವವರು ಹಣ ಅವರೇ ಭರಿಸುವಂತೆ ತೀರ್ಮಾನಿಸಲಾಯಿತು.
ಪಾಲಿಕೆ ವ್ಯಾಪ್ತಿಯಲ್ಲಿ ಹೋಂ ಐಸೋಲೇಷನ್ 931 ಇದ್ದಾರೆ. 231 ಜನ ಗಾಜನೂರಿನಲ್ಲಿ ಕೊರೋನ ಎ ಸಿಂಪ್ಟಮೆಟಿಕ್ ಸೋಂಕಿತರು ಇದ್ದಾರೆ. ಶುಭಮಂಗಳ, ಆದಿ ಚುಂಚನಗಿರಿಯಲ್ಲಿ ಈಗ ಸೋಂಕಿತರು ಇದ್ದಾರೆ. ಎಂದು ಪಾಲಿಕೆ ಆಯುಕ್ತರು ಸೂಚನೆ ನೀಡಿದರು.