News Kannada
Thursday, December 01 2022

ಕರ್ನಾಟಕ

ಬೆಳ್ತಂಗಡಿ: ಕಾರಿಗೆ ನೀರು ಹಾರಿತು ಎಂದು ವ್ಯಕ್ತಿಗೆ ಹಲ್ಲೆ - 1 min read

Photo Credit :

‘ಡಾರ್ಲಿಂಗ್ಸ್’ ಚಿತ್ರದ ಸಿದ್ಧತೆಯಲ್ಲಿ ನಟಿ ಆಲಿಯಾ ಭಟ್

ಬೆಳ್ತಂಗಡಿ: ಅಳದಂಗಡಿ ಕಾರಿಗೆ ಕೆಸರು ನೀರು ಹಾರಿತು ಎಂಬ ಕ್ಷುಲಕ್ಕ ಕಾರಣಕ್ಕೆ ಇಬ್ಬರು ಚಾಲಕರ ನಡುವೆ ವಾಗ್ವಾದ ನಡೆದಿದ್ದು, ಈ ವೇಳೆ ಅಣ್ಣಪ್ಪ ಮೇಲೆ ಸಾಧಿಕ್ ಬಳೆಂಜ ಮತ್ತು ಸಿರಾಜ್ ಕಾಪಿನಡ್ಕ ಹಲ್ಲೆ ನಡೆಸಿದ ಘಟನೆ ಇಂದು ಬೆಳ್ತಂಗಡಿ ತಾಲೂಕಿನ ಅಳದಂಗಡಿ ಗ್ರಾಮದ ಪಿಲ್ಯದಲ್ಲಿ ನಡೆದಿದೆ.

ಬೆಳ್ತಂಗಡಿ ತಾಲೂಕಿನ ಅಡಿಕೆ ವ್ಯಾಪಾರಿ ಬಳಂಜದ ಸಾದಿಕ್ ಎಂಬವರ ಮಾರುತಿ ಕಾರ್ (KA02M3548) ಗೆ ಸುಲ್ಕೇರಿಯಿಂದ ಬೆಳ್ತಂಗಡಿಯತ್ತ ತಮ್ಮ ಕೆಲಸಕ್ಕೆ ತೆರಳುತ್ತಿದ್ದ ಲಾರಿ ಮಾಲಕರಾಗಿರುವ ಅಣ್ಣಪ್ಪ (28)ಎಂಬವರ ಫಿಗೋ ಕಾರು(KA03MM0463) ಪಿಲ್ಯ ಮಾರಿಗುಡಿ ಬಳಿ ಮಾರ್ಗ ಬದಿ ಹಾದು ಹೋಗುವಾಗ ಆಕಸ್ಮಿಕವಾಗಿ ಮಳೆಯ ಕೆಸರು ನೀರು ಹಾರಿದ್ದು ಇದರಿಂದ ಕೋಪಗೊಂಡ ಸಾದಿಕ್ ಮತ್ತು ಸಿರಾಜ್ ಸೇರಿ ಅಣ್ಣಪ್ಪ ಅವರ ಫಿಗೋ ಕಾರನ್ನು ಅಡ್ಡಗಟ್ಟಿ ನಿಂದಿಸಿ ಬೆದರಿಕೆ ಹಾಕಿ ನಂತರ ಕಾರಿನಲ್ಲಿದ್ದ ರಾಡ್(ರಿವರ್) ಸಿರಾಜ್ ತಂದು ಸಾದಿಕ್ ಕೈಗೆ ನೀಡಿ ಹಲ್ಲೆ ಮಾಡಿದ್ದಾರೆ.

ಅದಲ್ಲದೆ ಅಣ್ಣಪ್ಪ ಅವರ ಮೊಬೈಲ್ ರಸ್ತೆಗೆ ಎಸೆದು ಹಾನಿಗೊಳಿಸಿದ್ದಾರೆ. ಸ್ಥಳದಲ್ಲಿ ಜನ ಸೇರಿದ್ದನ್ನು ನೋಡಿದ ಸಾಧಿಕ್ ಮತ್ತು ಸಿರಾಜ್ ಮಾರುತಿ ಕಾರು ಸಮೇತ ಪರಾರಿಯಾಗಿದ್ದಾರೆ. ಅಣ್ಣಪ್ಪ ಅವರ ಸೋಂಟ ,ಭುಜಕ್ಕೆ , ಎರಡು ಕೈ ಬೆರಳಿಗೆ ರಾಡ್ ನ ಹಲ್ಲೆಯಿಂದ ಗಾಯವಾಗಿದ್ದು ಸ್ಥಳೀಯರು ಸೇರಿ ಪ್ರಾಥಮಿಕ ಆರೋಗ್ಯ ಕೇಂದ್ರ ಅಳದಂಗಡಿಗೆ ದಾಖಲಿಸಿ ಚಿಕಿತ್ಸೆ ಕೊಡಿಸಿದ್ದಾರೆ.ನಂತರ ಪೊಲೀಸರು ಅಣ್ಣಪ್ಪ ನೀಡಿದ ದೂರಿಗೆ ಸಾದಿಕ್ ಮತ್ತು ಸಿರಾಜ್ ಇಬ್ಬರ ವಿರುದ್ಧ IPC 1860(U/s-323,324,341,504,506,427,34) ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಸಾಧಿಕ್ ಮತ್ತು ಸಿರಾಜ್ ಇಬ್ಬರು ಕೂಡ ಅಣ್ಣಪ್ಪ ನೀಡಿದ ದೂರಿನ ಭಯಕ್ಕೆ ಗುರುವಾಯನಕೆರೆಯ ಖಾಸಗಿ ಆಸ್ಪತ್ರೆಗೆ ದಾಖಲಾಗಿ ಅಣ್ಣಪ್ಪ ಅವರು ಹಲ್ಲೆ ಮಾಡಿದ್ದರಿಂದ ಎದೆನೋವು ಕಾಣಿಸಿದೆ ಎಂದು ಪೊಲೀಸರಿಗೆ ದೂರು ನೀಡಿದ್ದಾರೆ.

See also  ಏಕದಿನ ಕ್ರಿಕೆಟ್ ಪಂದ್ಯಾಟ: ಟಾಸ್ ಗೆದ್ದು ಬ್ಯಾಟಿಂಗ್ ಹಿಡಿದ ಆಸ್ಟ್ರೇಲಿಯಾ
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published.

149

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು