News Kannada
Friday, December 09 2022

ದೇಶ-ವಿದೇಶ

ಅಡುಗೆ ಎಣ್ಣೆ ಮೇಲಿನ ಆಮದು ಸುಂಕ ಶೇಕಡಾ 5 ರಷ್ಟು ಕಡಿತಗೊಳಿಸಿದ ಕೇಂದ್ರ

Photo Credit :

ನವದೆಹಲಿ : ಬಹಳ ದಿನಗಳಿಂದ ಅಡುಗೆ ಎಣ್ಣೆ ಬೆಲೆ ಕೇಳಿ ಶಾಕ್​ ಆಗಿದ್ದ ಮಹಿಳೆಯರಿಗೆ ಈಗ ಸಿಹಿಸುದ್ದಿ ಸಿಕ್ಕಿದೆ. ಶೀಘ್ರದಲ್ಲೇ ಅಡುಗೆ ಎಣ್ಣೆ ಬೆಲೆ ಇಳಿಕೆಯಾಗಲಿದೆ ಎಂಬ ಮಾಹಿತಿ ಲಭ್ಯವಾಗಿದೆ. ಕಚ್ಚಾ ತಾಳೆ ಎಣ್ಣೆಗೆ ವಿಧಿಸುವ ಸುಂಕವನ್ನು ಕಡಿಮೆ ಮಾಡಲು ಕೇಂದ್ರ ಸರ್ಕಾರ ನಿರ್ಧರಿಸಿದೆ. ಬೆಲೆ ಏರಿಕೆಯ ಸಂದರ್ಭದಲ್ಲಿ ಸರ್ಕಾರದ ಈ ತೀರ್ಮಾನದಿಂದ ದೇಶದ ಜನರಿಗೆ ಸ್ವಲ್ಪ ರಿಲೀಫ್​ ಸಿಕ್ಕಂತಾಗಿದೆ. ಕೇಂದ್ರ ಸರ್ಕಾರ ಕ್ರೂಡ್​ ಪಾಮ್​ ಆಯಿಲ್(ಕಚ್ಚಾ ತಾಳೆ ಎಣ್ಣೆ)ಮೇಲಿನ ಸುಂಕವನ್ನು ಶೇಕಡಾ 5ರಷ್ಟು ಕಡಿತಗೊಳಿಸಿದೆ.
’ಕಳೆದೊಂದು ತಿಂಗಳಿನಿಂದ ಕಚ್ಚಾ ಖಾದ್ಯ ತೈಲದ ಅಂತರಾಷ್ಟ್ರೀಯ ಬೆಲೆ ಮತ್ತು ರಿಫೈನ್ಡ್​ ಪಾಮ್​ ಆಯಿಲ್​​ ಬೆಲೆಗಳು ಇಳಿಮುಖವಾಗುತ್ತಿವೆ. ದೇಶೀಯ ಸಂಸ್ಕರಿಸಿದ ತಾಳೆ ಎಣ್ಣೆ ಮತ್ತು ಕಚ್ಚಾ ಖಾದ್ಯ ತೈಲದ ಬೆಲೆಗಳು ಹೆಚ್ಚಾಗಿದ್ದವು. ಖಾದ್ಯ ತೈಲದ ಬೆಲೆ ಏರಿಕೆಯ ಬಗ್ಗೆ ಗ್ರಾಹಕರ ಹಿತಾಸಕ್ತಿಯನ್ನು ಗಮನದಲ್ಲಿಟ್ಟುಕೊಂಡು ಸರ್ಕಾರ ಕಚ್ಚಾ ಪಾಮ್​ ಆಯಿಲ್​ ಮೇಲಿನ ಸುಂಕವನ್ನು ಕಡಿಮೆ ಮಾಡಿದೆ ಎಂದು ಗ್ರಾಹಕ ವ್ಯವಹಾರ, ಆಹಾರ ಮತ್ತು ಸಾರ್ವಜನಿಕ ವಿತರಣಾ ಸಚಿವಾಲಯ ಪ್ರಕಟಣೆಯಲ್ಲಿ ತಿಳಿಸಿದೆ.
“ಹಣಕಾಸು ಸಚಿವಾಲಯವು ಅಧಿಸೂಚನೆ ಸಂಖ್ಯೆ 34/2021-ಜೂನ್ 29, 2021 ರ ಕಸ್ಟಮ್ಸ್ ಕಚ್ಚಾ ತಾಳೆ ಎಣ್ಣೆ ಮೇಲಿನ ಸುಂಕವನ್ನು 15% ರಿಂದ 10% ಕ್ಕೆ ಇಳಿಸಿದೆ. ಈ ಆದೇಶ 2021 ರ ಜೂನ್​ 30ರಿಂದ ಸೆಪ್ಟೆಂಬರ್ 30, 2021 ರವರೆಗೆ ಜಾರಿಯಲ್ಲಿರುತ್ತದೆ”ಎಂದು ಪ್ರಕಟಣೆಯಲ್ಲಿ ಉಲ್ಲೇಖಿಸಲಾಗಿದೆ. ದಕ ಕಡಿತದ ನಂತರ, ಕಚ್ಚಾ ತಾಳೆ ಎಣ್ಣೆ ಮೇಲಿನ ತೆರಿಗೆ ದರ ಶೇ.30.25 ಆಗಿರುತ್ತದೆ. ಇದರಲ್ಲಿ ಹೆಚ್ಚುವರಿ ಕೃಷಿ ತೆರಿಗೆ ಶೇ. 17.5 ಮತ್ತು ಸಮಾಜ ಕಲ್ಯಾಣ ತೆರಿಗೆ ಶೇ.10ರಷ್ಟು ಇರುತ್ತದೆ. ಈ ಕಡಿತವು ಖಾದ್ಯ ತೈಲಗಳ ಚಿಲ್ಲರೆ ಬೆಲೆಗಳನ್ನು ತಗ್ಗಿಸುತ್ತದೆ. ಶುಲ್ಕಗಳಲ್ಲಿನ ಈ ಕಡಿತವು ಸೆಪ್ಟೆಂಬರ್​ 30ರವರೆಗೆ ಅನ್ವಯಿಸುತ್ತದೆ.
ಸಂಸ್ಕರಿಸಿದ ತಾಳೆ ಎಣ್ಣೆಯ ಬೆಲೆಯನ್ನು ಕಡಿಮೆ ಮಾಡಲು ಆಹಾರ ಮತ್ತು ಸಾರ್ವಜನಿಕ ವಿತರಣಾ ಇಲಾಖೆ (ಡಿಎಫ್‌ಪಿಡಿ) ಆರ್‌ಬಿಡಿ ಪಾಮೋಲಿನ್​​​ ಆಮದಿನ ಮೇಲಿನ ನಿರ್ಬಂಧವನ್ನು ತೆಗೆದುಹಾಕುವಂತೆ ಶಿಫಾರಸ್ಸು ಮಾಡಿದೆ. ದೇಶೀಯ ಗ್ರಾಹಕರಿಗೆ ಕಡಿಮೆ ಬೆಲೆಯಲ್ಲಿ ಎಣ್ಣೆ ಲಭ್ಯವಾಗುವಂತೆ ಡಿಎಫ್​ಪಿಡಿ ಹೇಳಿದೆ. ಜೊತೆಗೆ ಸಂಸ್ಕರಿಸಿದ ತಾಳೆ ಎಣ್ಣೆಯನ್ನು ಮುಕ್ತ ಸಾಮಾನ್ಯ ಆಮದುಗಳಲ್ಲಿ ಇರಿಸಿದೆ. 2021 ರ ಜೂನ್ 30 ರ ವಾಣಿಜ್ಯ ಇಲಾಖೆ ಅಧಿಸೂಚನೆ ಸಂಖ್ಯೆ 10 / 2015-2020 ರಿಫೈನ್ಡ್ ಬ್ಲೀಚ್ಡ್ ಡಿಯೋಡರೈಸ್ಡ್ (ಆರ್ಬಿಡಿ) ಪಾಮ್ ಆಯಿಲ್ ಮತ್ತು ಆರ್​​ಬಿಡಿ ಪಾಮೋಲಿನ್​ಗಾಗಿ​​ ಪರಿಷ್ಕೃತ ಆಮದು ನೀತಿಯನ್ನು ಬದಲಾಯಿಸಿದೆ. ಈ ನೀತಿಯು ಕೂಡಲೇ ಜಾರಿಯಾಗಲಿದ್ದು, ಡಿಸೆಂಬರ್ 31ರವರೆಗೆ ಅನ್ವಯವಾಗಲಿದೆ ಎಂದು ಕೇಂದ್ರವು ಹೇಳಿದೆ.

See also  ನಟ ಧನುಷ್‌ಗೆ 48 ಗಂಟೆಯೊಳಗೆ ತೆರಿಗೆ ಪಾವತಿಸಲು ಕೋರ್ಟ್‌ ಆದೇಶ
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published.

145

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು