NewsKarnataka
Tuesday, January 18 2022

ಕರ್ನಾಟಕ

ರಾಜ್ಯದ ಅನೇಕ ಕಡೆ ಅಧಿಕಾರಿಗಳ ಮನೆ ಮೇಲೆ ಏಸಿಬಿ ಧಾಳಿ

ಬೆಂಗಳೂರು : ರಾಜ್ಯದಲ್ಲಿ ಬೆಳ್ಳಂಬೆಳಗ್ಗೆ ಎಸಿಬಿ ಅಧಿಕಾರಿಗಳು ಕಾರ್ಯಾಚರಣೆಗೆ ಇಳಿದಿದ್ದು 9 ಅಧಿಕಾರಿಗಳಿಗೆ ಸಂಬಂಧಿಸಿದ 40 ಕಡೆ ಏಕಕಾಲಕ್ಕೆ ದಾಳಿ ನಡೆಸಿದ್ದಾರೆ. ದಾವಣಗೆರೆ ಜಿಲ್ಲಾ ನಗರಾಭಿವೃದ್ಧಿ ಸೆಲ್‌ನ ಇಇ ಜಿ.ಶ್ರೀಧರ್ ಕಚೇರಿ, ಮನೆ ಮೇಲೆ ಎಸಿಬಿ ದಾಳಿ ನಡೆದಿದೆ. ದಕ್ಷಿಣ ಕನ್ನಡ ಡಿಸಿ ಕಚೇರಿಯ ಜಿಲ್ಲಾ ನಗರಾಭಿವೃದ್ಧಿ ಸೆಲ್‌ ಇಇ ಕೃಷ್ಣ ಎಸ್. ಹೆಬ್ಸೂರ್, ರಾಜ್ಯ ಗ್ರಾಮೀಣ ಮೂಲಸೌಕರ್ಯ ಅಭಿವೃದ್ಧಿ ಲಿ., ಉಡುಪಿ ಹೆದ್ದಾರಿ ವಿಭಾಗದ ಮುಖ್ಯ ಇಂಜಿನಿಯರ್ ಆರ್.ಪಿ.ಕುಲಕರ್ಣಿ, ಮಾಲೂರು ನಗರ ಯೋಜನೆ ಸಹಾಯಕ ನಿರ್ದೇಶಕ ಹೆಚ್.ಆರ್.ಕೃಷ್ಣಪ್ಪಗೂ ಎಸಿಬಿ ಶಾಕ್ ಕೊಟ್ಟದೆ. ಬೀದರ್‌ ಪಂಚಾಯತ್ ರಾಜ್ ಇಲಾಖೆ ಜೆಇ ಸುರೇಶ್ ಮೊಹ್ರೆ, ಮಂಡ್ಯ ಸಾಮಾಜಿಕ ಅರಣ್ಯ ಇಲಾಖೆ ಡಿಸಿಎಫ್ ಟಿ.ವೆಂಕಟೇಶ್, ವಿಜಯಪುರ ಹೆಸ್ಕಾಂ ಎಇಇ ಸಿದ್ದರಾಮ ಮಲ್ಲಿಕಾರ್ಜುನ, ಇನ್ಸ್‌ಪೆಕ್ಟರ್ ಎ.ಕೃಷ್ಣಮೂರ್ತಿ, ಬಳ್ಳಾರಿಯ ಎಲೆಕ್ಟ್ರಿಕಲ್ ಇನ್ಸ್‌ಪೆಕ್ಟರ್ ವಿಜಯ್‌ಕುಮಾರ್ ಸೇರಿ 9 ಅಧಿಕಾರಿಗಳಿಗೆ ಸೇರಿದ 40 ಕಡೆ ಎಸಿಬಿ ಅಧಿಕಾರಿಗಳು ಇಂದು ದಾಳಿ ನಡೆಸಿದ್ದಾರೆ.

ಮಂಡ್ಯ ಸಾಮಾಜಿಕ ಅರಣ್ಯ ಇಲಾಖೆ ಡಿಸಿಎಫ್‌ ಟಿ.ವೆಂಕಟೇಶ್‌ಗೆ ಬೆಳ್ಳಂಬೆಳಗ್ಗೆ ಎಸಿಬಿ ಶಾಕ್ ಕೊಟ್ಟಿದೆ. ಮಂಡ್ಯದ ಸುಭಾಷ್ ನಗರದಲ್ಲಿರುವ ಡಿಸಿಎಫ್‌ ಟಿ.ವೆಂಕಟೇಶ್‌ ಮನೆಯ ಮೇಲೆ ಮಂಡ್ಯ ಎಸಿಬಿ  ಅಧಿಕಾರಿ  ಧರ್ಮೇಂದ್ರ ನೇತೃತ್ವದ ತಂಡ ರೇಡ್ ಮಾಡಿದೆ. ಹಾಗೂ ವಿಜಯಪುರ ಜಿಲ್ಲೆಯಲ್ಲಿಯೂ ಎಸಿಬಿ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ವಿಜಯಪುರ ನಗರದ ಸುಕೂನ್ ಲೇಔಟ್​ನಲ್ಲಿರುವ ಕೆಪಿಟಿಸಿಎಲ್ ಕಚೇರಿಯ ಎಇಇ ಸಿದ್ದರಾಮ ಮಲ್ಲಿಕಾರ್ಜುನ್ ಬಿರಾದಾರ ಮನೆ ಮೇಲೆ ದಾಳಿ ನಡೆಸಿದ್ದಾರೆ. ಮನೆಯಲ್ಲಿರುವ ದಾಖಲೆಗಳ ಪರಿಶೀಲನೆ ನಡೆಯುತ್ತಿದೆ.
ಬೀದರ್‌ ಪಂಚಾಯತ್​ ರಾಜ್ ಇಲಾಖೆ ಜೆಇ ಸುರೇಶ್ ಮೊಹ್ರೆ ಮನೆ ಮೇಲೆ ಕೂಡ ಎಸಿಬಿ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ಬೀದರ್ ಜಿಲ್ಲೆ ಬಸವಕಲ್ಯಾಣದ ಶಿವಾಜಿನಗರದಲ್ಲಿನ ಮನೆ, ಭಾಲ್ಕಿ ತಾಲೂಕಿನ ಮೋಹಕರ ಗ್ರಾಮದ ಮನೆ, ಜೆಇ ಸುರೇಶ್ ಮೊಹ್ರೆ ಕಚೇರಿ ಮೇಲೆ ದಾಳಿ ನಡೆಸಿ ಪರಿಶೀಲನೆ ಮಾಡುತ್ತಿದ್ದಾರೆ.
ಕೋಲಾರ ಜಿಲ್ಲೆ ಮಾಲೂರು ನಗರಸಭೆ ಯೋಜನಾ ನಿರ್ದೇಶಕ‌ ಹೆಚ್.ಆರ್.ಕೃಷ್ಣಪ್ಪ ಮನೆ, ಕಚೇರಿಯ ಮೇಲೆ ಎಸಿಬಿ ದಾಳಿ ನಡೆಸಿದ್ದು ದಾಖಲೆ ಹಾಗೂ ಆಸ್ತಿಪತ್ರಗಳ ಪರಿಶೀಲನೆ ನಡೆಸಿದ್ದಾರೆ. ಹೆಚ್.ಆರ್.ಕೃಷ್ಣಪ್ಪನವರ ಸ್ವ ಗ್ರಾಮವಾದ ದಾವಣಗೆರೆ ಜಿಲ್ಲೆ ಚನ್ನಗಿರಿ ತಾಲೂಕಿನ ದೇವರಹಳ್ಳಿಯ ಮನೆ, ಕೋಲಾರ ಜಿಲ್ಲೆಯ ಮಾಲೂರಿನ ಮನೆ, ಬೆಂಗಳೂರು, ಶಿವಮೊಗ್ಗದ ಮನೆ ಮತ್ತು ಕಚೇರಿ ಸೇರಿ ಸುಮಾರು ಐದು ಕಡೆ ಏಕಕಾಲಕ್ಕೆ ಎಸಿಬಿ ದಾಳಿ ನಡೆಸಿದೆ. ದಾವಣಗೆರೆ ಎಸಿಬಿ ಎಸ್‌ಪಿ ಜಯಪ್ರಕಾಶ್ ನೇತೃತ್ವದಲ್ಲಿ ಈ ದಾಳಿ ನಡೆದಿದ್ದು ಬೇರೆ, ಬೇರೆ ಕಡೆ ಅಡಕೆ ತೋಟ, ಮನೆ ಹೊಂದಿರುವುದು ಪತ್ತೆಯಾಗಿದೆ. 5 ಕಡೆ ಏಕಕಾಲಕ್ಕೆ ದಾಳಿ ನಡೆಸಿ ದಾಖಲೆ, ಆಸ್ತಿಪತ್ರ ಪರಿಶೀಲಿಸಿದ್ದಾರೆ.ಮಂಗಳೂರಿನಲ್ಲೂ ಬೆಳ್ಳಂಬೆಳಗ್ಗೆ ಅಧಿಕಾರಿ ಮನೆ ಮೇಲೆ ಎಸಿಬಿ ದಾಳಿ ನಡೆಸಿದ್ದು ಜಿಲ್ಲಾ ನಗರಾಭಿವೃದ್ಧಿ ವಿಭಾಗದ ಎಕ್ಸಿಕ್ಯುಟಿವ್ ಇಂಜಿನಿಯರ್ ಜಿ.ಶ್ರೀಧರ್ ನಿವಾಸ ‌ಮತ್ತು ಕಚೇರಿಯಲ್ಲಿ ಹುಡುಕಾಟ ನಡೆದಿದೆ. ಖಚಿತ ದೂರಿ‌ನ ಹಿನ್ನೆಲೆಯಲ್ಲಿ ಮಂಗಳೂರು ಎಸಿಪಿ ಎಸ್ಪಿ ಮತ್ತು ತಂಡದಿಂದ ದಾಖಲೆ ಪತ್ರ ಸಂಗ್ರಹ ಮಾಡಲಾಗುತ್ತಿದೆ.
ಅಕ್ರಮ ಆಸ್ತಿ ಆರೋಪ ಹಿನ್ನೆಲೆ ಬಳ್ಳಾರಿಯ ಹವಂಭಾವಿ ಪ್ರದೇಶದಲ್ಲಿರುವ ಜೆಸ್ಕಾಂ ಎಲೆಕ್ಟ್ರಿಕಲ್ ಇನ್ಸ್ಪೆಕ್ಟರ್ ಎ.ಎನ್. ವಿಜಯ್ ಕುಮಾರ್​ರ ಮನೆ ಮೇಲೆ ಎಸಿಬಿ ಅಧಿಕಾರಿಗಳು ದಾಳಿ ನಡೆಸಿದ್ಧಾರೆ. ಡಿವೈಎಸ್ಪಿ ಸೂರ್ಯನಾರಾಯಣ್ ನೇತೃತ್ವದಲ್ಲಿ ಮೂವರು ಎಸಿಬಿ ಅಧಿಕಾರಿಗಳಿಂದ ದಾಳಿ ನಡೆದಿದೆ. ದಾಳಿ ವೇಳೆ ದಾಖಲೆಗಳ ಪರಿಶೀಲನೆ ನಡೆಸಲಾಗುತ್ತಿದೆ.

 

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published. Required fields are marked *

145
Subscribe to our Brand New YouTube Channel

Subscribe Newsletter

Get latest news karnataka updates on your email.