ನವದೆಹಲಿ ; ಮುಂದಿನ ಅಕ್ಟೋಬರ್ ತಿಂಗಳಿನಿಂದ ಬ್ಯಾಂಕ್ ಗ್ರಾಹಕರಿಗೆ ಒಂದು ಶುಭಸುದ್ದಿ ಇದೆ. ನಿಮಗೆ ಅಗತ್ಯವಿರುವಾಗ ಎಟಿಎಂ ಅಲ್ಲಿ ಹಣ ಬರದೇ ವಿಫಲವಾದರೆ ಬ್ಯಾಂಕ್ ದಂಡ ಪಾವತಿಸಬೇಕಾಗುತ್ತದೆ.
ಎಟಿಎಂ ಒಳಗೆ ಹಣ ಇಲ್ಲದಿದ್ದರೆ ಬ್ಯಾಂಕ್‌ಗಳಿಗೆ ದಂಡ ವಿಧಿಸುವ ಯೋಜನೆಯನ್ನು ಭಾರತೀಯ ರಿಸರ್ವ್ ಬ್ಯಾಂಕ್ ಇತ್ತೀಚೆಗೆ ಪರಿಚಯಿಸಿದೆ. ಎಟಿಎಂಗಳಲ್ಲಿ ನಗದು ಲಭ್ಯವಿಲ್ಲದ ಕಾರಣ ಸಾರ್ವಜನಿಕರಿಗೆ ಉಂಟಾದ ಅನಾನುಕೂಲತೆಯನ್ನು ತಪ್ಪಿಸಲು ಕೇಂದ್ರ ಬ್ಯಾಂಕ್ ಈ ನಿರ್ಧಾರ ತೆಗೆದುಕೊಳ್ಳಲು ಕಾರಣ ಎಂದು ಹೇಳಲಾಗಿದೆ. “ಎಟಿಎಂಗಳ ಮರುಪೂರಣಕ್ಕಾಗಿ ದಂಡದ ಯೋಜನೆ ‘ಎಟಿಎಂಗಳಲ್ಲಿ ಸಾರ್ವಜನಿಕರಿಗೆ ಸಾಕಷ್ಟು ನಗದು ಲಭ್ಯವಿರುವುದನ್ನು ಖಚಿತಪಡಿಸಿಕೊಳ್ಳಲು ಈ ಯೋಜನೆ ರೂಪಿಸಲಾಗಿದೆ ಎಂದು ಆರ್ಬಿಐ ಸುತ್ತೋಲೆಯಲ್ಲಿ ತಿಳಿಸಿದೆ.
ಎಟಿಎಂನಲ್ಲಿ ದುಡ್ಡಿಲ್ಲ ಅಂದರೆ ಬ್ಯಾಂಕ್‌ಗಳಿಗೆ 10 ಸಾವಿರ ರೂ ದಂಡ ಎಂದ ಆರ್ಬಿಐ
Photo Credit :
ಹನಿ ಹನಿ ಕೂಡಿ ಹಳ್ಳ
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.