ಬೆಂಗಳೂರು, ; ಪ್ರತಿಪಕ್ಷದ ನಾಯಕ ಮತ್ತು ಶಾಸಕಾಂಗ ಪಕ್ಷದ ನಾಯಕ ಸ್ಥಾನ ಎರಡನ್ನು ಬೇರ್ಪಡಿಸಿದರೆ ತಾವು ಪಕ್ಷ ತೊರೆಯಲು ಹಿಂದೆ ಮುಂದೆ ನೋಡುವುದಿಲ್ಲ ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಬೆದರಿಕೆ ಹಾಕಿದ್ದಾರೆ ಎನ್ನಲಾಗಿದೆ.
ಇತ್ತೀಚಿನ ಬೆಳವಣಿಗೆಗಳಲ್ಲಿ ಮಧುಸೂದನ್ ಮಿಸಿ ಮತ್ತು ಭಕ್ತ ಚರಣ್ ದಾಸ್ ಅವರನ್ನೊಳಗೊಂಡ ಎಐಸಿಸಿ ವೀಕ್ಷಕರ ಸಮಿತಿ ರಾಜ್ಯದಲ್ಲಿ ಹಿರಿಯ ಕಾಂಗ್ರೆಸಿಗರ ಅಭಿಪ್ರಾಯ ಪಡೆದು ಸಮಗ್ರ ವರದಿ ನೀಡಿದ್ದು, ಮಹಾರಾಷ್ಟ್ರ ಮಾದರಿಯಲ್ಲಿ ಎರಡು ಸ್ಥಾನಗಳನ್ನು ಬೇರ್ಪಡಿಸುವಂತೆ ಸಲಹೆ ನೀಡಿದೆ. ಈ ವರದಿಯನ್ನು ಅನುಷ್ಠಾನಕ್ಕೆ ತರಬೇಕು ಎಂದು ಮೂಲ ಕಾಂಗ್ರೆಸಿಗರು ಪಟ್ಟು ಹಿಡಿದಿದ್ದಾರೆ. ಈವರೆಗೆ ಎಐಸಿಸಿ ನಾಯಕಿ ಸೋನಿಯಾ ಗಾಂ„ಯವರನ್ನು ಭೇಟಿ ಮಾಡಿದ ಎಲ್ಲಾ ನಾಯಕರು ಮಿಸಿ ವರದಿ ಅನುಷ್ಠಾನಕ್ಕೆ ಒತ್ತಡ ಹೇರಿದ್ದಾರೆ. ಸಮ್ಮಿಶ್ರ ಸರ್ಕಾರ ಪತನಗೊಳ್ಳಲು ಸಿದ್ದರಾಮಯ್ಯ ಆಪ್ತ ಬಣದಲ್ಲಿ ಗುರುತಿಸಿಕೊಂಡಿದ್ದ ಶಾಸಕರುಗಳೇ ಕಾರಣ. ಕಾಂಗ್ರೆಸ್ ತೊರೆದು ಹೋಗಿ ಬಿಜೆಪಿಯಲ್ಲಿ ಸಚಿವರಾಗಿದ್ದಾರೆ. ತಮ್ಮನ್ನು ಬೆಳೆಸಿದ ಪಕ್ಷಕ್ಕಿಂತಲೂ ಅವರಿಗೆ ವ್ಯಕ್ತಿ ನಿಷ್ಠೆಯೇ ಪ್ರಮುಖವಾಗಿದೆ.
ಪ್ರತಿಪಕ್ಷದ ನಾಯಕ ಮತ್ತು ಶಾಸಕಾಂಗ ಪಕ್ಷದ ನಾಯಕ ಸ್ಥಾನ ಎರಡನ್ನು ಬೇರ್ಪಡಿಸಿದರೆ ಪಕ್ಷ ತೊರೆಯುವೆ ಎಂದ ಸಿದ್ದರಾಮಯ್ಯ
Photo Credit :
ಹನಿ ಹನಿ ಕೂಡಿ ಹಳ್ಳ
ನ್ಯೂಸ್ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.