ಕಲಬುರಗಿ, ;ಕಲ್ಯಾಣ ಕರ್ನಾಟಕ ಎಂದು ಹೆಸರು ಬದಲಾಯಿಸಿದಷ್ಟೇ ಬಿಜೆಪಿ ಸಾಧನೆಯಾಗಿದೆ ಹೊರತು ಹಿಂದುಳಿದ ಈ ಪ್ರದೇಶದ ಅಭಿವೃದ್ಧಿಗೆ ಯಾವುದೇ ರೀತಿಯ ಪ್ರಾಮಾಣಿಕ ಪ್ರಯತ್ನ ಮಾಡಿಲ್ಲ ಎಂದು ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಟೀಕಿಸಿದರು.
ಇಂದಿಲ್ಲಿ ಸುದ್ದಿಗಾರೊಂದಿಗೆ ಮಾತನಾಡಿದ ಅವರು, ಮಹಾನಗರ ಪಾಲಿಕೆ ಚುನಾವಣೆಯಲ್ಲಿ ಜೆ ಡಿ ಎಸ್ ನಿಂದ 42 ಅಭ್ಯರ್ಥಿಗಳು ಕಣದಲ್ಲಿದ್ದಾರೆ. ಕಾಂಗ್ರೆಸ್ ಮತ್ತು ಬಿಜೆಪಿಯಿಂದ ಬಲಿಷ್ಟ ಅಭ್ಯರ್ಥಿಗಳು ಕಣದಲ್ಲಿ ಇದ್ದಾರೆ. ಪಾಲಿಕೆ ಚುನಾವಣೆಯ ಮೂಲಕ ಜೆ ಡಿ ಎಸ್ ಪ್ರಮುಖ ಪಾತ್ರ ವಹಿಸುತ್ತದೆ.ಚುನಾವಣೆಯಲ್ಲಿ ಉತ್ತಮ ಅಭ್ಯರ್ಥಿಗಳ ನಿಲ್ಲಿಸುವದ್ರಲ್ಲಿ ಯಶಸ್ವಿಯಾದ್ದೇವೆ ಎಂದರು.ಇಂದು ನಾಳೆ ನಮ್ಮ ಅಭ್ಯರ್ಥಿಗಳ ಪರಪ್ರಚಾರ ಕಾರ್ಯ ನಡೆಸಲಿದ್ದೆನೆ.ಕಲಬುರಗಿಯಲ್ಲಿ ಕುಡಿಯುವ ನೀರು ,ಯುಜಿಡಿ ಕೆಲಸಗಳು ಆಗಿಲ್ಲ. 14 ತಿಂಗಳು ಮುಖ್ಯಮಂತ್ರಿ ಆಗಿದ್ದಾಗ ಉತ್ತರ ಕರ್ನಾಟಕದ ಹಲವು ನಗರಗಳಿಗೆ ಕುಡಿಯಿವ ನೀರಿನ ವ್ಯವಸ್ಥೆ ಮಾಡಲಾಗಿದೆ.ಈ ಸರ್ಕಾರ ಬಂದ ಮೇಲೆ ರೈತರಿಗೆ ಸರಿಉಅದ ಬೆಳೆ ಪರಿಹಾರ ಆರ್ಥಿಕ ನೇರವು ನೀಡಿಲ್ಲ.ನಾನು ಬಿಜೆಪಿ ಸರ್ಕಾರದ ಭ್ರಷ್ಟಾಚಾರದ ಬಗ್ಗೆ ಚರ್ಚೆ ಮಾಡಲ್ಲ.ಕಾಂಗ್ರೆಸ್ ನವರು ಹಗಲು ರಾತ್ರಿ ಭ್ರಷ್ಟಾಚಾರದ ಚರ್ಚೆ ಮಾಡ್ತಿದ್ದಾರೆ.ಕಾಂಗ್ರೆಸ್ ನವರ ಅವಧಿಯಲ್ಲಿ ಏನೆಲ್ಲಾ ಆಗಿದೆ ಅಂತಾ ಎಲ್ಲರಿಗು ಗೊತ್ತಿದೆ.ಮೋದಿ ತಮ್ಮ ಪ್ರಣಾಳಿಕೆಯಲ್ಲಿ ಅಂಶಗಳು ಎಷ್ಟರ ಮಟ್ಟಿಗೆ ಸಕ್ಸಸ್ ಆಗಿದೆ ಅಂತಾ ನಿಮಗೆ ಗೊತ್ತಿದೆ.ಜನತೆಯ ಸಂಕಷ್ಟಗಳಿಗೆ ಯಾವ ಸರ್ಕಾರವು ಪ್ರಾಮಾಣೀಕವಾಗಿ ಸ್ಪಂದಿಸಿಲ್ಲ ಎಂದರು.
ಕಲ್ಯಾಣ ಕರ್ನಾಟಕ ಹೆಸರು ಬದಲಾಯಿಸಿದಷ್ಟೇ ಬಿಜೆಪಿ ಸಾಧನೆ: ಕುಮಾರಸ್ವಾಮಿ
Photo Credit :
ಹನಿ ಹನಿ ಕೂಡಿ ಹಳ್ಳ
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.