News Kannada
Thursday, March 23 2023

ಕರ್ನಾಟಕ

ನವಸಹಸ್ರಮಾನದ ಯುವಜನತೆಗಾಗಿ ‘3 ನಿಮಿಷದಲ್ಲಿ ಭಗವದ್ಗೀತೆ’ಯನ್ನು ಸೃಷ್ಟಿಸಿದ ಸೈಕಲ್‍ ಪ್ಯೂರ್

Photo Credit :

ಮೈಸೂರು, ; ಭಾರತದಲ್ಲಿ ಅತ್ಯಂತ ನೆಚ್ಚಿನ ಮನೆಪೂಜೆ ಬ್ರಾಂಡ್ ಆದ ಸೈಕಲ್ ಪ್ಯೂರ್ ಅಗರ್‍ ಬತ್ತಿ ಈಗ ಕೃಷ್ಣ ಜನ್ಮಾಷ್ಟಮಿಯ ಪವಿತ್ರ ಸಂದರ್ಭದಲ್ಲಿ ನವ ಸಹಸ್ರಮಾನದ ಯುವಜನತೆಗೆ ಭಗವದ್ಗೀತೆಯ ಜ್ಞಾನ ನೀಡುವುದಕ್ಕಾಗಿ‘3 ನಿಮಿಷದಲ್ಲಿ ಭಗವದ್ಗೀತೆ’(ಭಗವದ್ಗೀತಾ ಇನ್ 3 ಮಿನಿಟ್ಸ್) ಯನ್ನು ಪರಿಚಯಿಸಿದೆ. ಅಧ್ಯಾಯಗಳನ್ನು 18 ವಾಕ್ಯಗಳಾಗಿ ವಿಂಗಡಿಸಿ ಭಗವದ್ಗೀತೆಯ ತತ್ವವನ್ನು ವಿವರಿಸುವುದರೊಂದಿಗೆ, ಕೇಳುಗರನ್ನು ತಲುಪಿ ಅವರಿಗೆ ಶಿಕ್ಷಣ ನೀಡಲು ಈ ಬ್ರಾಂಡ್ ಡಿಜಿಟಲ್ ಮಾರ್ಗವನ್ನು ಬಳಸುತ್ತಿದೆ. ದೇವ ಶ್ರೀಕೃಷ್ಣ ಮತ್ತು ಆತನ ಬೋಧನೆಯ ಹಲವಾರು ಅಭಿವ್ಯಕ್ತಿಗಳನ್ನು 18 ವಾಕ್ಯಗಳು ಚಿತ್ರಿಸುತ್ತವೆ.
ಅತಿ ಉತ್ತೇಜಕ ಡಿಜಿಟಲ್ ಯುಗದಲ್ಲಿ ಬೆಳೆಯುತ್ತಿರುವ ನವ ಸಹಸ್ರಮಾನದ ಯುವಜನತೆ ಮತ್ತು ಹೊಸ ಪೀಳಿಗೆಯವರಿಗೆ ಭಗವದ್ಗೀತೆ ಸಮಯಾತೀತ ಪ್ರಸ್ತುತತೆ ಇಂದು ಹೆಚ್ಚು ಪ್ರಸ್ತುತವಾಗಿದೆ. ಒತ್ತಡ, ಗೊಂದಲ, ಏಕಾಗ್ರತೆಯ ಕೊರತೆ ಮತ್ತು ಪ್ರೇರೇಪಣೆ ಕುರಿತಂತೆ ಅವರ ಪ್ರಾಥಮಿಕ ಸಮಸ್ಯೆಗಳನ್ನು ನಿಭಾಯಿಸುವಲ್ಲಿ, ಗೀತೆಯ ಗಹನವಾದ ಆದರೂ ವಾಸ್ತವವಾದ ಬೋಧನೆಗಳು ಸಹಾಯಕವಾಗಲಿವೆ. ಆದರೆ ಅಲ್ಪಾವಧಿ ಏಕಾಗ್ರತೆ ಮತ್ತು ಕಡಿಮೆಯಾಗುತ್ತಿರುವ ಏಕಾಗ್ರತೆ ಅವಧಿಗಳ ತೊಂದರೆ ಕಾಡುತ್ತಲೇ ಇದೆ. ನವ ಸಹಸ್ರಮಾನದ ಪ್ರಸಕ್ತ ಏಕಾಗ್ರತಾ ಅವಧಿ 8ರಿಂದ 12 ಸೆಕೆಂಡುಗಳಾಗಿರುತ್ತದೆ.
ಡಿಜಿಟಲ್ ಪುಸ್ತಕ ಕುರಿತು ಸೈಕಲ್ ಪ್ಯೂರ್ ಅಗರಬತ್ತಿ ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕರಾದ ಅರ್ಜುನ್ ರಂಗ ಅವರು ಮಾತನಾಡಿ,“ಭಾರತೀಯ ಪರಂಪರೆ ಮತ್ತು ಸಂಸ್ಕೃತಿಯನ್ನು ಸಂರಕ್ಷಿಸುವ ನಮ್ಮ ಅಭಿಯಾನದ ಜೊತೆಗೆ ಗೀತೆಯಲ್ಲಿನ ಸಮಯಾತೀತ ಬೋಧನೆಗಳನ್ನು ಪ್ರಸಕ್ತ ಮತ್ತು ಭವಿಷ್ಯದ ಪೀಳಿಗೆಗಳಿಗೆ ಪರಿಚಯಿಸಲು ನಾವು ಇಚ್ಛಿಸಿದ್ದೆವು. ಗೀತೆಯಲ್ಲಿ ಪ್ರತಿ ಅಧ್ಯಾಯವನ್ನು 8-10 ಸೆಕೆಂಡುಗಳಲ್ಲಿ ಓದಬಹುದು. ಎಲ್ಲಾ 18 ಅಧ್ಯಾಯಗಳ ಪ್ರಮುಖ ಪಾಠಗಳನ್ನು ಕೇವಲ 3 ನಿಮಿಷದಲ್ಲಿ ಕಲಿಯಬಹುದು. ಪ್ರತಿ ಅಧ್ಯಾಯದ ಟಿಪ್ಪಣಿಯನ್ನು ಪಂಡಿತರು ಕ್ರಮಬದ್ಧಗೊಳಿಸಿರುತ್ತಾರೆ” ಎಂದರು.ನಮ್ಮ ಉದ್ದೇಶಕ್ಕೆ ನೈಜವಾಗಿ ಅಂಟಿಕೊಂಡು, ನಮ್ಮ ಸಮಯಾತೀತ ಸಂಸ್ಕೃತಿ ಮತ್ತು ಪರಂಪರೆ ಬಗ್ಗೆ ನಮ್ಮ ಭವಿಷ್ಯದ ಪೀಳಿಗೆಗಳು ಹೆಮ್ಮೆ ಹೊಂದಿರಬೇಕೆಂದು ನಾವು ಇಚ್ಛಿಸುತ್ತೇವೆ. ನಮ್ಮ ಸಮೃದ್ಧ ಪರಂಪರೆಯೊಂದಿಗೆ ಅವರು ಸಂಪರ್ಕ ಹೊಂದಲು ಸಾಧ್ಯವಾಗಬೇಕೆಂದು ಮತ್ತು ಜ್ಞಾನವನ್ನು ಅವರು ಪರಿಶೋಧಿಸಿಕೊಳ್ಳಬೇಕೆಂದು ನಾವು ಇಚ್ಛಿಸುತ್ತೇವೆ” ಎಂದು ಅವರು ಹೇಳಿದರು.ಪುಸ್ತಕದಲ್ಲಿ 10 ಬೇರೆ ಬೇರೆ ಭಾರತೀಯ ಶಾಸ್ತ್ರೀಯ ಕಲಾಪ್ರಕಾರಗಳಾದ ತಂಜಾವೂರು, ಕಲಂಕಾರಿ, ಪಿಚ್ವಾಯ್, ಕೇರಳ ಮುರಲ್, ಮಧುಬನಿ, ಮಿಥಿಲಾ, ರಾಜಾಸ್ಥಾನಿ ಸೂಕ್ಷ್ಮಕಲೆ, ಕೈಘಾಟ್, ಫಡ್ ಮುಂತಾದವುಗಳನ್ನು ಕಥಾ ಚಿತ್ರಣಕ್ಕಾಗಿ ಬಳಸಲಾಗಿದೆ. ದೇವ ಶ್ರೀಕೃಷ್ಣನನ್ನು ಚಿತ್ರಿಸಲು ಹಲವು ಪ್ರದೇಶಗಳಲ್ಲಿ ಈ ಕಲಾ ಪ್ರಕಾರಗಳನ್ನು ಸಾಂಪ್ರದಾಯಿಕವಾಗಿ ಬಳಸಲಾಗಿದೆ. ಗೀತೆ ದೃಶ್ಯಪೂರ್ವಕವಾಗಿ ವೀಕ್ಷಕರನ್ನು ಹಿಡಿದಿಡುವುದನ್ನು, ಆಧ್ಯಾತ್ಮಿಕವಾಗಿ ಸಮೃದ್ಧವಾಗುವುದನ್ನು ಈ ವೈವಿಧ್ಯಪೂರ್ಣ ಅಭಿವ್ಯಕ್ತಿ ಸಾಧ್ಯವಾಗಿಸುತ್ತದೆ.
ಈ ಸಮಯಾತೀತ ಜ್ಞಾನವನ್ನು ಉಚಿತವಾಗಿ ಡೌನ್‍ಲೋಡ್ ಮಾಡಿ, ಶೇರ್ ಮಾಡಿ. ಈ ಬುಕ್‍ ನ್ನು 8 ಭಾರತೀಯ ಭಾಷೆಗಳಲ್ಲಿ ಮತ್ತು 6 ವಿದೇಶಿ ಭಾಷೆಗಳಲ್ಲಿ https://l.cycle.in/gita. ದಿಂದ ಡೌನ್‍ ಲೋಡ್ ಮಾಡಬಹುದು.

See also  ರೇಷ್ಮೆ ಬೆಳೆಗಾರರ ಒಕ್ಕೂಟದಿಂದ ಪ್ರತಿಭಟನೆ
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
145

Subscribe Newsletter

Get latest news karnataka updates on your email.

[mc4wp_form id="118196"]

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು