News Kannada
Wednesday, November 30 2022

ಕರ್ನಾಟಕ

ಮೈಸೂರು ಸಾಮೂಹಿಕ ಅತ್ಯಾಚಾರ: ಮತ್ತೋರ್ವ ಆರೋಪಿ ಬಂಧನ - 1 min read

Photo Credit :

ಮೈಸೂರು: ಸಾಂಸ್ಕೃತಿಕ ನಗರಿಯನ್ನು ಬೆಚ್ಚೀಬೀಳಿಸಿದ್ದ ವಿದ್ಯಾರ್ಥಿನಿ ಮೇಲಿನ ಸಾಮೂಹಿಕ ಅತ್ಯಾಚಾರ ಪ್ರಕರಣಕ್ಕೆ ಸಂಬಂಧಪಟ್ಟಂತೆ ಪೊಲೀಸರು ಇದೀಗ ಮತ್ತೋರ್ವ ಆರೋಪಿಯನ್ನು ಬಂಧಿಸಿದ್ದಾರೆ. ಆ ಮೂಲಕ ಪ್ರಕರಣದಲ್ಲಿ ಬಂಧಿತರ ಸಂಖ್ಯೆ 6ಕ್ಕೆ ಏರಿಕೆಯಾದಂತೆ ಆಗಿದೆ. ಆರನೇ ಆರೋಪಿಯನ್ನು ತಮಿಳುನಾಡಿನಲ್ಲಿ ಪೊಲೀಸರು ಬಂಧಿಸಿದ್ದಾರೆ. ಈತನ ಬಗ್ಗೆ ನಿನ್ನೆ ಮಹತ್ವದ ಸುಳಿವು ಸಿಕ್ಕಿದ್ದ ಹಿನ್ನೆಲೆ ತಮಿಳುನಾಡಿಗೆ ತೆರಳಿ, ಮಧ್ಯರಾತ್ರಿ ಆರೋಪಿಯನ್ನು ಬಂಧಿಸಿದ್ದಾರೆ. ಇಂದು ಆರೋಪಿಯನ್ನು ಪೊಲೀಸರು ಮೈಸೂರಿಗೆ ಕರೆತರಲಿದ್ದಾರೆ. ಘಟನೆ ನಡೆದ ಬಳಿಕ ಈತ ತಲೆಮರೆಸಿಕೊಂಡಿದ್ದಾನೆ. ತನಿಖೆ ವೇಳೆ ಆರನೇ ವ್ಯಕ್ತಿಯ ಬಗ್ಗೆ ಸಿಕ್ಕಿಬಿದ್ದರುವ ಆರೋಪಿಗಳು ಮಾಹಿತಿ ನೀಡಿದ್ದರು. ಈ ಹಿನ್ನೆಲೆ ದಾಳಿ ನಡೆಸಿ ಆರನೇ ಆರೋಪಿಯನ್ನು ಮೈಸೂರು ಪೊಲೀಸರು ಬಂಧಿಸಿದ್ದಾರೆ.
ಇನ್ನು ಅತ್ಯಾಚಾರ ಪ್ರಕರಣದ ಆರೋಪಿಗಳನ್ನು ಸೋಮವಾರ (ಆಗಸ್ಟ್‌ 30) ಅತ್ಯಾಚಾರ ನಡೆದ ಸ್ಥಳಕ್ಕೆ ಪರಿಶೀಲನೆಗಾಗಿ ಕರೆದೊಯ್ಯಲಾಗಿತ್ತು. ಎಲ್ಲಾ ಐವರು ಆರೋಪಿಗಳಿಂದ ಪೊಲೀಸರು ಸ್ಥಳ ಮಹಜರು ಮಾಡಿಸಿದರು. ಈ ವೇಳೆ ಪೊಲೀಸರು ಮಹತ್ವದ ಮಾಹಿತಿ ಕಲೆ ಹಾಕಿದ್ದಾರೆ. ಸ್ತಳ ಮಹಜರು ವೇಳೆ ಎಲ್ಲಾ ಆರೋಪಿಗಳಿಗೆ ಕಪ್ಪು ಬಣ್ಣದ ಮುಸುಕು ಹಾಕಲಾಗಿತ್ತು.
ಇನ್ನು ಅತ್ಯಾಚಾರ ಎಸಗುವ ವೇಳೆ ಆರು ಮಾತ್ರವಲ್ಲ ಒಟ್ಟು ಏಳು ಮಂದಿ ಇದ್ದರು ಎಂದು ಆರೋಪಿಗಳು ಸತ್ಯ ಕಕ್ಕಿದ್ದಾರೆ ಎಂದು ತಿಳಿದುಬಂದಿದೆ. ಈ ಹಿನ್ನೆಲೆ ಆತನ ಮಾಹಿತಿಯನ್ನು ಪೊಲೀಸರು ಕಲೆ ಹಾಕಿದ್ದಾರೆ ಎಂದು ತಿಳಿದುಬಂದಿದೆ. ಹೀಗಾಗಿ ಒಂದು ತಂಡ ಆತನ ಶೋಧದಲ್ಲಿ ತೊಡಗಿದೆ. ಸದ್ಯ ತಮಿಳುನಾಡಿನಲ್ಲಿ ಬೀಡು ಬಿಟ್ಟಿರುವ ಒಂದು ತಂಡ, ಆರೋಪಿಗಳು ನೀಡಿರುವ ಸುಳಿವು ಆಧಾರಿಸಿ ಕಾರ್ಯಾಚರಣೆ ನಡೆಸುತ್ತಿದೆ. ಇಂದು ಅಥವಾ ನಾಳೆ ಆರೋಪಿಗಳ ಬಂಧನ ಸಾಧ್ಯತೆ ಇದೆ.
ಸದ್ಯ ಅತ್ಯಾಚಾರ ಪ್ರಕರಣದ ಆರೋಪಿಗಳು ಹಲವಾರ ಪ್ರಕರಣಗಳಲ್ಲಿ ಭಾಗಿಯಾಗಿದ್ದರು ಎನ್ನುವುದು ವಿಚಾರಣೆ ವೇಳೆ ತಿಳಿದುಬಂದಿದೆ. ಈ ಹಿಂದೆ ಅನೇಕ ಬಾರಿ ಪಾರ್ಟಿ ನಡೆಸಿ ಏಕಾಂತದಲ್ಲಿ ಕಳೆಯುವ ಯುವಕ-ಯುವತಿ ಮೇಲೆ ಹಲ್ಲೆ ನಡೆಸಿ ದರೋಡೆ ಮಾಡಿದ್ದಾರೆ ಎಂದು ತಿಳಿದುಬಂದಿದೆ. ಇನ್ನು ಆರೋಪಿಗಳ ಪೈಕಿ ಓರ್ವನಿಗೆ ಯುವತಿಯರ ಮೇಲೆ ಅತ್ಯಾಚಾರ ಮಾಡುವ ಚಟವಿದೆಯಂತೆ. ಇನ್ನಿತರ ಆರೋಪಿಗಳು ಹಲ್ಲೆ ನಡೆಸುವ ವೇಳೆ ಈತ ಯುವತಿಯ ಮೇಲೆ ಅತ್ಯಾಚಾರ ನಡೆಸುತ್ತಿದ್ದನಂತೆ ಎಂದು ತಿಳಿದುಬಂದಿದೆ.

See also  ಕಳವು ಪ್ರಕರಣ: ಕಾಸರಗೋಡಿನಲ್ಲಿ ಇಬ್ಬರ ಬಂಧನ
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
145

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು