ನವದೆಹಲಿ ;ಶತ್ರುಗಳ ವಿರುದ್ಧ ಹೋರಾಡಲು “ರಾಷ್ಟ್ರೀಯ ಭದ್ರತಾ ಮಾದರಿ ಬದಲಾಯಿಸುವಲ್ಲಿ ರಕ್ಷಣಾ ಸುಧಾರಣೆಗಳ ಪಾತ್ರ ಹಿರಿದು ಎಂದು ರಕ್ಷಣಾ ಸಚಿವ ರಾಜನಾಥ್ ಸಿಂಗ್ ಹೇಳಿದ್ದಾರೆ.ಶತ್ರುಗಳ ವಿರುದ್ದ ಹೋರಾಡಲು ರಕ್ಷಣಾ ಸಚಿವಾಲಯ “ಸಂಯೋಜಿತ ಯುದ್ಧ ಗುಂಪುಗಳನ್ನು” ರಚಿಸುವ ಸಂಬಂಧ ಪರಿಗಣಿಸುತ್ತಿದೆ ಎಂದು ಅವರು ಹೇಳಿದ್ದಾರೆ .
ತಮಿಳುನಾಡಿನ ವೆಲ್ಲಿಂಗ್ಟನ್‌ನಲ್ಲಿರುವ ರಕ್ಷಣಾ ಸೇವೆಗಳ ಸಿಬ್ಬಂದಿ ಕಾಲೇಜು (ಡಿಎಸ್‌ಎಸ್‌ಸಿ) ಯನ್ನು ಉದ್ದೇಶಿಸಿ ಮಾತನಾಡಿದ ಅವರು ಹೊಸ ಮಾದರಿಯ ಪರಿಕಲ್ಪನೆಯ ಅಡಿಯಲ್ಲಿ, ಅತ್ಯಂತ ಮಾರಕ ಬ್ರಿಗೇಡ್ ಗಾತ್ರದ ಚುರುಕುತನ ಮತ್ತು ಸ್ವಾವಲಂಬಿ ಫೈಟರ್ ರಚನೆಗಳನ್ನು ಮಾಡಲಾಗುವುದು ಎಂದು ಅವರು ಹೇಳಿದ್ದಾರೆ.ರಕ್ಷಣಾ ಕ್ಷೇತ್ರದಲ್ಲಿ ಆತ್ಮನಿರ್ಭರ ಭಾರತ್ ವಾಗಿಸುವ ನಿಟ್ಟಿನಲ್ಲಿ ’ಸೇನಾಧಿಕಾರಿಗಳು ಯಾವುದೇ ಮುಲಾಜಿಗೆ ಒಳಗಾಗಬಾರದು ಎಂದು ಅವರು ತಿಳಿಸಿದ್ದಾರೆ.ಭಾರತ ಮತ್ತು ಪಾಕಿಸ್ತಾನದ ಗಡಿ ನಿಯಂತ್ರಣ ರೇಖೆಯ ಬಳಿ ಕದನ ವಿರಾಮ ಉಲ್ಲಂಘನೆ ಮಾಡದಂತೆ ಭಾರತ ಮತ್ತು ಪಾಕಿಸ್ತಾನ ಪರಸ್ಪರ ಒಪ್ಪಂದ ಮಾಡಿಕೊಂಡಿವೆ ಆದರೂ ಪಾಕಿಸ್ತಾನವನ್ನು ನಂಬುವ ಹಾಗಿಲ್ಲ ಎಂದು ಹೇಳಿದ್ದಾರೆ.ರಕ್ಷಣ ಕ್ಷೇತ್ರವನ್ನು ಆಧುನೀಕರಣಗೊಳಿಸುವ ಮೂಲಕ ಶತ್ರುಗಳ ವಿರುದ್ಧ ಹೋರಾಟ ಮಾಡಲು ರಕ್ಷಣಾ ಪಡೆಗಳನ್ನು ಮತ್ತಷ್ಟು ಅಣಿ ಮಾಡಬೇಕಾಗಿದೆ ಎಂದು ಅವರು ತಿಳಿಸಿದ್ದಾರೆ. ಈ ಸಂದರ್ಭದಲ್ಲಿ ರಕ್ಷಣಾ ಪಡೆಗಳ ಮುಖ್ಯಸ್ಥ ಜನರಲ್ ಬಿಪಿನ್ ಬಿಪಿನ್ ರಾವತ್, ಭೂಸೇನೆ ಮುಖ್ಯಸ್ಥ ಎಂಎಂ ನರವನೆ ಸೇರಿದಂತೆ ವಾಯುಸೇನೆ ಮತ್ತು ನೌಕಾಪಡೆಯ ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು
ಶತ್ರುಗಳ ವಿರುದ್ಧ ಹೋರಾಟ ತಂತ್ರಗಾರಿಕೆ ಬದಲಾಗಲಿ : ಸಿಂಗ್
Photo Credit :
ಹನಿ ಹನಿ ಕೂಡಿ ಹಳ್ಳ
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.