ಬಾಗಲಕೋಟೆ : ರಕ್ಷಣಾ ಇಲಾಖೆಯ ಅತ್ಯಂತ ಪ್ರತಿಷ್ಠಿತ ಆರ್ಡನನ್ಸ ಫ್ಯಾಕ್ಟರಿ ಬೋರ್ಡ (ಒಎಫ್‌ಬಿ)ಗೆ ಬಾಗಲಕೋಟೆ ಮೂಲದ ಸೇನಾಧಿಕಾರಿ ಮೆ. ಜನರಲ್ ರವಿ ಪಾಟೀಲ ನಾಮಕರಣಗೊಂಡಿದ್ದಾರೆ.
ಪ್ರತಿಷ್ಠಿತ ಹುದ್ದೆಗೆ ಜಿಲ್ಲೆಯಿಂದ ಆಯ್ಕೆಯಾದ ಪ್ರಥಮ ವ್ಯಕ್ತಿ ಇವರಾಗಿದ್ದು, ಅವರ ದಕ್ಷತೆ, ಕಾರ್ಯ ನಿರ್ವಹಣೆಗೆ ಸಂದ ಗೌರವವಾಗಿದೆ. ಬಸವೇಶ್ವರ ವಿಜ್ಞಾನ ಮಹಾವಿದ್ಯಾಲಯದ ನಿವೃತ್ತ ಪ್ರಾಚಾರ್ಯ ದಿ. ಡಾ.ಆರ್.ಎಂ.ಪಾಟೀಲ ಅವರ ಪುತ್ರ .
ಈಚೆಗೆ ಸಂಸತ್ತಿನ ಉಭಯ ಸದನಗಳು ಒ.ಎಫ್.ಬಿ. ಸ್ವಾಯತ್ತತೆಯನ್ನು ಉಳಿಸಿಕೊಂಡು ಅದರ ಕಾರ್ಯ ಕ್ಷೇತ್ರ, ವಿಧಾನವನ್ನು ಪರಿಷ್ಕರಿಸಿದ ನಂತರ 27 ಸೇನಾಽಕಾರಿಗಳು ಈ ಬೋರ್ಡಿಗೆ ನೇಮಕಗೊಂಡಿದ್ದು, ಇದರಲ್ಲಿ 7 ಅಽಕಾರಿಗಳು ಇಂಡಿಯನ್ ಆರ್ಡನನ್ಸ ಫ್ಯಾಕ್ಟರಿ ಸೇವೆಗೆ ಸೇರಿದವರಾಗಿದ್ದಾರೆ. ಇವರಲ್ಲಿ ರವಿ ಪಾಟೀಲ ಕೂಡ ಒಬ್ಬರು.