NewsKarnataka
Wednesday, January 26 2022

ಬಾಗಲಕೋಟೆ

ಬಾಗಲಕೋಟೆ : 30 ವರ್ಷಗಳಿಂದ ಸ್ಥಗಿತಗೊಂಡಿದ್ದ ಗ್ರಾಮದೇವತೆ ಜಾತ್ರೆ ಅದ್ಧೂರಿಯಾಗಿ ಮಾಡಲು ನಿರ್ಧಾರ

ಬಾಗಲಕೋಟೆ : ಐತಿಹಾಸಿಕ ಗ್ರಾಮದೇವಿಯಾದ ದ್ಯಾಮವ್ವದೇವಿ ಜಾತ್ರೆ ಮೂರು ದಶಕಗಳ ನಂತರ ಡಿ.20ರಿಂದ ನ.24 ವರೆಗೆ ಅದ್ದೂರಿಯಾಗಿ ಜಾತ್ರಾಮಹೋತ್ಸವ ಆಚರಣೆ ಮಾಡಲು ನಿರ್ಧರಿಸಲಾಗಿದೆ ಎಂದು ಗ್ರಾಮದೇವಿ ಸೇವಾ ಸಮಿತಿಯ ಗೌರವಾಧ್ಯಕ್ಷರಾಗಿ ಶ್ರೀಮಂತ ಬಸವಪ್ರಭು ಸರನಾಡಗೌಡರ ಹೇಳಿದರು. ಶುಕ್ರವಾರ ನವನಗರದಲ್ಲಿ‌ನ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಡಿ.20 ಸೋಮವಾರ ಬೆಳಗ್ಗೆ 9ಗಂಟೆಗೆ ನಗರದ ಪ್ರಮುಖ ಬೀದಿಗಳಲ್ಲಿ ಶ್ರೀ ದೇವಿಯ ಭವ್ಯ ಮೆರವಣಿಗೆ ನಡೆಯಲಿದೆ.

21ರಂದು ಮಂಗಳವಾರ ದಿಂದ ಬುಧವಾರವರೆಗೆ ಹೋಮ ಹವನ ಹಾಗೂ ಶ್ರೀದೇವಿಯವರ ಪ್ರಾಣಪ್ರತಿಷ್ಠಾಪನೆ ಮಾಡಲಾಗುವುದು .ಡಿ.23ರಿಂದ 24ವರೆಗೆ ಸಾರ್ವಜನಿಕರಿಂದ ಶ್ರೀದೇವಿಗೆ ಉಡಿತುಂಬುವ ಕಾರ್ಯಕ್ರಮ ಆಯೋಜಿಸಲಾಗಿದೆ ಎಂದು ವಿವರಣೆ ನೀಡಿದರು.

ಅಶೋಕ ಲಿಂಬಾವಳಿ ಮಾತನಾಡಿ, ಗ್ರಾಮದೇವತೆ ಜಾತ್ರಾ ಮಹೋತ್ಸವ ನಿಮಿತ್ತ ಬಾಗಲಕೋಟೆ, ವಿದ್ಯಾಗಿರಿ, ನವನಗರದ ಹಿರಿಯರು,ನಗರಸಭೆ ಎಲ್ಲ ಸದಸ್ಯರು ಪ್ರಮುಖರೊಂದಿಗೆ ಚರ್ಚಿಸಿ ಅದ್ದೂರಿ ಜಾತ್ರೆ ಮಾಡಲು ನಿರ್ಧರಿಸಲಾಗಿದೆ ಎಂದರು.

ಜಾತ್ರೆಯ ನಿಮಿತ್ತ ಬಾಗಲಕೋಟೆ ಯಲ್ಲಿ ಅಲಂಕಾರ‌ ಮಾಡಲಾಗುವುದು.‌ದೇವಿಯ ಅದ್ದೂರಿ ಮೆರವಣಿಗೆಯನ್ನು ಗ್ರಾಮದ ಪ್ರಮುಖ ಬೀದಿಗಳಲ್ಲಿ ನಡೆಸಲಾಗುವುದು. ಎಲ್ಲ ರಾಜಕೀಯ ಪಕ್ಷದ ಮುಖಂಡರನ್ನು ಕಾರ್ಯಕ್ರಮಕ್ಕೆ ಆಹ್ವಾನ ನೀಡಲಾಗುವುದು ಎಂದರು.

ಈ ಸಂದರ್ಭದಲ್ಲಿ ಸಮಿತಿ ಯ ಬಂಡೇರಾವ್ ಸರ್ ದೇಸಾಯಿ,ಸಂಗಯ್ಯ ಸರಗನಸಚಾರಿ,, ಅಶೋಕ ಲಿಂಬಾವಳಿ ,ಗುಂಡುರಾವ್ ಶಿಂಧೆ, ಕಾಂತುಬಪತ್ತಾರ,ಸದಾನಂದ ನಾರಾ, ಶ್ರೀನಾಥ ಸಜ್ಜನ್, ಸುರೇಶ ಮಜ್ಜಗಿ, ಮುಂತಾದವರು ಇದ್ದರು.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published.

Subscribe to our Brand New YouTube Channel

Subscribe Newsletter

Get latest news karnataka updates on your email.