ಬಾಗಲಕೋಟೆ: ಪಕ್ಷದ ಹಿರಿಯ ಮುಖಂಡ ಎಸ್ಸಾರ್ ಪಾಟೀಲ ಅವರಿಗೆ ಟಿಕೆಟ್ ತಪ್ಪಿಲ್ಲ. ವರಿಷ್ಠರು ಎರಡು ಟಿಕೆಟ್ ಕೊಡ್ತೀವಿ ಅಂತ ಹೇಳಿದರು, ಇವರು ಒಂದು ಕೊಟ್ಟರೆ ಮಾತ್ರ ನಿಲ್ಲುತ್ತೇನೆ ಅಂತ ಹೇಳಿದರು ನನಗೊಬ್ಬನಿಗೆ ಕೊಟ್ಟರೆ ಮಾತ್ರ ನಿಲ್ತೀನಿ ಅಂತ ಹೇಳಿದರು ಹಂಗಾಗಿ ಹೈಕಮಾಂಡ್ ಆ ತರಹದ ನಿರ್ಧಾರ ತೆಗೆದುಕೊಂಡಿದೆ ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಹೇಳಿದರು.
ಬಾದಾಮಿಯಲ್ಲಿ ಇಂದು ಪರಿಷತ್ ಚುನಾವಣೆ ಪ್ರಚಾರಕ್ಕೆ ಆಗಮಿಸಿದ ವೇಳೆ ಅವರು ಈ ರೀತಿ ಹೇಳುವ ಮೂಲಕ ಟಿಕೆಟ್ ತಪ್ಪಲು ತಾವು ಕಾರಣರಲ್ಲ ಎಂದು ಸ್ಪಷ್ಟ ಪಡಿಸಿದರು.
ಇದೇ ವೇಳೆ ಅವರು ಚುನಾವಣೆಯಲ್ಲಿ ಜೆಡಿಎಸ್ ಎಫೆಕ್ಟ್ ಬಗ್ಗೆ ಕುಮಾರಸ್ವಾಮಿ ಹೇಳಿಕೆಗೆ ಪ್ರತಿಕ್ರಿಯಿಸಲು ಸಿದ್ದು ನಿರಾಕರಿಸುತ್ತ ನಾನು ಜೆಡಿಎಸ್ ಬಗ್ಗೆ ಮಾತನಾಡಲ್ಲ. ಅವರ ಬಗ್ಗೆ ಕೇಳಬೇಡಿ. ಅವರೆಲ್ಲಾ ನಾಲ್ಕೈದು ಜಿಲ್ಲೆಗಳಲ್ಲಿ ಇರುವಂತವರು, ಅಂಥವರ ಬಗ್ಗೆ ನಾನು ಮಾತನಾಡಲ್ಲ ಎಂದ ಸಿದ್ದರಾಮಯ್ಯ ತಿರುಗೇಟು ನೀಡಿದರು.
ರಾಜ್ಯದಲ್ಲಿ ಸಿಎಂ ಬದಲಾವಣೆ ವಿಚಾರ ಕುರಿತು ಮಾತನಾಡಿದ ಅವರು ಏನು ನಡೀತಾ ಇದೆ ಅಂತ ನನಗೆ ಗೊತ್ತಿಲ್ಲ. ಬಿಜೆಪಿಯಲ್ಲಿ ಗುಂಪಿದೆ ಅನ್ನೋದು ಎಲ್ಲರಿಗೂ ಗೊತ್ತಿದೆ. ಯಡಿಯೂರಪ್ಪನನ್ನು ತೆಗೆದು ಹಾಕಿದರು. ಯಡಿಯೂರಪ್ಪನ್ನ ಗುಂಪುಗಾರಿಕೆಯಿಂದ ಅಲ್ಲವೇ ತೆಗೆದು ಹಾಕಿದ್ದು. ಯತ್ನಾಳ್ ದಿನಾಲು ಏನು ಮಾಡುತ್ತಿದ್ದಾರೆ. ೧೦ನೇ ತಾರೀಖು ಏನು ಬದಲಾವಣೆ ಆಗುತ್ತೆ ಅಂತ ಯತ್ನಾಳ್ ಅವರನ್ನು ಕೇಳಿ. ನನಗೆ ಗೊತ್ತಿಲ್ಲ ನಾನೇನು ಅವರ ಜೊತೆ ಮಾತನಾಡಿಲ್ಲ ಎಂದರು.