News Kannada
Sunday, February 25 2024
ಬಾಗಲಕೋಟೆ

ಬಾಗಲಕೋಟೆ: ಪ್ರಿಯಕರನ ಜೊತೆ ಸೇರಿ ಗಂಡನನ್ನು ಕೊಲೆ ಮಾಡಿದ ಪತ್ನಿ

ಬೆಂಗಳೂರು-ಮಂಗಳೂರು ರಾಷ್ಟ್ರೀಯ ಹೆದ್ದಾರಿ 75ರ ಮದೇನೂರು ಗ್ರಾಮದ ಬಳಿ ಚಾಲಕನ ನಿಯಂತ್ರಣ ತಪ್ಪಿದ ಕಾರು ಎಲೆಕ್ಟ್ರಿಕ್ ಪೋಲ್‌ಗೆ ಡಿಕ್ಕಿ ಹೊಡೆದು, ರಸ್ತೆ ಬದಿಯ ರೈತನ ಜಮೀನಿಗೆ ಬಿದ್ದಿದೆ.
Photo Credit : Freepik

ಬಾಗಲಕೋಟೆ: ಬಾಗಲಕೋಟೆ ಜಿಲ್ಲೆ ಹುನಗುಂದ ತಾಲೂಕು ಕಮತಗಿ ಕ್ರಾಸ್ ಬಳಿ ಮಹಿಳೆಯೊಬ್ಬಳು ಕಾರ್ ಹತ್ತಿಸಿ ಗಂಡನನ್ನು ಕೊಲೆ ಮಾಡಿದ ಘಟನೆ ಬೆಳಕಿಗೆ ಬಂದಿದೆ.

ಬೈಕ್ ಸವಾರನಿಗೆ ಅಪರಿಚಿತ ವಾಹನ ಡಿಕ್ಕಿಯಾಗಿ ಮೃತಪಟ್ಟಿದ್ದಾನೆ ಎನ್ನಲಾಗಿದ್ದ ಪ್ರಕರಣ ಪೊಲೀಸರ ತನಿಖೆಯಲ್ಲಿ ಮತ್ತೊಂದು ತಿರುವು ಪಡೆದುಕೊಂಡಿದೆ. ಅಕ್ರಮ ಸಂಬಂಧ ಹೊಂದಿದ್ದ ಪತ್ನಿ ಪ್ರಿಯಕರನೊಂದಿಗೆ ಸೇರಿ ಪತಿಯನ್ನು ಕೊಲೆ ಮಾಡಿರುವುದು ಪೊಲೀಸರ ತನಿಖೆಯಲ್ಲಿ ಗೊತ್ತಾಗಿದೆ.

ಪ್ರವೀಣ್ ಮೃತಪಟ್ಟ ವ್ಯಕ್ತಿ. ಈತನ ಪತ್ನಿ ನಿತ್ಯಾ ಮೆಕಾನಿಕ್ ರಾಘವೇಂದ್ರನೊಂದಿಗೆ ಅಕ್ರಮ ಸಂಬಂಧ ಬೆಳೆಸಿದ್ದು, ಬೈಕ್ ನಲ್ಲಿ ತೆರಳುತ್ತಿದ್ದ ಪತಿ ಪ್ರವೀಣ್ ಗೆ ಕಾರ್ ನಿಂದ ಡಿಕ್ಕಿ ಹೊಡಿಸಿ ಪರಾರಿಯಾಗಿದ್ದರು. ಅಪಘಾತವಾಗಿರುವ ಬಗ್ಗೆ ಪತ್ನಿಗೆ ಕರೆ ಮಾಡಿ ಪ್ರವೀಣ್ ಮಾಹಿತಿ ನೀಡಿದ್ದು, ಕಾರ್ ತಿರುಗಿಸಿಕೊಂಡು ಬಂದ ಪತ್ನಿ, ಪ್ರಿಯಕರ ಮತ್ತೆ ಪ್ರವೀಣ್ ಗೆ ಡಿಕ್ಕಿ ಹೊಡೆಸಿ ಸಾಯಿಸಿದ್ದಾರೆ.

ಗಂಡನ ಜೊತೆ ಜಗಳವಾಡಿಕೊಂಡಿದ್ದ ನಿತ್ಯಾ ಒಂದು ವರ್ಷದ ಹಿಂದೆ ತವರಿನಲ್ಲಿ ರಾಘವೇಂದ್ರನೊಂದಿಗೆ ಅಕ್ರಮ ಸಂಬಂಧ ಬೆಳೆಸಿದ್ದಳು. ಮೂರು ತಿಂಗಳ ಹಿಂದೆ ಪ್ರವೀಣ್ ಪತ್ನಿಯ ತವರಿಗೆ ಬಂದಿದ್ದು, ರಾಘವೇಂದ್ರನ ಮೆಸೇಜ್ ನೋಡಿ ಪತ್ನಿ ಆಕ್ರಮ ಸಂಬಂಧ ಹೊಂದಿರುವುದು ಗೊತ್ತಾಗಿದೆ. ಇದರಿಂದ ಕೆರಳಿದ ಪ್ರವೀಣ್ ಮಗಳನ್ನು ಕರೆದುಕೊಂಡು ಬೈಕ್ ನಲ್ಲಿ ಊರಿಗೆ ಹೊರಟಿದ್ದಾನೆ. ಸ್ವಿಫ್ಟ್ ಕಾರ್ ನಲ್ಲಿ ಪ್ರಿಯಕರನೊಂದಿಗೆ ಪ್ರವೀಣ್ ನನ್ನು ಹಿಂಬಾಲಿಸಿದ ನಿತ್ಯಾ ಬೈಕ್ ನಲ್ಲಿ ಮಗಳು ಇದ್ದ ಕಾರಣ ಪ್ರವೀಣ್ ಅನ್ನು ಕೊಲೆ ಮಾಡಿಲ್ಲ.

ಹುನಗುಂದದಲ್ಲಿ ತಾಯಿಯ ಬಳಿ ಮಗಳನ್ನು ಬಿಟ್ಟು ಬೈಕ್ ನಲ್ಲಿ ಒಬ್ಬನೇ ತೆರಳುವಾಗ ಕಾರ್ ನಿಂದ ಡಿಕ್ಕಿ ಹೊಡೆಸಿ ಪರಾರಿಯಾಗಿದ್ದಾರೆ. ಅಪರಿಚಿತವಾಹನ ಡಿಕ್ಕಿ ಹೊಡೆದಿರಬಹುದು ಎಂದು ಪತ್ನಿಗೆ ಕರೆ ಮಾಡಿ ಅಪಘಾತವಾದ ಬಗ್ಗೆ ಪ್ರವೀಣ್ ಮಾಹಿತಿ ನೀಡಿದ್ದಾನೆ. ಈತ ಇನ್ನೂ ಸತ್ತಿಲ್ಲ ಎಂದು ಮತ್ತೆ ವಾಪಸ್ ಕಾರ್ ತಿರುಗಿಸಿಕೊಂಡು ಬಂದ ನಿತ್ಯಾ ಹಾಗೂ ರಾಘವೇಂದ್ರ ಬೈಕ್ ಗೆ ವಾಹನ ಡಿಕ್ಕಿ ಹೊಡೆಸಿ ಪ್ರವೀಣ್ ನನ್ನು ಕೊಲೆ ಮಾಡಿ ಪರಾರಿಯಾಗಿದ್ದಾರೆ.

ಅಮೀನಗಢ ಠಾಣೆ ಪೊಲೀಸರು ಬೈಕ್ ಬಿದ್ದ ಜಾಗ, ಶವದ ಮೇಲಿನ ಗಾಯ ಗಮನಿಸಿ ಕೊಲೆ ಶಂಕೆ ಹಿನ್ನೆಲೆಯಲ್ಲಿ ತನಿಖೆ ನಡೆಸಿದ್ದು, ಕೊಲೆ ರಹಸ್ಯ ಪತ್ತೆ ಹಚ್ಚಿದ್ದಾರೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
12790
NewsKannada

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು