ಬೆಳಗಾವಿ: ಇಂದಿನಿಂದ ಬೆಳಗಾವಿಯ ಸುವರ್ಣ ಸೌಧದಲ್ಲಿ ಚಳಿಗಾಲದ ವಿಧಾನ ಮಂಡಲದ ಅಧಿವೇಶನ ಆರಂಭಗೊಳ್ಳುತ್ತಿದೆ. ಈ ಹಿನ್ನಲೆಯಲ್ಲಿ ಪೊಲೀಸರು ಸುವರ್ಣ ಸೌಧದ ನಾಲ್ಕು ದ್ವಾರಗಳಲ್ಲಿ ಕಟ್ಟು ನಿಟ್ಟಿನ ತಪಾಸಣೆ ನಡೆಸುತ್ತಿದ್ದು, ಎರಡು ಡೋಸ್ ಲಸಿಕೆ ಪಡೆದವರಿಗೆ ಮಾತ್ರವೇ ಸುವರ್ಣ ಸೌಧ ಪ್ರವೇಶಕ್ಕೆ ಅನುಮತಿಸಾಗುತ್ತಿದೆ.ಸುವರ್ಣ ಸೌಧ ಪ್ರವೇಶಿಸೋ ಪ್ರತಿಯೊಬ್ಬರನ್ನ ತಪಾಸಣೆಗೆ ಒಳಪಡಿಸುತ್ತಿದ್ದಾರೆ.
ಈ ಸಂಬಂಧ ತಪಾಸಣೆ ಬಿಗಿಗೊಳಿಸಿರುವಂತ ಪೊಲೀಸರು, ಜತೆಗೆ ಕೊರೋನಾ 2 ಡೋಸ್ ಲಸಿಕೆ ಇಲ್ಲವೇ ನೆಗೆಟಿವ್ ವರದಿಯನ್ನು ತೋರಿಸಿದರೆ ಮಾತ್ರವೇ ಸುವರ್ಣ ಸೌಧ ಪ್ರವೇಶಿಸೋದಕ್ಕೆ ಅವಕಾಶ ನೀಡುತ್ತಿದ್ದಾರೆ.
ಇನ್ನೂ ಇಂದು ಅಧಿವೇಶನ ಆರಂಭಕ್ಕೂ ಮುನ್ನಾ, ಗೃಹ ಸಚಿವ ಅರಗ ಜ್ಞಾನೇಂದ್ರ ಅವರು, ಹಿರಿಯ ಪೊಲೀಸ್ ಅಧಿಕಾರಿಗಳೊಂದಿಗೆ ಸಭೆ ನಡೆಸಿದರು.ಬೆಳಗಾವಿಯಲ್ಲಿ ನಡೆಯುತ್ತಿರುವ ಚಳಿಗಾಲದ, ಅಧಿವೇಶನ ಸಂದರ್ಭದಲ್ಲಿ ಯಾವುದೇ ಅಹಿತಕರ ಘಟನೆಗಳಿಗೆ, ಅವಕಾಶವಿಲ್ಲದಂತೆ, ಸುಲಲಿತವಾಗಿ ನಡೆಯಲು, ತೆಗೆದುಕೊಂಡಿರುವ ರಕ್ಷಣಾ ಕ್ರಮಗಳ ಬಗ್ಗೆ, ಸಚಿವರು ಪರಿಚಯ ಪಡೆದುಕೊಂಡರು.
ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಒಳಾಡಳಿತ, ರಜನೀಶ್ ಗೋಯಲ್, ಎಡಿಜಿಪಿ ಕಾನೂನು ಮತ್ತು ಸುವ್ಯವಸ್ಥೆ, ಪ್ರತಾಪ್ ರೆಡ್ಡಿ, ಸತೀಶ್ ಕುಮಾರ್, ಐಜಿ ಬೆಳಗಾವಿ ವೃತ್ತ ಹಾಗೂ ಬೆಳಗಾವಿ ಪೊಲೀಸ್ ಆಯುಕ್ತ ತ್ಯಾಗರಾಜ್ ಅವರೂ ಉಪಸ್ಥಿತರಿದ್ದರು.