News Kannada
Friday, March 31 2023

ಬೆಳಗಾವಿ

ರಾಜ್ಯದ ಸೈನಿಕ ಶೌರ್ಯ ಪ್ರಶಸ್ತಿ ಗೌರವ ಧನ ಹೆಚ್ಚಳ

ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ
Photo Credit :

ಬೆಳಗಾವಿ: ಶೌರ್ಯ ಪ್ರಶಸ್ತಿ ಪುರಸ್ಕೃತರಿಗೆ ರಾಜ್ಯ ಸರಕಾರ ಒಂದು ಬಾರಿ ನೀಡುವ ಪ್ರಶಸ್ತಿಯ ಮೊತ್ತವನ್ನು ಹೆಚ್ಚಿಸಿದೆ. ಈ ಬಗ್ಗೆ ರಾಜ್ಯದ ಸೈನಿಕ ಕಲ್ಯಾಣ ಮತ್ತು ಪುನರ್‌ ವಸತಿ ಇಲಾಖೆ ಗುರುವಾರ ಆದೇಶ ನೀಡಿದೆ.

1971ರಲ್ಲಿ ಪಾಕಿಸ್ಥಾನ ವಿರುದ್ಧದ ಯುದ್ಧದಲ್ಲಿ ಜಯ ಸಾಧಿ ಸಿ 50 ವರ್ಷ ಪೂರೈಸಿದ ಹಿನ್ನೆಲೆಯಲ್ಲಿ ಬೆಳಗಾವಿಯಲ್ಲಿ ಗುರುವಾರ ಆಯೋಜಿಸಲಾಗಿದ್ದ “ವಿಜಯ ದಿವಸ’ ಕಾರ್ಯಕ್ರಮದಲ್ಲಿ ಸಿಎಂ ಈ ಘೋಷಣೆ ಮಾಡಿದ್ದಾರೆ.

ಅದಕ್ಕೆ ಪೂರಕವಾಗಿ ಬೆಳಗಾವಿಯಲ್ಲಿ ಮಾತನಾಡಿದ ಮುಖ್ಯಮಂತ್ರಿ ಬೊಮ್ಮಾಯಿ, ಪರಮವೀರ ಚಕ್ರ, ಅಶೋಕ ಚಕ್ರ ಪ್ರಶಸ್ತಿ ವಿಜೇತರಿಗೆ ತಲಾ 1.50 ಕೋಟಿ ರೂ., ಮಹಾವೀರ ಚಕ್ರ, ಕೀರ್ತಿ ಚಕ್ರ ವಿಜೇತರಿಗೆ ತಲಾ 1 ಕೋಟಿ ರೂ.ವೀರಚಕ್ರ ಮತ್ತು ಶೌರ್ಯ ಚಕ್ರ ವಿಜೇತರಿಗೆ 50 ಲಕ್ಷ ರೂ. ಹಾಗೂ ವಿವಿಧ ಸೇನಾ ಮೆಡಲ್‌ಗ‌ಳಿಗೆ 15 ಲಕ್ಷ ರೂ.ನಿಗದಿಪಡಿಸಲಾಗಿದೆ ಎಂದರು.

ಸರಕಾರ ಸೈನಿಕರು, ನಿವೃತ್ತ ಯೋಧರು ಮತ್ತು ಹುತಾತ್ಮರ ಕುಟುಂಬಗಳ ಕ್ಷೇಮಾಭಿವೃದ್ಧಿಗೆ ಬದ್ಧ ವಾಗಿದೆ ಎಂದರು. ಕರ್ನಾಟಕ – ಕೇರಳ ಉಪ ಕ್ಷೇತ್ರದ ಕಮಾಂಡಿಂಗ್‌ ಆಫೀಸರ್‌ ಮೇ| ಜ| ಜೆ.ವಿ. ಪ್ರಸಾದ್‌, ಡಿಜಿಪಿ ಪ್ರವೀಣ್‌ ಸೂದ್‌, ಸರಕಾರದ ಮುಖ್ಯ ಕಾರ್ಯ ದರ್ಶಿ ಪಿ. ರವಿಕುಮಾರ್‌, ಸಚಿವ ಆರಗ ಜ್ಞಾನೇಂದ್ರ ಹುತಾತ್ಮ ಯೋಧರಿಗೆ ಗೌರವ ಸಮರ್ಪಿಸಿದರು.

See also  ಚಿಕ್ಕೋಡಿ: ಮದುವೆ ಸಮಾರಂಭದಲ್ಲಿ ಗುಂಡಿನ ಮಳೆಗೈದ ಮಾಜಿ ಸೈನಿಕ
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published. Required fields are marked *

12795
NewsKannada

Read More Articles

Subscribe Newsletter

Get latest news karnataka updates on your email.

[mc4wp_form id="118196"]

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು