ಬೆಳಗಾವಿ: ಬೆಳಗಾವಿಯ ಬಿಜೆಪಿ ಶಾಸಕರ ಕಚೇರಿಯ ಮೇಲೆ ಕಳೆದ ರಾತ್ರಿ ದುಷ್ಕರ್ಮಿಗಳು ಕಲ್ಲೆಸೆದಿರುವಂತ ಘಟನೆ, ನಡೆದಿದೆ. ಕಲ್ಲೆಸೆತದಿಂದಾಗಿ ಶಾಸಕರ ಕಚೇರಿಯ ಗಾಜುಗಳು ಪುಡಿಪುಡಿಯಾಗಿವೆ.
ಬೆಳಗಾವಿ ಜಿಲ್ಲೆಯ ಉತ್ತರ ಕ್ಷೇತ್ರದ ಬಿಜೆಪಿ ಶಾಸಕ ಅನಿಲ್ ಬೆನಕೆ ಅವರ ನಗರದ ಚವ್ಹಾಟ್ ಗಲ್ಲಿಯಲ್ಲಿರುವಂತ ಶಾಸಕರ ಕಚೇರಿಯ ಮೇಲೆ ಕಳೆದ ರಾತ್ರಿ ದುಷ್ಕರ್ಮಿಗಳು ಕಲ್ಲೆಸೆದಿರೋದಾಗಿ ತಿಳಿದು ಬಂದಿದೆ.
ಶಾಸಕರ ಕಚೇರಿಯ ಮೇಲೆ ಕಲ್ಲೆಸೆದ ಪ್ರಕರಣದಿಂದಾಗಿ ಸ್ಥಳಕ್ಕೆ ಪೊಲೀಸರು ಆಗಮಿಸಿ, ಪರಿಶೀಲನೆ ನಡೆಸುತ್ತಿದ್ದಾರೆ. ಕಲ್ಲೆಸೆದಂತ ದುಷ್ಕರ್ಮಿಗಳ ಪತ್ತೆಗಾಗಿ ಪೊಲೀಸರು ತನಿಖೆ ಕೈಗೊಂಡಿದ್ದಾರೆ.