ಬೆಳಗಾವಿ: ಮನೆಹಾನಿ, ಬೆಳೆ ಸಮೀಕ್ಷೆ ನಡೆಸಿ ತಕ್ಷಣ ಪರಿಹಾರ ನೀಡಲು ಸಚಿವ ಗೋವಿಂದ ಕಾರಜೋಳ ಸೂಚನೆ ನೀಡಿದ್ದಾರೆ.
ಅತಿವೃಷ್ಟಿ ಹಾಗೂ ಪ್ರವಾಹ ಮುಂಜಾಗ್ರತೆ ಕುರಿತು ಚಿಕ್ಕೋಡಿಯಲ್ಲಿ ಸೋಮವಾರ ನಡೆದ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಮಳೆಯಿಂದ 877 ಹೆಕ್ಟೇರ್ ಪ್ರದೇಶ ಜಲಾವೃತಹೊಂಡಿರುವುದರಿಂದ ನೀರು ಸರಿದ ಬಳಿಕ ಸಮೀಕ್ಷೆ ನಡೆಸಿ ಸೂಕ್ತ ಪರಿಹಾರ ನೀಡಬೇಕು. ಜೊತೆಗೆ ಹಾನಿಗೊಳಗಾಗಿರುವ 775 ಮನೆಗಳಿಗೂ ಕೂಡ ಮಾರ್ಗಸೂಚಿ ಪ್ರಕಾರ ತಕ್ಷಣವೇ ಪರಿಹಾರವನ್ನು ನೀಡಬೇಕು ಎಂದು ಹೇಳಿದರು.
ಎನ್.ಆರ್.ಇ.ಜಿ. ಯೋಜನೆಯಡಿ ರಸ್ತೆಗಳ ದುರಸ್ತಿ ಕಾರ್ಯ ಕೈಗೊಳ್ಳಬೇಕು.ಈ ಬಾರಿ ಇದುವರೆಗೆ ಮಳೆಯಿಂದ ಹೆಚ್ಚಿನ ಪ್ರಮಾಣ ಆಗಿರುವುದಿಲ್ಲ. ಆದಾಗ್ಯೂ ಸಂಭವನೀಯ ಪರಿಸ್ಥಿತಿ ಸಮರ್ಥವಾಗಿ ಎದುರಿಸುವ ನಿಟ್ಟಿನಲ್ಲಿ ಸಿದ್ಧತೆ ಮಾಡಿಕೊಳ್ಳಲಾಗಿದೆ.
ಡ್ರೋಣ್ ಮೂಲಕ ಬೆಳೆಹಾನಿಯ ಸಮೀಕ್ಷೆ ನಡೆಸಬೇಕು. ನೀರು ಸರಿದ ಬಳಿಕ ಕ್ಷೇತ್ರ ಭೇಟಿ ನೀಡಿ ನಿಯಮಾವಳಿ ಪ್ರಕಾರ ಹಾನಿ ಕುರಿತು ಸಮೀಕ್ಷೆ ಕೈಗೊಳ್ಳಬೇಕು ಎಂದು ಕೃಷಿ ಮತ್ತು ತೋಟಗಾರಿಕೆ ಇಲಾಖೆಯ ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.