ಬೆಳಗಾವಿ: ಸುವರ್ಣಸೌಧದ ಒಳಗೆ ಕುವೆಂಪು, ಬಸವಣ್ಣ, ಶಿಶುನಾಳ ಶರೀಫ್, ಡಾ.ಬಿ.ಆರ್.ಅಂಬೇಡ್ಕರ್, ವಾಲ್ಮೀಕಿ, ಕನಕದಾಸ, ವಲ್ಲಭಬಾಯಿ ಪಟೇಲ್, ನೆಹರು ಸೇರಿದಂತೆ ಸಮಾಜ ಸುಧಾರಕರು, ಮುತ್ಸದ್ದಿಗಳ ಭಾವಚಿತ್ರಗಳನ್ನು ಅಳವಡಿಸಬೇಕು ಎಂದು ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯ ಒತ್ತಾಯಿಸಿದರು.
ಈ ಸಂಬಂಧ ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ ಅವರಿಗೆ ಪತ್ರ ಬರೆದಿದ್ದಾರೆ. ಇದಕ್ಕೂ ಮುನ್ನ ಬಿಜೆಪಿ ನೇತೃತ್ವದ ಸರ್ಕಾರ ಹಿಂದುತ್ವ ನಾಯಕ ವೀರ ಸಾವರ್ಕರ್ ಅವರ ಭಾವಚಿತ್ರವನ್ನು ಸೌಧದ ಒಳಗೆ ಪ್ರತಿಷ್ಠಾಪಿಸಿ ಕಾಂಗ್ರೆಸ್ ನಿಂದ ಆಕ್ಷೇಪ ವ್ಯಕ್ತಪಡಿಸಿತ್ತು.
ಈಗ, ಈ ನಿಟ್ಟಿನಲ್ಲಿ ಬಿಜೆಪಿಯ ಹೊಸ ಕಾರ್ಯತಂತ್ರವನ್ನು ಎದುರಿಸಲು ಕಾಂಗ್ರೆಸ್ ಬುದ್ಧಿವಂತ ಹೆಜ್ಜೆ ಇಡಲು ನಿರ್ಧರಿಸಿದೆ.