ಬೆಳಗಾವಿ: ಹಳೆ ಪಿಬಿ ರಸ್ತೆಯ ಕಾಮತ್ ಗಲ್ಲಿ ಕಾರ್ನರ್ನಲ್ಲಿ ಡಿ.24ರ ಶನಿವಾರ ರಾತ್ರಿ 11 ಗಂಟೆ ಸುಮಾರಿಗೆ ಸಂಭವಿಸಿದ ಬೆಂಕಿ ಅವಘಡದಲ್ಲಿ ಟೈರ್ ಅಂಗಡಿ ಸೇರಿದಂತೆ ನಾಲ್ಕು ಅಂಗಡಿಗಳು ಸುಟ್ಟು ಭಸ್ಮವಾಗಿವೆ.
ವಿಷಯ ತಿಳಿಯುತ್ತಿದ್ದಂತೆ ಅಗ್ನಿಶಾಮಕ ದಳದ ಸಿಬ್ಬಂದಿ ಸ್ಥಳಕ್ಕೆ ಧಾವಿಸಿ ಬೆಂಕಿ ನಂದಿಸಲು ಯತ್ನಿಸಿದರು.
ಘಟನಾ ಸ್ಥಳದಲ್ಲಿ ಡಿಸಿಪಿ ರವೀಂದ್ರ ಹಾಗೂ ಇತರೆ ಪೊಲೀಸರು ಉಪಸ್ಥಿತರಿದ್ದರು.