News Kannada
Tuesday, February 07 2023

ಬೆಳಗಾವಿ

ಬೆಳಗಾವಿ: ಕರ್ನಾಟಕ ವಿಧಾನಮಂಡಲ ಹಲವು ಪ್ರಥಮಗಳನ್ನು ದಾಖಲಿಸಿದೆ ಎಂದ ಮುಖ್ಯಮಂತ್ರಿ ಬೊಮ್ಮಾಯಿ

Basavaraj Bommai said that the Congress is afraid of defeat.
Photo Credit : News Kannada

ಬೆಳಗಾವಿ : ಭೂ ಸುಧಾರಣೆ ಕಾಯ್ದೆಗಳಿಂದ ಹಿಡಿದು ಕ್ರಾಂತಿಕಾರಿ ಮಸೂದೆಗಳು, ಕರ್ನಾಟಕ ಜಿಲ್ಲಾ ಪಂಚಾಯತ್ ಅಧಿಕಾರ ವಿಕೇಂದ್ರೀಕರಣ ಕಾನೂನು ದೇಶದಲ್ಲಿಯೇ ಪ್ರಥಮವಾಯಿತು. ಈ ರೀತಿ ಕರ್ನಾಟಕದ ವಿಧಾನಮಂಡಲ ಹತ್ತು ಹಲವಾರು ಪ್ರಮಗಳನ್ನು ದಾಖಲಿಸಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು.

ಅವರು ವಿಜಯ ಕರ್ನಾಟಕ ವತಿಯಿಂದ ಆಯೋಜಿಸಿದ್ದ ಸದನ ಶೂರರು – ಕಾಫಿ ಟೇಬಲ್ ಪುಸ್ತಕ ಬಿಡುಗಡೆ ಮಾಡಿದರು.

ರಾಜ್ಯದ ವಿಧಾನಮಂಡಲದಲ್ಲಿ ಕ್ರಾಂತಿಕಾರಿ ಮಸೂದೆಗಳು, ಬೇರೆ ರಾಜ್ಯಗಳಲ್ಲಿ ಇಂತಹ ಮಸೂದೆಗಳ ಚರ್ಚೆಯೂ ನಡೆದಿರಲಿಲ್ಲ. ಕರ್ನಾಟಕ ಪ್ರಗತಿಪರವಾದ ರಾಜ್ಯವಾದ್ದರಿಂದ ಪ್ರಮುಖ ಮಸೂದೆಗಳು ಬಂದವು. ಜಿಲ್ಲಾ ಪಂಚಾಯತ್ ಅಧಿಕಾರ ವಿಕೇಂದ್ರೀಕರಣ ಕಾನೂನು ನಂತರ ಸಂವಿಧಾನದ 73 ಮತ್ತು 74 ನೇ ತಿದ್ದುಪಡಿಗೆ ನಾಂದಿಯಾಯಿತು ಎಂದರು.

ಹಿರಿಯರ ಹಾದಿಯಲ್ಲಿ ನಡೆಯಲು ಸ್ಪೂರ್ತಿ :

ಕರ್ನಾಟಕದಲ್ಲಿ ಸರ್ವಸ್ವತಂತ್ರ ಲೋಕಾಯುಕ್ತ ಸಂಸ್ಥೆ ಸ್ಥಾಪಿಸಲಾಯಿತು. ಕರ್ನಾಟಕ ವಿಧಾನಮಂಢಲ 70 ವರ್ಷಗಳಲ್ಲಿ ಹಲವು ಪ್ರಥಮಗಳನ್ನು ದಾಖಲಿಸಿದೆ. ಆದ್ದರಿಂದ ಕರ್ನಾಟಕದ ವಿಧಾನಮಂಡಲಕ್ಕೆ ದೇಶದಲ್ಲಿ ತನ್ನದೇ ಆದ ಮಹತ್ವವನ್ನು ಹೊಂದಿದೆ. ನಮ್ಮ ಹಿರಿಯರು ನಡೆದು ಬಂದ ದಾರಿಯಲ್ಲಿ ನಡೆದು, ಅವರ ಆದರ್ಶಗಳ ಹಾದಿಯಲ್ಲಿ ನಡೆಯಲು ಸ್ಪೂರ್ತಿ ತುಂಬುವಂತಹ ಕಾಫಿ ಟೇಬಲ್ ಪುಸ್ತಕವನ್ನು ವಿಜಯಕರ್ನಾಟಕ ಹೊರತಂದಿದೆ ಎಂದರು.

ರಾಜಕಾರಣಿಗಳ ಸಾಮಾಜಿಕ ಜವಾಬ್ದಾರಿಯನ್ನು ಮನವರಿಕೆ ಮಾಡಿಸುವುದೇ ನಿಜವಾದ ಪತ್ರಿಕೆ :

ಒಂದು ಪತ್ರಿಕೆ 70 ವರ್ಷದ ವಿಧಾನಮಂಡಲದ ವಿಷಯಗಳನ್ನಾಧರಿಸಿ ಕಾಫಿ ಟೇಬಲ್ ಪುಸ್ತಕ ಮಾಡಿರುವುದು ಇದೇ ಪ್ರಥಮ ಎನಿಸುತ್ತದೆ. ಸಂಸದೀಯ ವ್ಯವಹಾರಗಳ ಇಲಾಖೆಗಳಿಂದ ಇಂತಹ ಪುಸ್ತಕಗಳನ್ನು ಹೊರತರುತ್ತೇವೆ. ಇಂದು ನಾವು ಆದರ್ಶ ಶಾಸಕರು ಎಂದು ಶ್ರೀ ಆರ್.ವಿ.ದೇಶಪಾಂಡೆಯವರಿಗೆ ನೀಡಲಾಗಿದೆ. ಪ್ರಜಾಪ್ರಭುತ್ವ ಗಟ್ಟಿಯಾಗಿ ನಿಲ್ಲಲು ನಾಲ್ಕನೇ ಸ್ತಂಭವೆನ್ನಲಾಗುವ ಮಾಧ್ಯಮ ಪ್ರಮುಖ ಪಾತ್ರ ವಹಿಸುತ್ತದೆ. ರಾಜಕಾರಣಿಗಳ ನಿಲುವುಗಳನ್ನು ಜನಪರವನ್ನಾಗಿಸುವ ಶಕ್ತಿ ಪತ್ರಿಕೋದ್ಯಮಕ್ಕಿದೆ. ರಾಜಕಾರಣಿಗಳು ತಮ್ಮ ಭವಿಷ್ಯವನ್ನು ನೋಡಿಕೊಳ್ಳುವುದು ಸಹಜ ಪ್ರಕ್ರಿಯೆ. ಆದರೆ ರಾಜಕಾರಣಿಗಳ ಸಾಮಾಜಿಕ ಜವಾಬ್ದಾರಿಯನ್ನು ಮನವರಿಕೆ ಮಾಡಿಸುವ ಪತ್ರಿಕೆ, ನಿಜವಾದ ಜನಪರ ಪತ್ರಿಕೆ ಎಂದರು.

ನಮ್ಮ ನಡವಳಿಕೆ ಮುಂದಿನ ಪೀಳಿಗೆಗೆ ಮಾದರಿಯಾಗುವಂತಿರಬೇಕು:

ವಿರೋಧಪಕ್ಷ ಹಾಗೂ ಆಡಳಿತ ಪಕ್ಷದಲ್ಲಿ ಕೆಲಸ ಮಾಡಿದವರು ಒಳ್ಳೆಯ ಶಾಸಕರಾಗಬಹುದು. ಒಟ್ಟು ಪ್ರಜಾಪ್ರಭುತ್ವದ ಆಯಾಮಗಳು ತಿಳಿಯುತ್ತದೆ. ಕರ್ನಾಟಕ ಪರಂಪರೆ ನಾವೆಲ್ಲರೂ ಉಳಿಸಿಕೊಂಡು ಹೋಗಲು ಕಾಫಿ ಟೇಬಲ್ ಬುಕ್ ಮಾರ್ಗದರ್ಶನ ನೀಡಲಿದೆ. ಪತ್ರಿಕಾ ರಂಗಕ್ಕೂ ರಾಜಕಾರಣಿಗಳಿಗೂ ಅವಿನಾಭಾವ ಸಂಬಂಧ. ನಮ್ಮಿಬ್ಬರಿಗೂ ನಮ್ಮದೇ ಆದ ಮೌಲ್ಯಗಳಿದ್ದು, ಇಬ್ಬರೂ ಪರಸ್ಪರ ಅವಲಂಬಿತರಾಗಿದ್ದೇವೆ. ನಮ್ಮ ನಡವಳಿಕೆ ಮುಂದಿನ ಪೀಳಿಗೆಗೆ ಮಾದರಿಯಾಗುವಂತಿರಬೇಕು ಎಂದರು.

ವಿಧಾನಸಭಾಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ, ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ, ವಿಜಯ ಕರ್ನಾಟಕದ ಸಂಪಾದಕ ಸುದರ್ಶನ್ ಚನ್ನಂಗಿಹಳ್ಳಿ ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

See also  ಚಿಕ್ಕಬಳ್ಳಾಪುರ: ಶಿಡ್ಲಘಟ್ಟ ಪ್ರವೇಶಿಸಿದ ಎಚ್ ಡಿ ಕೆ ನೇತೃತ್ವದ 'ಪಂಚರತ್ನ ಯಾತ್ರೆ'
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published. Required fields are marked *

1616

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು