ಬೆಳಗಾವಿ: ಜಿಲ್ಲೆಯ ಮಾರಿಹಾಳ ಪೊಲೀಸ್ ಠಾಣಾ ವ್ಯಾಪ್ತಿಯ ಜಮೀನಿನಲ್ಲಿ ಮಂಗಳವಾರ ತರಬೇತಿ ವಿಮಾನವೊಂದು ತಾಂತ್ರಿಕ ದೋಷದಿಂದ ತುರ್ತು ಭೂಸ್ಪರ್ಶ ಮಾಡಿದೆ.
ತರಬೇತಿ ವಿಮಾನ ವಿಟಿ-ಆರ್ಬಿಎಫ್ ರೆಡ್ಬರ್ಡ್ ಇನ್ಸ್ಟಿಟ್ಯೂಟ್ಗೆ ಸೇರಿದ್ದು, ಬೆಳಗಾವಿಯ ಸಾಂಬ್ರಾ ವಿಮಾನ ನಿಲ್ದಾಣದಿಂದ ಟೇಕ್ ಆಫ್ ಆಗಿದ್ದು, ನಿತ್ಯದ ಕಾರ್ಯಾಚರಣೆಯಲ್ಲಿತ್ತು. ಮೂಲಗಳ ಪ್ರಕಾರ ಪೈಲಟ್ ಸೇರಿದಂತೆ ಇಬ್ಬರು ವಿಮಾನದಲ್ಲಿದ್ದರು. ಪೈಲಟ್ಗೆ ಸಣ್ಣಪುಟ್ಟ ಗಾಯಗಳಾಗಿವೆ.
ಬೆಳಗಾವಿ ಜಿಲ್ಲಾ ಅಗ್ನಿಶಾಮಕ ಅಧಿಕಾರಿ ಶಶಿಧರ್ ನೀಲಗಾರ್ ಮಾತನಾಡಿ, ಬೆಳಗ್ಗೆ 9.40ಕ್ಕೆ ಘಟನೆ ನಡೆದಿದ್ದು, ವಿಮಾನ ನಿಲ್ದಾಣದ ಅಧಿಕಾರಿಗಳಿಗೆ ಮಾಹಿತಿ ನೀಡಿದ ಕೂಡಲೇ ನೀರಿನ ಟ್ಯಾಂಕರ್ ಮತ್ತು ರಕ್ಷಣಾ ತಂಡದೊಂದಿಗೆ ಸ್ಥಳಕ್ಕೆ ಧಾವಿಸಿದ್ದೇವೆ. ಪೈಲಟ್ ಸುರಕ್ಷಿತವಾಗಿದ್ದಾರೆ ಮತ್ತು ಅವರನ್ನು ಆಸ್ಪತ್ರೆಗೆ ಕಳುಹಿಸಲಾಗಿದೆ” ಎಂದರು. ತಾಂತ್ರಿಕ ತಂಡ ಆಗಮಿಸಿದ ಬಳಿಕ ತುರ್ತು ಲ್ಯಾಂಡಿಂಗ್ಗೆ ಕಾರಣ ಪತ್ತೆಹಚ್ಚಲಾಗುತ್ತದೆ ಎಂದಿದ್ದಾರೆ.