ಹುಬ್ಬಳ್ಳಿ : ನಾನು ಕಾಡಿಬೇಡಿ, ಟೈಯರ್ ಸುಟ್ಟು ಮಂತ್ರಿ ಆಗುವ ಆಸೆ ನನಗಿಲ್ಲ ಎಂದು ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಹೇಳಿದ್ದಾರೆ.
ಹುಬ್ಬಳ್ಳಿಯಲ್ಲಿ ಮಾತನಾಡಿದ ಅವರು, ನಮ್ಮ ಬೇಡಿಕೆ ಸಿಎಂ ಬದಲಾವಣೆ ಆಗಬೇಕು ಅಂತ ಇತ್ತು. ಈಗ ನಾಯಕತ್ವ ಬದಲಾವಣೆ ಆಗಿದೆ. ಒಬ್ಬ ನಾಯಕ ತನ್ನ ಛಾಪು ಇಟ್ಟುಕೊಳ್ಳಬೇಕು. ಸಿಎಂ ಬೊಮ್ಮಾಯಿ ಅವರು ಯಡಿಯೂರಪ್ಪನವರ ನೆರಳು ಆಗಲ್ಲ ಎನ್ನುವ ನಂಬಿಕೆ ನನಗಿದೆ,ಅವರಿಗೆ ಸ್ವಲ್ಪ ಕಾಲಾವಕಾಶ ಕೊಡಬೇಕು ಎಂದು ಹೇಳಿದರು.
ಬೊಮ್ಮಾಯಿ ನೇತೃತ್ವದಲ್ಲಿ ಚುನಾವಣೆ ಹೋಗುವ ಬಗ್ಗೆ ಹೈಕಮಾಂಡ್ ತೀರ್ಮಾನ ಕೈಗೊಳ್ಳಲಿದೆ. ಹಿಂದೆ ಮೂರು ಜನ ಡಿಸಿಎಂ ಆಗಿದ್ದರು. ಅವರು ನಮ್ಮ ನೇತೃತ್ವದಲ್ಲಿ ಚುನಾವಣೆ ನಡೆಯುತ್ತೆ ಅಂತಿದ್ದರು. ಈಗ ಡಿಸಿಎಂ ಸ್ಥಾನವೇ ಇಲ್ಲ ಎಂದು ವ್ಯಂಗ್ಯವಾಡಿದರು.