ಹುಬ್ಬಳ್ಳಿ: ಹುಬ್ಬಳ್ಳಿ-ಮೈಸೂರು ನಡುವೆ ಸಂಚರಿಸುವ ಹಂಪಿ ಎಕ್ಸ್‌ಪ್ರೆಸ್ ರೈಲಿನ ಎರಡೂ ಮಾರ್ಗದಲ್ಲಿ ಡಿ. 13 ಹಾಗೂ 14ರಂದು ಬದಲಾವಣೆ ಮಾಡಲಾಗಿದೆ ಎಂದು ನೈರುತ್ಯ ರೈಲ್ವೆ ತಿಳಿಸಿದೆ.
ಈ ರೈಲು ಹುಬ್ಬಳ್ಳಿಯಿಂದ ತೆರಳುವಾಗ ಬಳ್ಳಾರಿ, ರಾಯದುರ್ಗ, ಚಿಕ್ಕಜಾಜೂರ, ಅರಸೀಕೆರೆ, ತುಮಕೂರು, ಯಶವಂತಪುರ ಮಾರ್ಗದಲ್ಲಿ ತೆರಳಲಿದೆ. ಮೊದಲು ಗುಂತಕಲ್, ಧರ್ಮಾವರಂ, ಪೆನುಕೊಂಡ, ಹಿಂದುಪುರ, ಗೌರಿಬಿದನೂರ, ದೊಡ್ಡಬಳ್ಳಾಪುರ ಮತ್ತು ಯಲಹಂಕ ಮಾರ್ಗದ ಮೂಲಕ ತೆರಳುತ್ತಿತ್ತು.
ವಿಸ್ತರಣೆ: ವಾಸ್ಕೋಡಗಾಮ ಹಾಗೂ ಜೈಸಿದಿಹ್ ಎಕ್ಸ್‌ಪ್ರೆಸ್ ರೈಲಿನ ಸಂಚಾರವನ್ನು 2022ರ ಜನವರಿ 28ರ ತನಕ ಹಾಗೂ ಜೈಸಿದಿಯ್‌ನಿಂದ-ವಾಸ್ಕೋಡಗಾಮಕ್ಕೆ ತೆರಳುವ ಸಂಚಾರವನ್ನು ಜ. 31ರ ವರೆಗೆ ವಿಸ್ತರಣೆ ಮಾಡಲಾಗಿದೆ.
ಈ ರೈಲು ಜಾರ್ಖಂಡ್, ಪಶ್ಚಿಮ ಬಂಗಾಳ, ಒಡಿಶಾ, ಛತ್ತೀಸಗಡ, ಮಹಾರಾಷ್ಟ್ರ, ತೆಲಂಗಾಣ, ಆಂಧ್ರ, ಕರ್ನಾಟಕ ಮತ್ತು ಗೋವಾ ರಾಜ್ಯಗಳ ಮಾರ್ಗಗಳಲ್ಲಿ ತೆರಳಲಿದೆ. ರಾಜ್ಯದಲ್ಲಿ ರಾಯಚೂರು, ಬಳ್ಳಾರಿ, ತೋರಣಗಲ್ಲು, ಹೊಸಪೇಟೆ, ಕೊಪ್ಪಳ, ಗದಗ, ಹುಬ್ಬಳ್ಳಿ, ಧಾರವಾಡ, ಲೋಂಡಾ, ಕ್ಯಾಸಲ್ ರಾಕ್ ನಿಲ್ದಾಣಗಳಲ್ಲಿ ನಿಲುಗಡೆಯಾಗಲಿದೆ.