ಹುಬ್ಬಳ್ಳಿ: ರಾಷ್ಟ್ರ ಭಕ್ತರ ಪ್ರತಿಮೆ ಭಗ್ನಗೊಳಿಸಿರುವುದು ದೇಶಕ್ಕೆ ಶೋಭೆತರುವಂತಹದಲ್ಲ. ಆದರಿಂದ ಈ ಕೃತ್ಯವ್ಯಸಗಿದ ದೇಶ ದ್ರೋಹಿಗಳ ವಿರುದ್ಧ ದೀರ್ಘಾವಧಿಯ ಕಠಿಣ ಕ್ರಮ ತೆಗೆದುಕೊಳ್ಳಲು ಪೊಲೀಸರಿಗೆ ಸೂಚಿಸಲಾಗಿದೆ ಎಂದು ಸಿಎಂ ಬಸವರಾಜ ಬೊಮ್ಮಾಯಿ ಹೇಳಿದರು.
ನಗರದಲ್ಲಿ ಶನಿವಾರ ಸುದ್ದಿಗಾರೊಂದಿಗೆ ಮಾತನಾಡಿದ ಅವರು, ಬೆಳಗಾವಿಯಲ್ಲಿ ದೇಶಭಕ್ತರ ಪ್ರತಿಮೆಗೆ, ಸಾರ್ವಜನಿಕ ವಸ್ತುಗಳಿಗೆ,ಸರ್ಕಾರದ ಆಸ್ತಿ ಮತ್ತು ಕಾನೂನು ಸುವ್ಯವಸ್ಥೆಗೆ ದಕ್ಕೆಯನ್ನುಂಟು ಮಾಡಿದ ಪುಂಡರನ್ನು ಈಗಾಗಲೇ ಬಂಧಿಸಲಾಗಿದ್ದು, ಪುನಃ ಈ ರೀತಿ ಯಾಗದಂತೆ ನೋಡಿಕೊಳ್ಳಲು ಗೃಹ ಸಚಿವರಿಗೆ ಕಠಿಣ ಕ್ರಮ ತೆಗೆದುಕೊಳ್ಳಲು ಸೂಚಿಸಲಾಗಿದೆ ಎಂದರು.
ದೇಶ ಭಕ್ತರು ಎಲ್ಲ ಸಮುದಾಯಕ್ಕೆ ಸೇರಿದವರು. ದೇಶಕ್ಕಾಗಿ ಜೀವ ತ್ಯಾಗ ಮಾಡಿದವರು ಅಂಥವರ ಪ್ರತಿಮೆ ಮಾಡಿರುವುದು ಅವರಿಗೆ ಗೌರವ ಸಲ್ಲಿಸುವ ಉದ್ದೇಶಕ್ಕಾಗಿ. ಆದರೆ ಅವರ ಮೂರ್ತಿ ಬಗ್ನ ಮಾಡುವ ಮುಖಾಂತರ ಸಮಾಜದಲ್ಲಿ ಕ್ಷೋಭೆ ಉಂಟು ಮಾಡುತ್ತಿರುವ ಕೇಲವು ಪುಂಡರನ್ನು ಸದೆ ಬಡೆಯುತ್ತೇವೆ ಎಂದು ತಿಳಿಸಿದರು.
ಈ ಕೃತ್ಯಕ್ಕೆ ಅಧಿವೇಶ ಮೂಲ ಕಾರಣ ಎಂಬ ಪ್ರಶ್ನೆಗೆ, ಅಧಿವೇಶನ ಸಮೇತವಾಗಿ ಹಲವಾರು ಕಾರಣಗಳಿದ್ದು ಎಲ್ಲದರ ಕುರಿತು ತನಿಖೆ ನಡೆಯಲಿದೆ ಎಂದರು.