ಹುಬ್ಬಳ್ಳಿ: ಸಿಮ್ ಅಪಡೇಟ್ ಮಾಡುವುದಾಗಿ ನಂಬಿಸಿ, ನಗರದ ವ್ಯಕ್ತಿಗೆ 1.68 ಲಕ್ಷ ರೂ ವಂಚಿಸಿರುವ ಘಟನೆ ಬೆಳಕಿಗೆ ಬಂದಿದೆ.
ಕೇಶ್ವಾಪೂರದ ಮುರಿಗೇಶ ಎನ್.ಎಸ್. ಎಂಬುವರಿಗೆ ವಂಚಿಸಲಾಗಿದೆ. ದೂರುದಾರರ ಮೊಬೈಲ್‌ಗೆ ಅಪರಿಚಿತರು ಸಿಮ್ ಬ್ಲಾಕ್ ಆಗಿದೆ ಎಂದು ಸಂದೇಶ ಕಳುಹಿಸಿದ್ದಾರೆ. ಇದನ್ನು ನಂಬಿ ಸಂದೇಶದಲ್ಲಿನ ನಂಬರ್‌ಗೆ ಕರೆ ಮಾಡಿದ ದೂರುದಾರನಿಗೆ ಸಿಮ್ ಅಪಡೇಟ್ ಮಾಡಬೇಕು. ಕೂಡಲೇ ಮೊಬೈಲ್‌ನಲ್ಲಿ ಎನಿ ಡೆಸ್ಕ್ ಆ್ಯಪ್ ಡೌನ್‌ಲೋಡ್ ಮಾಡಿಕೊಂಡು 10 ರೂ. ಹಣವನ್ನು ಹಾಕಲು ಹೇಳಿದ್ದಾರೆ.
ನಂತರ ವಿವಿಧ ನಂಬರುಗಳಿಂದ ಕರೆ ಮಾಡಿ ದೂರುದಾರರ ಖಾತೆಯಲ್ಲಿನ 1.68 ಲಕ್ಷ ಹಣವನ್ನು ಆನ್‌ಲೈನ್ ಮೂಲಕ ವರ್ಗಾಯಿಸಿಕೊಂಡು ಮೋಸ ಮಾಡಿದ್ದಾರೆ. ಈ ಕುರಿತು ಹುಬ್ಬಳ್ಳಿ-ಧಾರವಾಡ ಸೈಬರ್ ಕ್ರೈಂ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.