ಹುಬ್ಬಳ್ಳಿ: ಒಂದು ಕಡೆ ಸರ್ಕಾರ ವಿಕೇಂಡ್ ಕರ್ಫ್ಯೂ ಜಾರಿ ಮಾಡಿದೆ. ಇನ್ನೊಂದೆಡೆ ಜನರು ಬಸ್ಸುಗಳು ಇಲ್ಲದೆ ಪರದಾಡುತ್ತಿದ್ದಾರೆ.
ಜನ ಹೀಗೆ ಬಸ್ ಗಾಗಿ ಕಾಯುತ್ತಿರುವ ದೃಶ್ಯಗಳು ಕಂಡು ಬಂದಿದ್ದು ಹುಬ್ಬಳ್ಳಿಯ ಚನ್ನಮ್ಮ ಸರ್ಕಲ್ ನಲ್ಲಿ ಬೇರೆ ಬೇರೆ ಊರುಗಳಿಗೆ, ಜಿಲ್ಲೆಗಳಿಗೆ ತೆರಳುವ ಪ್ರಯಾಣಿಕರು ಬಸ್ ಗಾಗಿ ಪರದಾಡುವಂತ ಪರಿಸ್ಥಿತಿ ಎದುರಾಗಿದೆ.
ವಿಕೇಂಡ್ ಕರ್ಪ್ಯೂ ಹಿನ್ನೆಲೆಯಲ್ಲಿ, ಬಸ್ ಗಳ ಓಡಾಟವನ್ನು ವಾಯವ್ಯ ಸಾರಿಗೆ ಸಂಸ್ಥೆ ಕಡಿಮೆ ಮಾಡಿದೆ. ಸಮಯಕ್ಕೆ ಸರಿಯಾಗಿ ಬಸ್ ಸಿಗದೆ, ಜನ ಸುಸ್ತಾಗಿದ್ದಾರೆ.
ಈ ರೀತಿ ಪದೇ ಪದೇ ಕರ್ಪ್ಯೂ ಮಾಡಿದ್ರೆ ಕೂಲಿ ಮಾಡುವವರು ಏನು ಮಾಡಬೇಕು. ಬಂದ್ ಮಾಡುವ ಹಾಗಿದ್ದರೆ ಎಲ್ಲಾ ಬಂದ್ ಮಾಡಿ. ಅದು ಬಿಟ್ಟು ಅರ್ಧ ಓಪನ್ ಮಾಡಿ ಅರ್ಧ ಬಂದ್ ಮಾಡಬೇಡಿ ಎಂದು ಸರ್ಕಾರದ ನಿಯಮಕ್ಕೆ ಸಾರ್ವಜನಿಕರ ಆಕ್ರೋಶ ವ್ಯಕ್ತಪಡಿಸಿದ್ದಾರೆ.