News Kannada
Saturday, October 01 2022

ಹುಬ್ಬಳ್ಳಿ-ಧಾರವಾಡ

ದೆಹಲಿ: ಏ. 30 ರಂದು ಚೀಫ್ ಮಿನಿಸ್ಟರ್ ಮತ್ತು ಚೀಫ್ ಗೆಸ್ಟಿಸ್ ಸಮ್ಮೇಳನ‌ - 1 min read

Photo Credit :

 ಹುಬ್ಬಳ್ಳಿ: ಏ. 30 ರಂದು ಚೀಫ್ ಮಿನಿಸ್ಟರ್ ಮತ್ತು ಚೀಫ್ ಗೆಸ್ಟಿಸ್ ಸಮ್ಮೇಳನ‌ವಿರುವ ಕಾರಣದಿಂದಾಗಿ,  ಏ.29 ರಂದು ದೆಹಲಿಗೆ ಹೋಗುತ್ತಿದ್ದೇನೆ ಎಂದು ಸಿಎಂ ಬಸವರಾಜ್‌ ಬೊಮ್ಮಾಯಿ ಹೇಳಿದ್ದಾರೆ. ಪ್ರಧಾನಿ ಮಂತ್ರಿ ಉದ್ಘಾಟಿಸಲಿದ್ದು, ಹಲವಾರು ಕಾನೂನು ವಿಚಾರ ಬಗ್ಗೆ ಚರ್ಚಿಸಲಾಗುತ್ತದೆ ಎಂದು ಸಿಎಂ ಬಸವರಾಜ ಬೊಮ್ಮಾಯಿ ಹೇಳಿದರು.

ರಾಜ್ಯದಲ್ಲಿ ಅಷ್ಟೇ ಅಲ್ಲ ದೇಶದಲ್ಲಿಯೂ ಕೋಮುಗಲಭೆ ಸೃಷ್ಟಿಸುವ ಪ್ರಚೋದನಾ ಭಾಷಣಗಳ ಕೆಲವರು ಮಾಡುತ್ತಿದ್ದಾರೆ. ವಿಶೇಷವಾಗಿ ಸಾಮಾಜಿಕ‌ ಜಾಲತಾಣದಲ್ಲಿ ಹೆಚ್ಚಾಗಿದೆ. ಸುಪ್ರೀಂ ಕೋರ್ಟ್ ನಿರ್ದೇಶನದಂತೆ ಸಮಿತಿ ರಚನೆಯ ‌ಮಾಡುತ್ತೇವೆ.‌ ಅದರ ಆದೇಶದಂತೆ ನಿಯಮಗಳನ್ನು ಪಾಲನೆ‌ ಮಾಡುತ್ತೇವೆ ಎಂದರು.

ಕೋವಿಡ್ ನಾಲ್ಕನೇ ಅಲೆ ಇನ್ನು ಬಂದಿಲ್ಲ. ರಾಜ್ಯದಲ್ಲಿ ಇತ್ತೀಚೆಗೆ ಸ್ವಲ್ಪ ಹೆಚ್ಚಾಗಿದೆ. ಅದನ್ನು ಗಮನಿಸುತ್ತಿದ್ದೇವೆ. ಮುಂಜಾಗ್ರತಾ ಕ್ರಮ ಕೈಗೊಳ್ಳಲಾಗುತ್ತಿದೆ. ಯೂರೋಪ್ ಮತ್ತಿತರ ದೇಶಗಳಲ್ಲಿ ಲಸಿಕೆ ಪಡೆಯದವರಲ್ಲಿ ಸೋಂಕು ಕಾಣಿಸಿಕೊಂಡಿದೆ. ರಾಜ್ಯದಲ್ಲಿ ಶೇ. 98 ರಷ್ಟು ಜನರು ಎರಡು ಡೋಸ್ ಲಸಿಕೆ ಪಡೆದಿದ್ದಾರೆ.

ಬೂಸ್ಟರ್ ಮತ್ತು ಮುಂಜಾಗೃತ ಲಸಿಕೆ ಇನ್ನಷ್ಟು ಜನರಿಗೆ ನೀಡಬೇಕಾಗಿದೆ. ಇತ್ತೀಚೆಗೆ ಕೇಂದ್ರ ಸರ್ಕಾರ 6 ವರ್ಷದಿಂದ 12 ವರ್ಷದ ಮಕ್ಕಳಿಗೆ ಲಸಿಕೆ‌ ಆರಂಭಿಸಿದೆ. ಅದರ ಪ್ರಕಾರ ರಾಜ್ಯದ ಮಕ್ಕಳಿಗೂ ನೀಡಲು ತಯಾರಿ ನಡೆಸಲಾಗಿದೆ. ಕೊರೋನಾ ನಿಯಮಗಳಾದ ಸಾಮಾಜಿಕ ಅಂತರ ಮತ್ತು ಮಾಸ್ಕ್ ಧರಿಸಲು ಕ್ರಮ ಕೈಗೊಳ್ಳಲಾಗುತ್ತಿದೆ. ಕೊರೋನಾ ಪರೀಕ್ಷೆ ಜಾಸ್ತಿ ಮಾಡಲಾಗುತ್ತಿದೆ. ಅದರಲ್ಲಿ ಸೋಂಕು ಕಂಡು ಬಂದವರಿಗೆ ಜಿನೋಮ್ ಪರೀಕ್ಷೆ‌ ಮಾಡಲು ತೀರ್ಮಾನ ಮಾಡಲಾಗಿದೆ ಎಂದು ತಿಳಿಸಿದರು.

ಸುದೀಪ್ ಹೇಳಿದ್ದು ಸರಿ ಇದೆ:

ರಾಜ್ಯಗಳು ಭಾಷಾವಾರು ಪ್ರಾಂತ್ಯಗಳಾದ ಮೇಲೆ ಮಾತೃ ಭಾಷೆಗೆ ಹೆಚ್ಚು ಮಹತ್ವ ನೀಡಲಾಗುತ್ತದೆ. ಆ ರಾಜ್ಯದಲ್ಲಿ ಅದೇ ಸಾರ್ವಭೌಮವಾಗಿದೆ. ಅದೇ ವಿಚಾರ ಸುದೀಪ್ ಹೇಳಿದ್ದಾರೆ. ಇದಕ್ಕೆ ಎಲ್ಲರು ಗೌರವಿಸಬೇಕು ಎಂದು ಹೇಳಿದರು.

See also  ನಾವು ಮಾತನಾಡಬಾರದು ನಮ್ಮ ಕೆಲಸ ಮಾತನಾಡಬೇಕು : ಸಿಎಂ ಬಸವರಾಜ್ ಬೊಮ್ಮಾಯಿ
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published.

12792
NewsKannada

Read More Articles
Subscribe to our Brand New YouTube Channel

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು